ದೆಹಲಿ ಗಲಭೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುತ್ತಿರುವ ಜಮಾಅತೆ ಇಸ್ಲಾಮಿ ಹಿಂದ್: ವಿಷನ್-2೦26 ಕುರಿತು ಸಚ್‌ದೇವ್ ಮತ್ತು ಸತ್ಪಾಲ್ ಸಿಂಗ್‌ರವರ ಮಾತು ಕೇಳಿ..‌.

0
572

ಸನ್ಮಾರ್ಗ ವಾರ್ತೆ

ನವದೆಹಲಿ: ಈಶಾನ್ಯ ದೆಹಲಿಯ ಮೂಂಗಾ ನಗರ ಪ್ರದೇಶದ ಮುಖ್ಯ ರಸ್ತೆಯಲ್ಲಿರುವ ಪೀಠೋಪಕರಣಗಳ ಅಂಗಡಿಯನ್ನು 2020ರ ಫೆಬ್ರವರಿ 24ರಂದು ಉದ್ರಿಕ್ತ ಜನರ ಗುಂಪು ಬೆಂಕಿ ಕೊಟ್ಟು ಸುಟ್ಟು ಬಿಟ್ಟಿತ್ತು. ಇದರಿಂದಾಗಿ 34 ವರ್ಷದ ಗುಂಜನ್ ಸಚ್‌ದೇವ ತನ್ನೆಲ್ಲ ಸಂಪಾದನೆಯನ್ನು ಕಳೆದುಕೊಂಡಿದ್ದರು. ಅಂದಾಜು 25 ಲಕ್ಷ ರೂ. ಅವರಿಗೆ ಇದರಿಂದ ನಷ್ಟ ಸಂಭವಿಸಿತ್ತು.

ಅವರು ದೆಹಲಿ ಸರ್ಕಾರದಿಂದ ಪಡೆದ 3 ಲಕ್ಷ ರೂ. ನಿಂದ ಅಂಗಡಿಯನ್ನು ರಿಪೇರಿ ಮಾಡಿದರೂ ಮತ್ತೆ ವ್ಯವಹಾರವನ್ನು ನಿರ್ವಹಿಸಲು ಸಾಮಗ್ರಿಗಳನ್ನು ಖರೀದಿಸಲು ಅವರಿಗೆ ಸಾಧ್ಯವಾಗಲಿಲ್ಲ. ವ್ಯವಹಾರದಲ್ಲಿ ಮತ್ತೆ ಹೂಡಿಕೆ ಮಾಡಲು ಉಳಿತಾಯ ಇರಲಿಲ್ಲ. ಅವರು ವಿವಿಧ ಮೂಲಗಳಿಂದ ಹಣವನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಿದರೂ ಅವರು ಅದರಲ್ಲಿ ವಿಫಲರಾದರು.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಅವರಿಗೆ ವಿಷನ್ 2026ರ ಸ್ವಯಂ ಸೇವಕರ ಸಂಪರ್ಕಕ್ಕೆ ಬಂದರು, ಹಾನಿಗೊಳಗಾದ ಆಸ್ತಿಗಳ ಬಗ್ಗೆ ಸಮೀಕ್ಷೆ ನಡೆಸಿದ ಸಂಸ್ಥೆ ಅವರಿಗೆ ಸಹಕಾರ ನೀಡುವ ಭರವಸೆ ನೀಡಿದರು.

“ವಿಷನ್ 2026 ಜನರು ದೇವತೆಗಳಂತೆ ನನ್ನ ಬಳಿಗೆ ಬಂದರು. ನನ್ನ ಅಂಗಡಿಯನ್ನು ರಿಪೇರಿ ಮಾಡುವುದಾಗಿ ಮತ್ತು ನನ್ನ ವ್ಯವಹಾರವನ್ನು ಪುನರಾರಂಭಿಸಲು ಬೇಕಾದ ಸಾಮಗ್ರಿಗಳನ್ನು ಸಹ ಒದಗಿಸುವುದಾಗಿ ಅವರು ನನಗೆ ಭರವಸೆ ನೀಡಿದರು. ವಿಷನ್ 2026ರ ಸಹಾಯದಿಂದ ನಾನು ಆರು ತಿಂಗಳ ಹಿಂದೆ ನನ್ನ ಅಂಗಡಿಯನ್ನು ಮತ್ತೆ ತೆರೆದಿದ್ದೇನೆ ”ಎಂದು indiatomorrow.net ನೊಂದಿಗೆ ಮಾತನಾಡುತ್ತಾ ಸಚ್‌ದೇವ್ ಹೇಳಿದರು.

