ಸನ್ಮಾರ್ಗ ವಾರ್ತೆ
ಇವತ್ತು ಪಾರ್ಲಿಮೆಂಟ್ ನಲ್ಲಿ ಮಂಡನೆಯಾಗಿರುವ ವಖ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯಕ್ಕೆ ಸ್ವೀಕಾರಾರ್ಹವಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೇನಿ ಹೇಳಿದ್ದಾರೆ.
ಪ್ರಸ್ತಾವಿತ ಮಸೂದೆಯು ವಕ್ಫ್ ಆಸ್ತಿಯ ಮೇಲೆ ಮುಸ್ಲಿಂ ಸಮುದಾಯದ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಸ್ವರೂಪದಲ್ಲಿದೆ. ಕಾನೂನಾತ್ಮಕವಾಗಿ ವಖ್ಫ್ ಗಿರುವ ರಕ್ಷಣೆಯನ್ನು ಈ ಕಾಯ್ದೆ ತೆಗೆದು ಹಾಕುವ ಸಾಧ್ಯತೆ ಇದೆ ಎಂದವರು ಹೇಳಿದ್ದಾರೆ.
ಈ ಮಸೂದೆಯು ವಖ್ಫ್ ನಲ್ಲಿ ಜಿಲ್ಲಾಧಿಕಾರಿಗಳಿಗೆ ಅನಿಯಂತ್ರಿತ ಸ್ವಾಧೀನವನ್ನು ನೀಡಲಿದೆ. ಇದು ಕಲೆಕ್ಟರ್ ರಾಜ್ ಮಸೂದೆಯಾಗಿದೆ. ಈಗಿರುವ ನಿಯಮ ಪ್ರಕಾರ ವಿವಾದವನ್ನು ಒಂದು ವರ್ಷದಲ್ಲಿ ಸೆಟಲ್ಮೆಂಟ್ ಮಾಡಬೇಕಿದೆ. ಆದರೆ ಪ್ರಸ್ತಾವಿತ ಹೊಸ ಮಸೂದೆಯು ಈ ಸಮಯ ಮಿತಿಯನ್ನು ವಿಸ್ತರಿಸಿದೆ. ಆದ್ದರಿಂದ ಇದು ಸಂದೇಹವನ್ನು ಸೃಷ್ಟಿಸುತ್ತದೆ.
ವಖ್ಫ್ ಅನ್ನು ಸುಧಾರಿಸುವುದಕ್ಕಾಗಿ ಮಸೂದೆಯನ್ನು ತಂದಿರುವೆ ಎಂದು ಹೇಳುತ್ತಿರುವ ಕೇಂದ್ರ ಸರಕಾರವು ಅದನ್ನು ಸಮರ್ಥಿಸಿಕೊಳ್ಳುವುದಕ್ಕೆ ವಿಫಲವಾಗುತ್ತಿದೆ. ಮಾತ್ರ ಅಲ್ಲ ಪ್ರಸ್ತಾವಿತ ಮಸೂದೆಯಲ್ಲಿ ಇಂತಹ ಸುಧಾರಣಾತ್ಮಕ ವಿಷಯಕ್ಕಿಂತ ಹೆಚ್ಚು ಸಂದೇಹಗಳೇ ಅಡಗಿವೆ ಈಗ ಅಸ್ತಿತ್ವದಲ್ಲಿರುವ ಕಾಯ್ದೆಯು ಮುಸ್ಲಿಮೇತರರ ಭೂಮಿಯನ್ನು ಕಬಳಿಸುವುದಕ್ಕೆ ಪೂರಕವಾಗಿದೆ ಎಂಬ ಸುಳ್ಳು ಪ್ರಚಾರ ಸಮಾಜದಲ್ಲಿದೆ. ಅದನ್ನು ಹೊಡೆದು ಹಾಕುವುದಕ್ಕೆ ಕೇಂದ್ರ ಸರಕಾರ ಪ್ರಯತ್ನಿಸಬೇಕು ಎಂದು ಕೂಡ ಅವರು ಹೇಳಿದ್ದಾರೆ.