ಸನ್ಮಾರ್ಗ ವಾರ್ತೆ
ಬೆನ್: ಬುರ್ಖಾ ಸಹಿತ ಮುಖ ಮರೆಸಿಡುವ ಬಟ್ಟೆಯ ವಿರುದ್ಧ ಸ್ವಿಟ್ಝರ್ಲೆಂಡಿನಲ್ಲಿ ಜನಮತ ಅಭಿಮತ ಸಂಗ್ರಹದಲ್ಲಿ ಬಹುಮತ ಶೇ.51.2ರಷ್ಟು ಸಿಕ್ಕಿದ್ದು ನಿಷೇಧವನ್ನುಶೇ. 48.8ರಷ್ಟು ಮಂದಿ ವಿರೋಧಿಸಿದರು. ರವಿವಾರ ಜನಮತ ಸಂಗ್ರಹ ನಡೆದಿತ್ತು. ಬುರ್ಖಾ ನಿಷೇಧಕ್ಕೆ ಬಹುಮತ ಲಭಿಸಿದರೂ ಸರಕಾರ ಅಧಿಕೃತ ಆದೇಶ ಈವರೆಗೂ ಹೊರಡಿಸಿಲ್ಲ.
ಭಯೋತ್ಪಾದನೆ ತಡೆಯಿರಿ ಎಂಬ ಘೋಷಣೆಯಿಂದ ಬಲಪಂಥೀಯ ಸಂಘಟನೆ ಸ್ವಿಸ್ ಪೀಪಲ್ಸ್ ಪಾರ್ಟಿ ಜನಮತ ಸಂಗ್ರಹಕ್ಕೆ ಆಗ್ರಹಿಸಿತ್ತು. ಮುಸ್ಲಿಂ, ಇಸ್ಲಾಂ ಮುಂತಾದ ಪದಗಳು ಜನರ ಅಭಿಮತ ಸಂಗ್ರಹದ ವೇಳೆ ಪರಿಗಣನೆಯಲ್ಲಿರಲಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮರೆಸುವುದು ಸುರಕ್ಷಾ ಸಮಸ್ಯೆ ಆಗಿದೆ ಎಂದು ಜನಮತ ಸಂಗ್ರಹವನ್ನು ಆಗ್ರಹಿಸಲಾಗಿತ್ತು. ಪ್ರತಿಭಟನಾಕಾರರು ಮತ್ತು ಇತರರು ಮುಖ ಮರೆಸುವುದನ್ನು ತಡೆಯಲು ನಿಷೇಧದ ಉದ್ದೇಶವಾಗಿದೆ ಎನ್ನಲಾಗಿತ್ತು. ಆದರೆ, ನಿಷೇಧದ ನಿಜವಾದ ಉದ್ದೇಶ ಬುರ್ಖಾ, ನಖಾಬ್ ಮುಂತಾದ ಮುಸ್ಲಿಂ ಮಹಿಳೆಯರ ಉಡುಪು ಎಂದು ಸುವ್ಯಕ್ತವಾಗಿದೆ.
ಆದರೆ, ಬುರ್ಖಾ ನಿಷೇಧದ ಜನಮತ ಸಂಗ್ರಹವನ್ನು ತಿರಸ್ಕರಿಸಬೇಕೆಂದು ಜನರಿಗೆ ಸ್ವಿಸ್ ಸರಕಾರವೇ ಮನವಿ ಮಾಡಿದೆ. ಮಹಿಳೆಯರು ಏನು ಧರಿಸಬೇಕು, ಧರಿಸಬಾರದೆಂದು ದೇಶ ನಿರ್ಣಯಿಸುವಂತಿಲ್ಲ ಎಂದು ಸರಕಾರ ಜನಮತ ಸಂಗ್ರಹವನ್ನು ವಿರೋಧಿಸಿತ್ತು. ಪ್ರವಾಸೋದ್ಯಮಕ್ಕೆ ಇದು ಅಡ್ಡ ಪರಿಣಾಮ ಬೀರಬಹುದು ಎಂಬ ಆತಂಕ ಸರಕಾರಕ್ಕಿದೆ. ಸ್ವಿಟ್ಝರ್ಲೆಂಡಿನ ಪ್ರವಾಸಿಧಾಮ ಜನೀವಾ ಸರೋವರ ಪರಿಸರದಲ್ಲಿ ಅಪಾರ ಮುಸ್ಲಿಂ ಪ್ರವಾಸಿಗರು ಬರುತ್ತಾರೆ. ನಿಷೇಧದಿಂದ ಇಂತಹ ಪ್ರವಾಸಿ ಆದಾಯಕ್ಕೆ ಖೋತಾ ಆಗುವ ಆತಂಕ ಸರಕಾರಕ್ಕಿದೆ.