ಅವರು ನನ್ನ ಅಂಗಡಿಯನ್ನು ರಿಪೇರಿ ಮಾಡಿದ್ದಲ್ಲದೆ, ನನ್ನ ವ್ಯವಹಾರವನ್ನು ಮತ್ತೆ ಸ್ಥಾಪಿಸಲು ಸಹಾಯ ಮಾಡಿದರು. ಇದಕ್ಕಾಗಿ ನಾನು ವಿಷನ್ 2026ಗೆ ಅಪಾರವಾಗಿ ಧನ್ಯವಾದ ಅರ್ಪಿಸುವೆ ಎಂದು ಅವರು ಹೇಳಿದರು.

ಸಚ್‌ದೇವ ಅವರ ಅಂಗಡಿಯ ಎದುರು ಹತ್ತಿರದಲ್ಲಿ ಭಜನ್‌ಪುರದ ನಿವಾಸಿ ಸತ್ಪಾಲ್ ಸಿಂಗ್ ರವರ ಅಂಗಡಿ ಇತ್ತು. ಗಲಭೆಯ ಸಮಯದಲ್ಲಿ ಅವರ ಅಂಗಡಿಯನ್ನು ದುಷ್ಕರ್ಮಿಗಳು ಸುಟ್ಟುಹಾಕಿದರು. ಬಣ್ಣಗಳು ಮತ್ತು ಇತರ ರಾಸಾಯನಿಕ ವಸ್ತುಗಳನ್ನು ಸುಡುವುದರಿಂದ ಉಂಟಾಗುವ ಹೆಚ್ಚಿನ ಉಷ್ಣತೆಯಿಂದಾಗಿ ಅವನ ಅಂಗಡಿಯ ಮೇಲ್ಛಾವಣಿಯೂ ಕೆಳಗೆ ಬಿತ್ತು. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತು.

“ನನ್ನ ಅಂಗಡಿ ಮತ್ತು ಗೊಡೌನ್ ಅನ್ನು ಪುನರ್ನಿರ್ಮಿಸಲು ಯಾರನ್ನು ಸಂಪರ್ಕಿಸಬೇಕು ಎಂದು ಚಿಂತಿತನಾಗಿದ್ದೆ. ಯಾವುದೇ ಸಹಾಯ ಬಂದಿಲ್ಲ. ಕಳೆದ ಒಂದು ವರ್ಷದಿಂದ ನನಗೆ ಯಾವುದೇ ಆದಾಯವಿಲ್ಲ. ನನಗೆ ಕಾಲೇಜಿಗೆ ಹೋಗುವ ಮಗಳು ಮತ್ತು ಇಬ್ಬರು ಶಾಲೆಗೆ ಹೋಗುವ ಗಂಡು ಮಕ್ಕಳಿದ್ದಾರೆ. ಅಂತಹ ಸಂದರ್ಭಗಳಲ್ಲಿ ಕುಟುಂಬವನ್ನು ಸಹ ನಡೆಸುವುದು ತುಂಬಾ ಕಷ್ಟಕರವಾಗಿತ್ತು ಮತ್ತು ಅಂಗಡಿಯನ್ನು ಪುನರಾರಂಭಿಸಲು ಹಣವನ್ನು ವ್ಯವಸ್ಥೆ ಮಾಡುವುದು ಅಸಾಧ್ಯವಾಗಿತ್ತು” ಎಂದು ಅವರು ಹೇಳಿದರು.

“ಅಂತಿಮವಾಗಿ, ಯಾರೋ ಕೆಲವು ತಿಂಗಳ ಹಿಂದೆ ಜಮಾಅತೆ ಇಸ್ಲಾಮಿ ಹಿಂದ್(ಜೆಐಹೆಚ್) ನ ಸ್ವಯಂಸೇವಕರಿಗೆ ನನ್ನನ್ನು ಪರಿಚಯಿಸಿದರು. ಅವರು ಕೂಡಲೇ ನನ್ನ ಅಂಗಡಿ ಮತ್ತು ಗೋಡೌನ್ ಅನ್ನು ಪುನರ್ನಿರ್ಮಿಸಿದರು. ಈಗ ವಿಷನ್ 2026 ನನ್ನ ಅಂಗಡಿಗೆ ಬೇಕಾದ ವಸ್ತುಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತಿದೆ ಇದರಿಂದ ನಾನು ಮತ್ತೆ ನನ್ನ ವ್ಯವಹಾರವನ್ನು ನಡೆಸುತ್ತೇನೆ ”ಎಂದು ಸಿಂಗ್ ಹೇಳುತ್ತಾರೆ.

