ಹೊಸ ಶೈಕ್ಷಣಿಕ ಕಾನೂನು ಪ್ರಸ್ತುತಪಡಿಸಿದ ಅಮೆರಿಕ : 3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಆತಂಕದಲ್ಲಿ

0
269

ಸನ್ಮಾರ್ಗ ವಾರ್ತೆ

ಅಮೆರಿಕ ಪ್ರಸ್ತುತಪಡಿಸಿರುವ ಹೊಸ ಮಸೂದೆಯು ಮೂರು ಲಕ್ಷ ಭಾರತೀಯ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿದೆ. ಒಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ ವರ್ಕ್ ಆಥರೈಸೇಶನ್ ಅವಕಾಶವನ್ನು ಇಲ್ಲದಂತೆ ಮಾಡುವ ಬಿಲ್ ಮಂಡಿಸುವುದರೊಂದಿಗೆ ಈ ವಿದ್ಯಾರ್ಥಿಗಳೆಲ್ಲ ಅಮೆರಿಕವನ್ನು ಬಿಡಬೇಕಾದೀತು ಎಂಬ ಭಯ ಕಾಡಿದೆ.

ಸೈನ್ಸ್ ಟೆಕ್ನಾಲಜಿ ಇಂಜಿನಿಯರಿಂಗ್ ಮ್ಯಾಥಮೆಟಿಕ್ಸ್ ವಿದ್ಯಾರ್ಥಿಗಳು ಪದವಿ ಪಡೆದ ಬಳಿಕ 3 ವರ್ಷಗಳವರೆಗೆ ಅಮೆರಿಕದಲ್ಲಿ ಇರಲು ಮತ್ತು ಕೆಲಸವನ್ನು ಹುಡುಕಲು ಆಪ್ಷನಲ್ ಪ್ರಾಕ್ಟಿಕಲ್ ಟ್ರೈನಿಂಗ್ ಯೋಜನೆಯು ಅವಕಾಶ ನೀಡುತ್ತಿತ್ತು. 2023 24ನೇ ಶೈಕ್ಷಣಿಕ ಅವಧಿಯಲ್ಲಿ ಅಮೆರಿಕದಲ್ಲಿ ಈ ವಿಭಾಗದಲ್ಲಿ ಕಲಿಯುತ್ತಿರುವ ಮೂರು ಲಕ್ಷ ವಿದ್ಯಾರ್ಥಿಗಳು ಇದ್ದಾರೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಈ ಯೋಜನೆ ರದ್ದಾಗಿ ಬಿಟ್ಟರೆ ಪದವಿಯ ಬೆನ್ನಿಗೆ ಅವರು ಭಾರತಕ್ಕೆ ಮರಳ ಬೇಕಾಗುತ್ತದೆ. ಅಮೆರಿಕದಲ್ಲಿ ಉಳಿದು ಉದ್ಯೋಗ ಹುಡುಕುವ ಅವಕಾಶ ಈ ಮೂಲಕ ಇಲ್ಲದಾಗುತ್ತದೆ.

ಅಮೆರಿಕದಲ್ಲಿ ಓರ್ವ ವಿದ್ಯಾರ್ಥಿಗೆ ಕಲಿಕೆಯ ವೇಳೆ ಒಂದು ವರ್ಷದಲ್ಲಿ ಸರಾಸರಿ 50 ಲಕ್ಷ ರೂಪಾಯಿ ಬೇಕಾಗುತ್ತದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಖರ್ಚು ಮಾಡಿ ಕಲಿತ ಬಳಿಕ ಅಲ್ಲಿಯೇ ಉದ್ಯೋಗ ಹುಡುಕುವ ಅವಕಾಶ ಅಲಭ್ಯವಾದರೆ ಅಲ್ಲಿಗೆ ಕಲಿಕೆಗೆ ಹೋಗುವ ವಿದ್ಯಾರ್ಥಿಗಳ ಆಸಕ್ತಿಯು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.