ಪ್ರಿಯಾಂಕಾರ ಜೊತೆ ಸೆಲ್ಫಿ ತೆಗೆಸಿಕೊಂಡ ಮಹಿಳಾ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾದ ಯುಪಿ ಸರಕಾರ

0
504

ಸನ್ಮಾರ್ಗ ವಾರ್ತೆ

ಲಕ್ನೊ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ಼ಯವರ ಜೊತೆ ಸೆಲ್ಫಿ ತೆಗೆಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲು ಉತ್ತರಪ್ರದೇಶ ಸರಕಾರ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತನಾದ ಶುಚೀಕರಣ ಕಾರ್ಮಿಕನ ಕುಟುಂಬವನ್ನು ಭೇಟಿಯಾಗಲು ಹೋಗುವ ವೇಳೆ ಲಕ್ನೊ-ಆಗ್ರಾ ಎಕ್ಸಪ್ರೆಸ್ ಹೈವೆಯ ಟೋಲ್ ಫ್ಲಾಝದಲ್ಲಿ ಪ್ರಿಯಾಂಕರನ್ನು ತಡೆಯಲಾಗಿತ್ತು. ಈ ವೇಳೆ ಕೆಲವು ಮಹಿಳಾ ಅಧಿಕಾರಿಗಳು ಪ್ರಿಯಾಂಕರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದರು.

ಪೊಲೀಸರು ಪ್ರಿಯಾಂಕರ ಜೊತೆ ಸೆಲ್ಫಿ ತೆಗೆಯುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ ಈ ಚಿತ್ರವನ್ನು ಟ್ವೀಟ್ ಮಾಡಿದ್ದರು. ಇದರೊಂದಿಗೆ ಪೊಲೀಸರ ವಿರುದ್ಧ ಕ್ರಮಕ್ಕೆ ಲಕ್ನೊ ಪೊಲೀಸ್ ಕಮಿಶನರ್ ಡಿಕೆ. ಠಾಕೂರ್ ಸೂಚನೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಿನ್ನೆ ಮೊದಲು ತಡೆದರು ನಂತರ ಮೃತರ ಕುಟುಂಬವನ್ನು ಭೇಟಿಯಾಗಲು ಅನುಮತಿ ನೀಡಲಾಗಿತ್ತು. ತನ್ನನ್ನು ತಡೆದುದನ್ನು ಪ್ರಿಯಾಂಕ ಟೀಕಿಸಿದರು. ನಾನು ಮನೆಯಲ್ಲಿ ಕುಳಿತರೆ ಸಮಸ್ಯೆ ಇಲ್ಲ. ನನ್ನ ಕಚೇರಿಗೆ ಹೋಗುವುದಾದರೆ ಸಮಸ್ಯೆ ಇಲ್ಲ. ಆದರೆ ಬೇರೆಲ್ಲಿಗೂ ಹೋದರೆ ಇವರು ತಮಾಷೆ ಮುಂದುವರಿಸುತ್ತಾರೆ. ಸಂಪೂರ್ಣ ವ್ಯಂಗ್ಯ ನಡೆಯುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.