2020 ರ ಫೆಬ್ರವರಿ 23 ರಂದು ದೆಹಲಿಯಲ್ಲಿ ಸ್ಫೋಟಗೊಂಡ ಮೂರು ದಿನಗಳ ಹಿಂಸಾಚಾರದಲ್ಲಿ ಈಶಾನ್ಯ ದೆಹಲಿಯ ಈ ಭಾಗದಲ್ಲಿ ನೂರಾರು ಜನರು ಮನೆಗಳು ಮತ್ತು ಜೀವನೋಪಾಯದ ಮೂಲಗಳನ್ನು ಕಳೆದುಕೊಂಡರು. ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಜಾಫ್ರಾಬಾದ್‌ನ ಸಿಎಎ ವಿರೋಧಿ ಪ್ರತಿಭಟನಾ ಸ್ಥಳದ ಬಳಿ ಮಾಡಿದ ಭಾಷಣದ ನಂತರ ನಡೆದ ಗಲಭೆಯಲ್ಲಿ 53 ಜನರು ಸಾವನ್ನಪ್ಪಿದರು. ಹೆಚ್ಚಾಗಿ ಮುಸ್ಲಿಮರಿಗೆ ಸೇರಿದ ಮನೆಗಳು ಮತ್ತು ಅಂಗಡಿಗಳು ಸೇರಿದಂತೆ ಆಸ್ತಿಪಾಸ್ತಿಗಳು ನಷ್ಟವಾಗಿದೆ. ಅನೇಕ ಜನರು ಜೀವನ ಸುಧಾರಿಸಲು ಕಷ್ಟ ಪಡುತ್ತಿದ್ದು ಜಮಾಅತೆ ಇಸ್ಲಾಮಿ ಹಿಂದ್ ಮತ ಧರ್ಮ ಭೇದವಿಲ್ಲದೇ ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದೆ. ವಿಷನ್ 2026, ಸೊಸೈಟಿ ಫಾರ್ ಬ್ರೈಟ್ ಫ್ಯೂಚರ್, ಹ್ಯೂಮನ್ ವೆಲ್ಫೇರ್ ಫೌಂಡೇಶನ್, ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಸೇರಿದಂತೆ ಎನ್‌ಜಿಒಗಳು ಕೆಲಸ ಮಾಡುತ್ತಿದೆ. ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಜಮಿಯಾತುಲ್ ಉಲೆಮಾ-ಎ-ಹಿಂದ್ ಅವರು ಗಲಭೆಯ ನಂತರ ಪುನರ್ವಸತಿ ಕಾರ್ಯ ಮಾಡುತ್ತಿದೆ.

ದಂಗೆಕೋರರಿಂದ ಸುಟ್ಟುಹೋದ ಶಿವ ವಿಹಾರದ ಡಾ.ಧರಂಪಾಲ್ ಅವರ ಕ್ಲಿನಿಕ್ ಅನ್ನು ವಿಷನ್ 2026 ಪುನರ್‌ ನಿರ್ಮಿಸಿದೆ. ಕಳೆದ 15 ವರ್ಷಗಳಿಂದ ತಮ್ಮ ಕ್ಲಿನಿಕ್ ನಡೆಸುತ್ತಿದ್ದ ಡಾ.ಧರಂಪಾಲ್ ಅವರು ತಮ್ಮ ಕ್ಲಿನಿಕ್ ಅನ್ನು ಪುನರ್‌ನಿರ್ಮಿಸಲು ಮತ್ತು ಅದನ್ನು ಮತ್ತೆ ನಿರ್ವಹಿಸಲು ಹಣವಿಲ್ಲದ ಕಾರಣ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದರು. ಆದರೆ ವಿಷನ್ ಇಡೀ ಕ್ಲಿನಿಕ್ ಅನ್ನು ಮತ್ತೆ ಸ್ಥಾಪಿಸಿದರು. 9 ನೇ ತರಗತಿ ವಿದ್ಯಾರ್ಥಿಯಾಗಿದ್ದ ಅವರ ಸೂರ್ಯವಂಷ್ ಅವರಿಗೆ ವಿದ್ಯಾರ್ಥಿವೇತನವನ್ನೂ ನೀಡಲಾಯಿತು.