ಪ್ರಧಾನಿ ವಸತಿ ಮುಂದೆ ನಮಾಝ್‍, ಹನುಮಾನ್ ಚಾಲಿಸ ಪಠಿಸಲು ಅನುಮತಿ ಕೇಳಿದ ಎನ್‍ಸಿಪಿ

0
161

ಸನ್ಮಾರ್ಗ ವಾರ್ತೆ

ಮುಂಬೈ: ಪ್ರಧಾನಮಂತ್ರಿ ವಸತಿಯ ಹೊರಗೆ ಹನುಮಾನ್ ಚಾಲಿಸ್ ಮತ್ತು ನಮಾಝ್ ಮಾಡಲು ಅನುಮತಿ ಕೊಡಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾರಿಗೆ ಎನ್‍ಸಿಪಿ ಮನವಿ ಮಾಡಿ ಪತ್ರ ಬರೆದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಸತಿಯ ಮುಂದೆ ಹನುಮಾನ್ ಚಾಲಿಸ್ ಹೇಳುತ್ತೇವೆಂದು ಶಾಸಕ, ಸಂಸದೆ ದಂಪತಿ ಹಾಕಿದ ಬೆದರಿಕೆಗೆ ಎನ್‍ಸಿಪಿ ಈ ರೀತಿ ಉತ್ತರ ನೀಡಿದೆ.

ದಿಲ್ಲಿಯ ಲೋಕ್ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿಯ ವಸತಿಯ ಹೊರಗೆ ನಮಾಝ್, ಹನುಮಾನ್ ಚಾಲೀಸ, ದುರ್ಗಾ ಚಾಲಿಸ ಪಠಿಸಲು ನಾನು ಬಯಸಿದ್ದೇನೆ ಎಂದು ಫಮೀದ ಹಸನ್ ಖಾನ್ ಹೇಳಿದರು. ದೇಶದಲ್ಲಿ ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಳದ ಪರಿಸ್ಥಿತಿ ಇರುವಾಗ ಪ್ರಧಾನಿ ಮೋದಿಯನ್ನು ಜಾಗೃತಗೊಳಿಸುವುದು ಅತ್ಯವಶ್ಯಕವಾಗಿದೆ. ರವಿ ರಾಣ ಮತ್ತು ಅವರ ಸಂಸದೆ ಪತ್ನಿ ನವನೀತ್ ರಾಣಾ ಮುಖ್ಯಮಂತ್ರಿ ವಸತಿ ಹೊರಗೆ ಹನುಮಾನ್ ಚಾಲಿಸ ಪಠಿಸುವುದರ ಲಾಭ ಎತ್ತಲು ಸಾಧ್ಯವಾಗುವುದಾದರೆ, ನಮಾಝ್, ಹನುಮಾನ್ ಚಾಲಿಸ ದಿಲ್ಲಿಯ ಪ್ರಧಾನಿಯ ಮನೆಗೆ ಹೋಗಲು ನಮ್ಮ ಪಾರ್ಟಿಗೆ ಅನುಮತಿ ಕೊಡಿ ಎಂದು ಅವರು ಹೇಳಿದರು.

ಉದ್ಧವ್ ಠಾಕ್ರೆಯವರ ಮನೆಯ ಮುಂದೆ ಹನುಮಾನ್ ಚಾಲಿಸ ಪಠಿಸುವ ಬೆದರಿಕೆ ಹಾಕಿದ ಮಹಾರಾಷ್ಟ್ರ ಪಕ್ಷೇತರ ಸಂಸದೆ ನವನೀತ್ ರಾಣ, ಅವರ ಪತಿ ಶಾಸಕ ರವಿ ರಾಣಾರನ್ನು ಖಾರ್ ಪೊಲೀಸರು ಬಂಧಿಸಿದ್ದರು. ಮುಂಬೈ ಕೋರ್ಟು ಇಬ್ಬರಿಗೂ 14 ದಿವಸದ ನ್ಯಾಯಾಂಗ ಬಂಧನ ವಿಧಿಸಿದೆ.