ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮೂರು ದಶಕಗಳು ಸಂದಿರುವ ಹಿನ್ನೆಲೆನಲ್ಲಿ ಮುಂಬಯಿ ಗಲಭೆಯ ಕುರಿತು ತನಿಖೆ ನಡೆಸಿದ ಶ್ರೀ ಕೃಷ್ಣ ಆಯೋಗದ ವರದಿಯ ಶಿಫಾರಸ್ಸುಗಳ ಆಧಾರದಲಿ ತೀರ್ಪು ನೀಡಲು ಸಾಧ್ಯವಿಲ್ಲ. ತಪ್ಪಿತಸ್ಥರಾದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲು ಆಗದು ಎಂದು ಸುಪ್ರೀಂ ಕೋರ್ಟು ತಿಳಿಸಿದೆ.
ಅಧಿಕೃತ ದತ್ತಾಂಶಗಳ ಪ್ರಕಾರ ಮುಂಬಯಿ ಗಲಭೆಯಲ್ಲಿ 900 ಮಂದಿ ಕೊಲ್ಲಲ್ಪಟ್ಟರು. 1992ರ ಮುಂಬಯಿ ಗಲಭೆಯ ಬಲಿಪಶುಗಳಿಗೆ ಕೊಟ್ಟಿರುವ ನಷ್ಟಪರಿಹಾರದ ವಿವರಗಳನ್ನು ಸಲ್ಲಿಸಲು ಸುಪ್ರೀಂ ಕೋರ್ಟು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಿದೆ. 1992 ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸದ ಬೆನ್ನಿಗೆ ಮುಂಬಯಿಯಲ್ಲಿ ಗಲಭೆ ನಡೆದಿತ್ತು. ಇದರ ತನಿಖಾ ವರದಿಯಲ್ಲಿ ಮುಂದಿನ ಕ್ರಮಕ್ಕೆ ಆಗ್ರಹಿಸಿ 1998ರಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಒಂದು ದಿವಸದಲ್ಲಿ ವಾದವನ್ನು ಆಲಿಸಿ ತೀರ್ಪನ್ನು ಮುಂದೂಡಿದ್ದ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅಧ್ಯಕ್ಷ ಪೀಠದ ಕ್ರಮ ಇದು.
ಮುಂಬೈ ಗಲಭೆ ಪ್ರಕರಣದ ಆರೋಪಿಗಳ ಖುಲಾಸೆಗೊಳಿಸಿದ್ದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಎಲ್ಲಿದೆ ಎಂದು ಅರ್ಜಿದಾರರಿಗಾಗಿ ಹಾಜರಾದ ವಕೀಲ ಕಾಲಿನ್ ಗೋನ್ಸಾಲಿಸ್ರೊಡನೆ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಕೇಳಿದರು. ಬಲಿಪಶುಗಳು ಅಪೀಲು ಮಾಡಿದ್ದಾರೆಂದು ನಾನು ಭಾವಿಸುವುದಿಲ್ಲ. ಅವರಿಗೆ ಕಾನೂನು ಸಹಾಯ ಸಿಕ್ಕಿಲ್ಲ ಎಂದು ವಕೀಲರು ಹೇಳಿದರು. ಮುಂಬಯಿ ಗಲಭೆಯ ಬಲಿಪಶುಗಳಿಗೆ ಕಾನೂನು ಸಹಾಯ ಸಿಕ್ಕಿಲ್ಲ ಎಂಬುದು ಸರಿಯಲ್ಲ. ಹಲವು ಎನ್ಜಿಒಗಳು ಅವರಿಗೆ ಸಹಾಯ ಮಾಡಿದ್ದವು ಎಂದು ಜಸ್ಟಿಸ್ ಕೌಲ್ ಹೇಳಿದರು. ಇದೇ ವೇಳೆ ಕಾನೂನು ಸಹಾಯ ಸರಿಯಾದ ರೂಪದಲ್ಲಿರಬೇಕೆಂದಿಲ್ಲ ಎಂದೂ ಅವರು ಹೇಳಿದರು.
ಮೂರು ದಶಕಗಳಾಗಿರುವ ಈ ಸಮಯದಲ್ಲಿ ಜಸ್ಟಿಸ್ ಶ್ರೀಕೃಷ್ಣ ಕಮಿಷನ್ ಸಲ್ಲಿಸಿರುವ ತನಿಖಾ ವರದಿಯ ಆಧಾರದಲ್ಲಿ ತೀರ್ಪು ನೀಡಲು ಆಗುವುದಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಅವರನ್ನು ಖುಲಾಸೆಗೊಳಿಸಿರುವಾಗ ತಪ್ಪಿತಸ್ಥ ಪೊಲೀಸಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವ ಬೇಡಿಕೆಯಲ್ಲಿ ಕೋರ್ಟಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.












