ಸನ್ಮಾರ್ಗ ವಾರ್ತೆ
ಟರ್ಕಿಗೆ ಅತ್ಯಾಧುನಿಕ ಎಫ್ 35 ಸ್ಟೇಲ್ತ್ ಫೈಟರ್ ಜೆಟ್ ಗಳನ್ನು ಒದಗಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮವನ್ನು ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರೋಧಿಸಿದ್ದಾರೆ. ಈ ಕ್ರಮವು ಈ ಪ್ರದೇಶದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದವರು ಹೇಳಿದ್ದಾರೆ.
ಅಮೆರಿಕಾದ ಎಫ್ 35 ಯುದ್ಧವಿಮಾನವನ್ನು ಟರ್ಕಿ ಸ್ವೀಕರಿಸಿದ ಮಾತ್ರಕ್ಕೆ ಅದು ಅಮೆರಿಕಾದ ಸ್ನೇಹಿತನಾಗುವುದಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ.
ಟರ್ಕಿಯ ಪ್ರಸ್ತುತ ಆಡಳಿತವು ಅಮೆರಿಕವನ್ನು ದ್ವೇಷಿಸುವ ಮತ್ತು ಮುಸ್ಲಿಂ ಬ್ರದರ್ ಹುಡ್ ವಿಚಾರಗಳಿಂದ ಪ್ರಭಾವಿತವಾಗಿದೆ. ಉರ್ದುಗಾನ್ ಉತ್ತಮ ಮಿತ್ರನಲ್ಲ. ಏಕೈಕ ಯಹೂದಿ ರಾಷ್ಟ್ರವಾದ ನನ್ನ ದೇಶವನ್ನು ನಾಶ ಮಾಡುವುದಾಗಿ ಅವರು ಬೆದರಿಕೆ ಹಾಕುತ್ತಾರೆ. ಅಂತಹ ಆಡಳಿತಕ್ಕೆ ಶಸ್ತ್ರಾಸ್ತ್ರಗಳನ್ನು ನೀಡುವುದರಿಂದ ಈ ಪ್ರದೇಶದಲ್ಲಿ ಹೆಚ್ಚಿನ ದಾಳಿಗಳು ಸಂಭವಿಸುತ್ತವೆ ಎಂದವರು ಹೇಳಿದ್ದಾರೆ. ಟರ್ಕಿಗೆ ವಿಮಾನಗಳನ್ನು ಒದಗಿಸದಂತೆ ಟ್ರಂಪ್ ರಲ್ಲಿ ನೇರವಾಗಿ ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ರಷ್ಯಾದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ್ದಕ್ಕಾಗಿ ಟರ್ಕಿಯ ಮೇಲೆ Directly ನಿರ್ಬಂಧಗಳನ್ನು ತೆಗೆದುಹಾಕುದಾಗಿ ಟ್ರಂಪ್ ಘೋಷಿಸಿದ್ದಾರೆ. 2019 ರಲ್ಲಿ ಟರ್ಕಿಗೆ ಅಮೆರಿಕ ನಿರ್ಬಂಧ ಹೇರಿತ್ತು.












