ರಾಮ ಮಂದಿರ ನಿರ್ಮಾಣವಾದ ಕೂಡಲೇ ಕೊರೋನ ನಾಶವಾಗುತ್ತದೆ ಎಂದ ಬಿಜೆಪಿ ಸಂಸದೆ- ವಿಡಿಯೋ ವೈರಲ್

0
529

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.29:ರಾಜಸ್ಥಾನದ ದೌಸಾ ಲೋಕಸಭಾ ಕ್ಷೇತ್ರದ ಸಂಸದೆ ಜಸ್ಕೌರ್‌ ಮೀನಾ ಕೋವಿಡ್ ಬಿಕ್ಕಟ್ಟಿಗೆ ರಾಮ ಮಂದಿರ ನಿರ್ಮಾಣವೇ ಪರಿಹಾರ ಎಂದು ಹೇಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ನಾವು ಆಧ್ಯಾತ್ಮಿಕ ಶಕ್ತಿಗಳನ್ನು ನಂಬುವವರು ಮತ್ತು ಅನುಸರಿಸುವವರು. ರಾಮ ಮಂದಿರ ನಿರ್ಮಾಣವಾದ ತಕ್ಷಣ ಕೊರೋನ ವೈರಸ್ ನಾಶವಾಗಲಿದೆ” ಎಂದು ಅವರು ಹೇಳಿದರು.

ಈ ಹಿಂದೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್‌ರವರು ‘ಭಾಭಿ ಜಿ ಪಾಪಾಡ್’ ಅನ್ನು ಬಿಡುಗಡೆಗೊಳಿಸಿ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳನ್ನು ಹೊಂದಿದೆ ಮತ್ತು ಕೊರೋನವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಮೀನಾ ಅವರ ಹೇಳಿಕೆ ಬಂದಿದೆ.

ಈ ಹಿಂದೆ ಅಸ್ಸಾಂ ಬಿಜೆಪಿ ಶಾಸಕ ಸುಮನ್ ಹರಿಪ್ರಿಯಾ ಅವರು ಗೋಬರ್ ಮತ್ತು ಗೋಮೂತ್ರಾ (ಗೋವಿನ ಸಗಣಿ ಮತ್ತು ಗೋ ಮೂತ್ರ)ಕೋವಿಡ್ -19 ಗೆ ಸಂಭಾವ್ಯ ಪರಿಹಾರವಾಗಬಹುದು ಎಂದು ಹೇಳಿದ್ದರು. ಅದೇ ರೀತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೊರೋನವೈರಸ್ ಹೋರಾಟಕ್ಕೆ ಯೋಗವು ಸಂಭಾವ್ಯ ಪರಿಹಾರವಾಗಬಹುದು ಎಂದು ಹೇಳಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.