ಜರ್ಮನ್ ವಿಶ್ವವಿದ್ಯಾನಿಲಯದ ಲುಸೆನ್ ಸಂಶೋಧನೆಯಲ್ಲಿ ಶೇ.30ರಷ್ಟು ಸ್ವಿಟ್ಝರ್ಲೆಂಡ್ ಮಹಿಳೆಯರು ಮಾತ್ರ ಅಲ್ಲಿ ನಿಖಾಬ್ ಧರಿಸುವುದು ಎಂದು ತಿಳಿದು ಬಂದಿದೆ. ಶೇ. 5ರಷ್ಟು ಮುಸ್ಲಿಮರು ಸ್ವಿಟ್ಝರ್ಲೆಂಡಿನಲ್ಲಿರುವುದು. ಸುಮಾರು ನಾಲ್ಕೂವರೆ ಲಕ್ಷ ಇಲ್ಲಿ ಮುಸ್ಲಿಮರಿದ್ದಾರೆ.ಮುಸ್ಲಿಮರ ಪಾಲಿಗೆ ಇದೊಂದು ಕಪ್ಪು ದಿನ ಎಂದು ಸ್ವಿಟ್ಝರ್ಲೆಂಡಿನ ಸೆಂಟ್ರಲ್ ಕೌನ್ಸಿಲ್ ಆಫ್ ಮುಸ್ಲಿಂ ಸಂಘಟನೆ ಹೇಳಿದೆ. ಕಾನೂನು ಪ್ರಕಾರ ಅಸಮಾನತೆಯನ್ನು ಇದು ಸೃಷ್ಟಿಸಿ ಹಾಕಿದೆ. ಜನಮತ ಸಂಗ್ರಹದ ವಿರುದ್ಧ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂದು ಸೆಂಟ್ರಲ್ ಕೌನ್ಸಿಲ್ ಆಫ ಮುಸ್ಲಿಮ್ಸ್ ಹೇಳಿದೆ.
ಸ್ವಯಂ ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ್ಯದ ಮಹಿಳೆಯರ ಹಕ್ಕನ್ನು ಹರಣ ಮಾಡುವ ಅಪಾಯಕಾರಿ ಕ್ರಮ ಇದೆಂದು ಬುರ್ಖಾ ನಿಷೇಧದ ಬಗ್ಗೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಹೇಳಿದೆ. ಸ್ವಿಟ್ಝರ್ಲೆಂಡಿನ ಫೆಮಿನಿಸ್ಟ್ ಗಳು ಬುರ್ಖಾ ವಿರೋಧಿಸುತ್ತಿದ್ದರೂ ಕಾನೂನು ಮೂಲಕ ನಿಷೇಧಿಸುವ ಕ್ರಮವನ್ನು ಅವರು ವಿರೋಧಿಸಿದ್ದಾರೆ. ಮಹಿಳೆಗೆ ಏನು ಉಡಬೇಕು ತೊಡಬೇಕೆಂದು ಅದನ್ನು ಕಾನೂನು ತೀರ್ಮಾನಿಸುವಂತಿರಬಾರದು ಎಂದು ಅವರು ಹೇಳುತ್ತಾರೆ.
2009ರಲ್ಲಿ ಮಸೀದಿ ಮಿನಾರಗಳನ್ನು ನಿರ್ಮಿಸುವುದನ್ನು ಸ್ವಿಸ್ ಪೀಪಲ್ಸ್ ಪಾರ್ಟಿ ವಿರೋಧಿಸಿತ್ತು. ಆಗಲೂ ಜನಮತ ಸಂಗ್ರಹ ನಡೆದಿತ್ತು ಮತ್ತು ಜನರು ಪೀಪಲ್ಸ್ ಪಾರ್ಟಿಯ ಆಗ್ರಹದ ಪರ ಮತ ಹಾಕಿದ್ದರು. ಹಲವು ಯುರೋಪಿಯನ್ ರಾಜ್ಯಗಳು ಬುರ್ಖಾದ ವಿರುದ್ಧ ನಿಲುವು ತೆಗೆದುಕೊಂಡಿವೆ. 2011ರಲ್ಲಿ ಫ್ರಾನ್ಸಿನಲ್ಲಿ ಸಾರ್ವಜನಿಕ ಜಾಗಗಳಲ್ಲಿ ಮುಖ ಮರೆಸುವುದು ನಿಷೇಧಿಸಲಾಗಿದೆ. ನೆದರ್ಲೆಂಡ್ಸ್, ಡೆನ್ಮಾಕ್, ಆಸ್ಟ್ರೀಯ ಬಲ್ಗೇರಿಯದಲ್ಲಿ ಮುಖಮರೆಸಿ ಸಾರ್ವಜನಿಕ ಸ್ಥಳಕ್ಕೆ ಬರುವುದು ನಿಷೇಧಿಸಲಾಗಿದೆ.












