ಉತ್ತರ ಪ್ರದೇಶ: ಗೋರಕ್ಷಕರಿಗೆ ಹೆದರಿ ರೈತರಿಂದ ದನಗಳ ಮಾರಾಟ!

0
542

ಹೊಸದಿಲ್ಲಿ: ಗೋರಕ್ಷಕರಿಗೆ ಹೆದರಿ ಉತ್ತರಪ್ರದೇಶದ ಗ್ರಾಮಸ್ಥರು ದನಗಳನ್ನು ಮಾರುತ್ತಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಸಮೀಪದ ಸೋನ್‍ದತ್ ಗ್ರಾಮದ ರೈತರು ದನಗಳನ್ನು ಮಾರುತ್ತಿದ್ದಾರೆ. ಇಲ್ಲಿ ಹೆಚ್ಚು ಮುಸ್ಲಿಮರಿದ್ದು ಪಶುಸಂಗೋಪನೆ ಮಾಡುತ್ತಾರೆ. ಆದರೆ  ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದಿನಾಲೂ ಇವರು ಬೆದರಿಕೆ ಎದುರಿಸುತ್ತಿದ್ದಾರೆ. ಆದ್ದರಿಂದ ಹಲವರು ದನಗಳನ್ನು  ಮಾರುತ್ತಿದ್ದಾರೆ.

ಯಾವುದಾದರೂ ಅಗತ್ಯಕ್ಕಾಗಿ ದನಗಳನ್ನು ಹೊರಗೆಲ್ಲೂ ಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಗೋರಕ್ಷಣೆಯೆನ್ನುವ  ಗೂಂಡಾಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಮೀರತ್‍ನ ಗ್ರಾಮಸ್ಥರು ಹೇಳಿದ್ದಾರೆ. ಹಲವಾರು ಮಂದಿ ಈಗಾಗಲೇ ದನಗಳನ್ನು  ಮಾರಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚು ದನಗಳನ್ನು ಮಾರಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ  ಮಾಡಿವೆ.