ದೋಹ,ಮೇ 9: ಇಸ್ರೇಲಿನ ಅತಿಕ್ರಮಣ ಒಳಗಾಗುತ್ತಿರುವ ಗಾಝಕ್ಕೆ 480 ಮಿಲಿಯನ್ ಡಾಲರ್ ತುರ್ತು ಸಹಾಯವನ್ನು ಕತರ್ ಘೋಷಿಸಿದೆ. ಆರೋಗ್ಯ, ಶಿಕ್ಷಣ ಕಾರ್ಯಕ್ರಮಗಳಿಗಾಗಿ 300 ಮಿಲಿಯನ್ ಡಾಲರ್, ಗಾಝದ ಈಗಿನ ಸಮಸ್ಯೆ ಪರಿಹಾರಕ್ಕೆ ತುರ್ತು ಸಹಾಯ ಎಂಬ ನೆಲೆಯಲ್ಲಿ ಫೆಲಸ್ತೀನ್ ಅಥಾರಿಟಿಗೆ 180 ಮಿಲಿಯನ್ ಡಾಲರ್ ನೀಡಲಾಗುವುದೆಂದು ಕತರ್ ವಿದೇಶ ಸಚಿವ ತಿಳಿಸಿದರು. ವಿಶ್ವಸಂಸ್ಥೆಯ ಸಹಾಯ ಯೋಜನೆಗಳಿಗೆ, ವಿದ್ಯುತ್ ಸಹಾಯಗಳಿಗೆ 180 ಮಿಲಿಯನ್ ಉಪಯೋಗಿಸಲಾಗುವುದು, ಕತರ್ನ ಸಹಾಯಕ್ಕಾಗಿ ಹಮಾಸ್ ನಾಯಕ ಇಸ್ಮಾಯೀಲ್ ಹನಿಯ್ಯ ಕೃತಜ್ಞತೆ ಸಲ್ಲಿಸಿದರು. ಈ ಹಿಂದೆ ಅಮೆರಿಕ ಫೆಲಸ್ತೀನ್ ಅಥಾರಿಟಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಿತ್ತು. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕತರ್ ಮುಂದೆ ಬಂದಿದೆ.












