ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಇಂದು ಪ್ರಸ್ತಾವ

0
441

ಸನ್ಮಾರ್ಗ ವಾರ್ತೆ

ಕೊಲ್ಕತಾ, ಜ. 27: ಪೌರತ್ವ ತಿದ್ದುಪಡಿ ಕಾನೂನು ವಿರುದ್ದ ಇಂದು ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಪ್ರಸ್ತಾವ ಅಂಗೀಕಾರವಾಗಲಿದೆ. ಮಧ್ಯಾಹ್ನ ಎರಡು ಗಂಟೆಗೆ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಮಮತಾ ಬ್ಯಾನರ್ಜಿ ಸರಕಾರ ಪ್ರಸ್ತಾವ ಪಾಸು ಮಾಡಲಿದೆ. ಪಶ್ಚಿಮ ಬಂಗಾಳದ ಎಲ್ಲ ಪಾರ್ಟಿಗಳು ಪ್ರಸ್ತಾವವನ್ನು ಬೆಂಬಲಿಸಬಹುದು ಎಂಬ ನಿರೀಕ್ಷೆಯನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.

ಕೇರಳ ಸರಕಾರ ಮೊತ್ತ ಮೊದಲು ಪ್ರಸ್ತಾವ ಪಾಸು ಮಾಡಿತ್ತು. ಜೊತೆಗೆ ಪೌರತ್ವ ಕಾನೂನು ವಿರುದ್ಧ ಸುಪ್ರೀಂಕೋರ್ಟಿನ ಮೊರೆ ಹೋಗಿದೆ. ನಂತರ ಪಂಜಾಬ್, ರಾಜಸ್ತಾನ ಸರಕಾರಗಳು ಪ್ರಸ್ತಾವ ತಂದಿವೆ. ಮಮತಾ ಬ್ಯಾನರ್ಜಿ ಸರಕಾರ ಪ್ರಸ್ತಾವ ಪಾಸು ಮಾಡದಿರುವುದನ್ನು ಸಿಪಿಎಂ ಈ ಹಿಂದೆ ಟೀಕಿಸಿತ್ತು. ಕಳೆದ ಸೆಪ್ಟಂಬರ್ ನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ತೃಣಮೂಲ ಕಾಂಗ್ರೆಸ್ ತಂದ ಪ್ರಸ್ತಾವವನ್ನು ಕಾಂಗ್ರೆಸ್, ಸಿಪಿಎಂಗಳು ಬೆಂಬಲಿಸಿದ್ದವು.