ಮಸ್ಜಿದುನ್ನಬವಿಯಲ್ಲಿ ಈ ಸಲವೂ ಇಅ್‌ತಿಕಾಫ್‌ಗೆ ಮೇಲಂತಸ್ತಿನಲ್ಲಿ ವ್ಯವಸ್ಥೆ

0
504

ಮದೀನ,ಮೇ 22: ಪ್ರವಾದಿ(ಸ) ಮಸೀದಿ ಮಸ್ಜಿದುನ್ನಬವಿಯಲ್ಲಿ ರಮಝಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿನ ಇಅ್‌ತಿಕಾಫ್ ಕುಳಿತುಕೊಳ್ಳಲು ಮುಸ್ಲಿಮರಿಗೆ ಸೌಕರ್ಯ ಮಾಡಿಕೊಡಲಾಗಿದ್ದು ಮೇಲಂತಸ್ತಿನಲ್ಲಿ ಈಸಲವೂ ಇಅ್‌ತಿಕಾಫ್ ಕುಳಿತುಕೊಳ್ಳುವ ಅವಕಾಶ ನೀಡಲಾಗುತ್ತಿದೆ. ಕಳೆದ ದಿವಸ ತರಾವೀಹ್ ನಮಾಝ್‍ಗಿಂತ ಮೊದಲು ಇಮಾಮರು ಮಾಡಿದ ಭಾಷಣದಲ್ಲಿ ಈ ವಿವರವನ್ನು ನೀಡಿದ್ದಾರೆ.

ಮೊದಲೇ ಬುಕ್ ಮಾಡಿ ಅನುಮತಿ ಪತ್ರವನ್ನು ಪಡೆದವರಿಗೆ ಮಾತ್ರ ಇಅ್‌ತಿಕಾಫ್ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತದೆ. ರಮಝಾನ್ ಕೊನೆಯ ಹತ್ತು ದಿನಗಳಲ್ಲಿ ಜನರ ಭೇಟಿ ಹೆಚ್ಚುವುದನ್ನು ಪರಿಗಣಿಸಿ ಇಅ್‌ತಿಕಾಫ್‍ನ್ನು ಮೇಲಂತಸ್ತಿಗೆ ವರ್ಗಾಯಿಸಲಾಗಿದೆ. ಮಸೀದಿಯ ಅತಿ ಮೇಲ್ಭಾಗದ ಓಪನ್ ಟೆರೆಸ್‍ನಲ್ಲಿ ವಿಶೇಷ ಚಪ್ಪರ ಮತ್ತು ಶೈತಲೀಕರಣ ವ್ಯವಸ್ಥೆಯನ್ನು ಮಾಡಲಾಗಿದೆ.