ಮಧ್ಯಪ್ರದೇಶದ: ಸ್ವಘೋಷಿತ ಗೋರಕ್ಷಕರನ್ನು ಶಿಕ್ಷಿಸಲು ಕಾನೂನು ತಿದ್ದುಪಡಿ; ಮೊದಲ ಅಪರಾಧಕ್ಕೆ ಮೂರು ವರ್ಷ ಜೈಲು

0
1188

ಹೊಸದಿಲ್ಲಿ, ಜೂ. 27: ಮಧ್ಯಪ್ರದೇಶ ಸರಕಾರ ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ದಾಳಿಯ ವಿರುದ್ಧ ಕಾನೂನು ತಿದ್ದುಪಡಿಗೆ ಮುಂದಾಗಿದೆ. ಗೋಹತ್ಯೆ ನಿಷೇಧ ಕಾನೂನು ಮಧ್ಯಪ್ರದೇಶದಲ್ಲಿ ಈಗಾಗಲೇ ಜಾರಿಯಲ್ಲಿದೆ. ಇದೀಗ ಗೋರಕ್ಷಣೆಯ ಹೆಸರಿನಲ್ಲಿ ಅಕ್ರಮ ನಡೆಸುವುದು ಅಪರಾಧವೆಂಬ ಪರಿಚ್ಛೇದವನ್ನು ಆ ಕಾಯ್ದೆಗೆ ಸೇರ್ಪಡೆಗೊಳಿಸಿ ಸಚಿವ ಸಂಫುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ತಿಳಿದು ಬಂದಿದೆ. ಕಾನೂನಿಗೆ ಅಂಗೀಕಾರ ಸಿಕ್ಕಿದರೆ ಕಾಂಗ್ರೆಸ್ ಆಳ್ವಿಕೆಯ ಮಧ್ಯಪ್ರದೇಶವು ಗೋಜಾಗೃತಿಯ ಹೆಸರಿನಲ್ಲಿ ನಡೆಯುವ ದಾಳಿಗಳ ವಿರುದ್ಧ ಕಾನೂನು ರೂಪಿಸುವ ಮೊದಲ ರಾಜ್ಯ ಎನಿಸಿಕೊಳ್ಳಲಿದೆ. ಮೊದಲ ಬಾರಿ ಅಪರಾಧ ಎಸಗಿ ಸಿಕ್ಕಿಬಿದ್ದರೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಅಪರಾಧವನ್ನು ಪುನರಾವರ್ತಿಸಿದರೆ ಐದು ವರ್ಷ ಜೈಲು ಶಿಕ್ಷೆ ಆಗಲಿದೆ.

ಗೋರಕ್ಷಣೆಯ ಹೆಸರಿನಲ್ಲಿ ಜನರ ಗುಂಪು ದಾಳಿ ಇತ್ಯಾದಿ ಅಕ್ರಮಗಳನ್ನು ತಡೆಯುವ ಉದ್ದೇಶಕ್ಕಾಗಿ 2018 ಜುಲೈಯಲ್ಲಿ ಸುಪ್ರೀಂಕೋರ್ಟು ಮಾರ್ಗಸೂಚಿಯನ್ನು ಹೊರಡಿಸಿತ್ತು. ಇದರ ಪ್ರಕಾರ ಕಾನೂನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸಿತ್ತು. ಇದೇ ಹೆಜ್ಜೆಯಲ್ಲಿ ಮಧ್ಯಪ್ರದೇಶ ಸರಕಾರ ಸಾಗುತ್ತಿದ್ದು ಕಾನೂನು ತಿದ್ದು ಪಡಿ ತರುತ್ತಿದೆ.