ಸನ್ಮಾರ್ಗ ವಾರ್ತೆ
ಕೇವಲ 49 ರಿಯಾಲ್‌ಗೆ ಪ್ರಯಾಣಿಸುವ ವಿಶೇಷ ಸೌಲಭ್ಯವನ್ನು ಸೌದಿಯ ಅದಿಲ್ ವಿಮಾನ ಕಂಪನಿ ಒದಗಿಸಿ ಅಚ್ಚರಿ ಮೂಡಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಟಿಕೆಟ್‌ನಲ್ಲಿ ಈ ಬಾರಿ ಇಳಿಕೆ ಇರಲಿದೆ. ದಮ್ಮಾಮ್ ರಿಯಾದ್ ಜಿದ್ದ ಮುಂತಾದ ಸೆಕ್ಟರ್‌ಗಳಿಂದ 49 ರಿಯಾಲ್‌ಗೆ ಟಿಕೆಟ್ ಲಭ್ಯವಾಗಲಿದೆ.
ದಮ್ಮಾಮ್ ಸೆಕ್ಟರ್ ನಲ್ಲಿ ಈ ತಿಂಗಳು 24 ರಿಂದ ಮುಂದಿನ ತಿಂಗಳು 22ರ ವರೆಗೆ ಈ ಆಫರ್ ಲಭ್ಯವಿದೆ. ಇಲ್ಲಿಯೂ ಟಿಕೆಟ್ ಗೆ 49 ರಿಯಾಲೆ ಇರಲಿದೆ. ಇದರ ಜೊತೆಗೆ ಅಭಹ ತಾಯಿಫ್, ಕಸಿಮ್, ಅರಾರ್, ತಬೂಕ್, ಮದೀನಾ, ಜೀಸಾನ್ ಮುಂತಾದ ಕಡೆಗೂ ಇವೇ ಟಿಕೆಟ್‌ಗಳು ಬೇರೆ ಬೇರೆ ದಿನಗಳಲ್ಲಿ ಲಭ್ಯವಾಗಲಿದೆ. ನಿಗದಿತ ಸಂಖ್ಯೆಯ ಟಿಕೆಟ್‌ಗಳು ನಿಗದಿತ ದಿನಗಳ ವರೆಗೆ ಮಾತ್ರವೇ ಆಫರ್‌ಗಳ ಮೂಲಕ ಲಭಿಸಲಿದೆ.












