ಪ್ರಜಾಪ್ರಭುತ್ವದ ಮಾರ್ಗದಲ್ಲಿ ವಾಗ್ನರ್ ಪಡೆ ಮೋದಿ ಸಕರಾರವನ್ನು ಕೆಳಗಿಳಿಸಲಿದೆ – ಶಿವಸೇನೆ

0
112

ಸನ್ಮಾರ್ಗ ವಾರ್ತೆ

ಮುಂಬಯಿ: ಭಾರತದ ವಾಗ್ನರ್ ಪಡೆ ಮೋದಿ ಸರಕಾರವನ್ನು ಬ್ಯಾಲೆಟ್ ಮೂಲಕ ಕೆಳಗಿಳಿಸಲಿದೆ ಎಂದು ಶಿವಸೇನೆ ಉದ್ಧವ್ ಠಾಕ್ರೆ ವಿಭಾಗದ ಪತ್ರಿಕೆ ಸಾಮ್ನ ಹೇಳಿದೆ.

ಪ್ರತಿಪಕ್ಷ ಪಾರ್ಟಿಗಳ ಒಕ್ಕೂಟವನ್ನು ಸಾಮ್ನಾ ವಾಗ್ನರ್ ಪಡೆ ಎಂದು ಕರೆದಿದೆ. ರಷ್ಯದಲ್ಲಿ ವಾಗ್ನರ್ ಸೇನೆ ಪುಟಿನ್ ಆಡಳಿತವನ್ನೇ ನಡುಗಿಸುವ ಸಶಸ್ತ್ರ ದಂಗೆ ನಡೆಸಿತ್ತು. ಇದನ್ನು ಸೂಚಿಸಿ ಶಿವಸೇನೆಯ ಸಾಮ್ನ ಸಂಪಾದಕೀಯ ಬರೆದಿದೆ.

ಸರ್ವಾಧಿಕಾರಿ ಪ್ರಶ್ನಿಸಲ್ಪಡುತ್ತಾರೆ ಎಂದು ರಷ್ಯದ ವಾಗ್ನರ್ ಸೇನೆ ತೋರಿಸಿ ಕೊಟ್ಟಿದೆ. ಮೋದಿ ಮತ್ತು ಪುಟಿನ್ ಪ್ರಶ್ನಾತೀತರಲ್ಲ. ಭಾರತ ಸರಕಾರವನ್ನು ಅಹಿಂಸೆಯ ದಾರಿಯಲ್ಲಿ ಬ್ಯಾಲೆಟ್ ಮೂಲಕ ವಾಗ್ನರ್ ಪಡೆ ಕೆಳಗಿಳಿಸುತ್ತದೆ. ಪುಟಿನ್‍ನಂತೆ ಮೋದಿ ಕೂಡ ಹೊರಗೆ ಹೋಗಬೇಕಾಗಿದೆ. ಆದರೆ ಪ್ರಜಾಪ್ರಭುತ್ವ ಮಾರ್ಗದಲ್ಲಿ ಮಾತ್ರ ಅದು ಆಗಬೇಕು ಎಂದು ಸಾಮ್ನ ಪತ್ರಿಕೆ ಹೇಳಿತು.

ಪಟ್ನಾದಲ್ಲಿ ಕಳೆದ ವಾರ ಪ್ರತಿಪಕ್ಷಗಳ ಸಭೆ ನಡೆದಿತ್ತು. ಇದನ್ನು ಸಾಮ್ನ ಭಾರತದ ವಾಗ್ನರ್ ಪಡೆ ಎಂದು ವಿಶ್ಲೇಷಿಸಿತ್ತು. ಪಟ್ನಾದಲ್ಲಿ ವಾಗ್ನರ್ ಪಡೆ ಒಟ್ಟುಗೂಡಿದ್ದು ಭಾರತದ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವುದಕ್ಕಾಗಿದೆ ಎಂದು ಸಾಮ್ನಾ ಬರೆದಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ, ಬಿಜೆಪಿಯ ವಿರುದ್ಧ ಒಗ್ಗೂಡಿ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ಪಾರ್ಟಿಗಳ ಜಂಟಿ ಸಭೆ ಘೋಷಿಸಿತ್ತು. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು  ಪ್ರತಿಪಕ್ಷಗಳು ಐಕ್ಯದಿಂದಿರಲಿದೆ. ಅಭಿಪ್ರಾಯ ವ್ಯತ್ಯಾಸ ಇರುತ್ತದೆ ಅದನ್ನು ದೂರವಿಟ್ಟು ಒಟ್ಟುಗೂಡಬೇಕಾಗಿದೆ. ಯಾವ ಪಕ್ಷವನ್ನೂ ಪ್ರತಿಪಕ್ಷದ ಮುಖವಾಗಿ ತೋರಿಸುವುದಿಲ್ಲ ಎಂದು ಸಭೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಎನ್‍ಸಿಪಿ, ಶಿವಸೇನೆ ಉದ್ಧವ್ ಠಾಕ್ರೆ ವಿಭಾಗ ಆರ್‍ಜೆಡಿ, ನ್ಯಾಶನಲ್ ಕಾನ್ಫರೆನ್ಸ್, ಡಿಎಂಕೆ, ಸಿಪಿಎಂ, ಪಿಡಿಪಿ ಮೊದಲಾದ ಪಾರ್ಟಿಗಳು ಸಭೆಯಲ್ಲಿದ್ದವು.