ಮುಂಬೈ: ಆಸ್ಪತ್ರೆಗಳಲ್ಲಿ ವೈದ್ಯರು ಮುಸ್ಲಿಂ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮುಂಚೆ ಗಡ್ಡವನ್ನು ಕ್ಷೌರಗೊಳಿಸುವಂತೆ ಕೇಳಿಕೊಂಡಿದ್ದಾರೆ ಮತ್ತು ಈ ಅಭ್ಯಾಸವನ್ನು ನಿಷೇಧಿಸಬೇಕೆಂದು ಕೋರಿ ಸಮಾಜವಾದಿ ಪಕ್ಷದ ಮುಖಂಡ ರೈಯಿಸ್ ಶೇಖ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶೇಖ್, ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಶನ್ನಲ್ಲಿ (ಬಿಎಂಸಿ) ಎಸ್ಪಿ ಮುಖಂಡ, ನಾಗರಿಕ ಕಮಿಷನರ್ ಅಜಯ್ ಮೆಹ್ತಾರವರಿಗೆ ಪತ್ರವೊಂದನ್ನು ಬರೆದು ಈ ಅಭ್ಯಾಸ ಸ್ವೀಕಾರಾರ್ಹವಲ್ಲವೆಂದು ಹೇಳಿದ್ದಾರೆ.
ಈ ಪತ್ರದಲ್ಲಿ, ಬಿಎಂಸಿ ನಡೆಸುತ್ತಿರುವ ಆಸ್ಪತ್ರೆಗಳಲ್ಲಿ ವೈದ್ಯರು ಸಣ್ಣ ಶಸ್ತ್ರ ಚಿಕಿತ್ಸೆಗೂ ಸಹ ಮುಸ್ಲಿಂ ರೋಗಿಗಳು ಗಡ್ಡವನ್ನು ಕ್ಷೌರ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಿಟಿಐ ಜೊತೆಗೆ ಅವರು ಮಾತನಾಡುತ್ತಾ, “ಗಡ್ಡವನ್ನು ಹೊಂದುವುದು ವಿಶ್ವಾಸದ ಭಾಗವಾಗಿದೆ ಮತ್ತು ಈ ಕುರಿತು ಮುಸ್ಲಿಂ ರೋಗಿಗಳಿಂದ ನಾನು ಹಲವಾರು ದೂರುಗಳನ್ನು ಸ್ವೀಕರಿಸಿದ್ದೇನೆ, ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆಗೂ ಗಡ್ಡವನ್ನು ಕ್ಷೌರ ಮಾಡಲು ಆದೇಶ ನೀಡುತ್ತಾರೆಂದು ಅವರು ಹೇಳಿದ್ದಾರೆ”.
“ಇದು ಸ್ವೀಕಾರಾರ್ಹವಲ್ಲ ಮತ್ತು ನಾನು ಈ ಕುರಿತು ಬಿಎಂಸಿ ಕಮಿಷನರ್ ಅಜಯ್ ಮೆಹ್ತಾಗೆ ಪತ್ರ ಬರೆದಿದ್ದೇನೆ” ಎಂದು ಶೇಖ್ ಹೇಳಿದರು.
”ಬಹಳ ಅಗತ್ಯವೆನಿಸಿದರೆ ಮಾತ್ರ ರೋಗಿಗಳಲ್ಲಿ ಕ್ಷೌರ ಮಾಡಲು ಕೇಳಿಕೊಳ್ಳಬೇಕೆಂದು ಮೆಹ್ತಾರು ವೈದ್ಯರಿಗೆ ಆದೇಶ ನೀಡಬೇಕೆಂದು ಬೇಡಿಕೆ ಇರಿಸಿದ್ದೇನೆ” ಎಂದು ಅವರು ಹೇಳಿದರು. ಬಿಎಂಸಿ ಆರೋಗ್ಯ ಇಲಾಖೆ ಈ ವಿವಾದದ ಬಗ್ಗೆ ತನ್ನ ದೂರನ್ನು ಪಡೆದುಕೊಂಡಿದೆ ಮತ್ತು ಇದು ಮರುಕಳಿಸದಂತೆ ತಡೆಗಟ್ಟಲು ಕ್ರಮವನ್ನು ಕೈಗೊಂಡಿದ್ದಾರೆ ಎಂದು ಶೇಖ್ ತಿಳಿಸಿದ್ದಾರೆ.












