ಜಹಾಂಗೀರ್‌ ಪುರಿಯಲ್ಲಿ ಶಾಂತಿಗಾಗಿ ಎರಡೂ ಸಮುದಾಯಗಳಿಂದ ತಿರಂಗಾ ಯಾತ್ರೆ

0
176

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಎಂಟು ದಿವಸಗಳ ಹಿಂದೆ ಹನುಮಾನ್ ಜಯಂತಿ ಮೆರವಣಿಗೆಯ ವೇಳೆ ಘರ್ಷಣೆ ನಡೆದಿರುವ ದಕ್ಷಿಣ ದಿಲ್ಲಿಯ ಜಹಾಂಗೀರ್‌ ಪುರಿಯಲ್ಲಿ ಶಾಂತಿಗಾಗಿ ಎರಡು ಸಮುದಾಯಗಳು ತಿರಂಗಾ ಯಾತ್ರೆ ನಡೆಸಿವೆ. ಅಮನ್ ಕಮಿಟಿ(ಶಾಂತಿ ಸಮಿತಿ) ಶನಿವಾರ ಜಹಾಂಗೀರ್ ಪುರಿಯಲ್ಲಿ ಸಭೆ ಸೇರಿ ಯಾತ್ರೆಗೆ ಅಂತಿಮ ರೂಪು ನೀಡಿತ್ತು. ಎರಡು ಸಮುದಾಯದ ಸದಸ್ಯರು ಪರಸ್ಪರ ಕೈಕುಲುಕಿ ಪರಸ್ಪರ ಅಭಿನಂದಿಸಿಕೊಂಡು ಶಾಂತಿ ಉಳಿಸಲು ತೀರ್ಮಾನಿಸಿದರು.

ಈಶಾನ್ಯ ದಿಲ್ಲಿ ಡಿಸಿಪಿ ಉಷಾ ರಂಗ್ನಾನಿ ಇಲ್ಲಿನ ಜನ ಶಾಂತಿ ನೆಲೆಸಲು ಬಯಸುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಬುಲ್‍ಡೋಝರ್‌ಗಳು ಕೆಡವಿದ ಸಿ ಬ್ಲಾಕ್‍ನ ದಾರಿಗೆ ಅಡ್ಡಲಾಗಿಟ್ಟ ಕುಶಾಲ್ ಚೌಕ್‍ನ ಬ್ಯಾರಿಕೇಡ್ ಪೊಲೀಸರು ತೆರವು ಗೊಳಿಸಿಲ್ಲ. ಅಲ್ಲಿನವರಲ್ಲದೆ ಬೇರೆ ಯಾರನ್ನೂ ಅಲ್ಲಿಗೆ ಹೋಗದಂತೆ ಪೊಲೀಸರು ತಡೆಯುತ್ತಿದ್ದಾರೆ.