ಸನ್ಮಾರ್ಗ ವಾರ್ತೆ
ಬಂಚುಲ್, ಜ. 27: ಬಾಂಗ್ಲಾ ದೇಶದ ಕಾಕ್ಸ್ ಬಝಾರಿನಲ್ಲಿರುವ ರೋಹಿಂಗ್ಯನ್ ನಿರಾಶ್ರಿತರ ಶಿಬರಕ್ಕೆ ಭೇಟಿ ನೀಡುವ ಗಾಂಬಿಯದ ಕಾನೂನು ಸಚಿವ ಅಬೂಬಕರ್ ತಬದೌವಿಯವರ ತೀರ್ಮಾನ ಹೋರಾಟಕ್ಕೆ ಮಾರ್ಗ ದೀವಿಗೆಯಾಯಿತು. ಬಲಿಪಶುಗಳ ಅನುಭವಗಳನ್ನು ಆಲಿಸಿದ ತಬದೌವಿಯವರು ಇದು ಅಂತಾರಾಷ್ಟ್ರೀಯ ಟಿವಿ ಮಾಧ್ಯಮಗಳ ರೂಢಿಯಲ್ಲಿರುವ ಸುದ್ದಿಯಲ್ಲ ಎಂದು ಅರ್ಥ ಮಾಡಿಕೊಂಡರು. ಜನರು ಸೇನೆಯು ಜೊತೆಗೂಡಿ ಸುಸೂತ್ರವಾಗಿ ರೋಹಿಂಗ್ಯನ್ ಜನರ ವಂಶಹತ್ಯೆ ಮಾಡಿದ್ದನ್ನು ಮನಗಂಡರು. ಮ್ಯಾನ್ಮಾರ್ ಸ್ಟೇಟ್ ಕೌನ್ಸಿಲರ್ ನೊಬೆಲ್ ವಿಜೇತೆ ಆಂಗ್ ಸಾನ್ ಸೂಕಿಯವರೆಗೂ ವಿಚಾರಣೆಯನ್ನು ಕೊಂಡು ಹೋಗುವಲ್ಲಿ ಅವರು ಹೋರಾಟ ನಡೆಸಿದರು.
1994ರಲ್ಲಿ ರುವಾಂಡದಲ್ಲಿ ನಡೆದಿದ್ದ ವಂಶಹತ್ಯೆಗೆ ಸಮಾನವಾದ ಘಟನೆ ರೋಹಿಂಗ್ಯನ್ ಪ್ರಕರಣವೆಂದು ಅವರು ಹೇಳಿದರು. ಅಂದು ಎಂಟು ಲಕ್ಷ ಟುಟ್ಸಿ ವಂಶಜರು ಕೊಲ್ಲಲ್ಪಟ್ಟಿದ್ದರು. ರೋಹಿಂಗ್ಯನ್ ವಂಶಜರನ್ನು ಪೂರ್ಣವಾಗಿ ಇಲ್ಲದಾಗಿಸುವ ಶ್ರಮ ಮ್ಯಾನ್ಮಾರ್ ನಲ್ಲಿ ನಡೆದಿದೆ ಎಂದರು. ಅವರು ಈ ಹಿಂದೆ ವಿಶ್ವಸಂಸ್ಥೆಯ ರುವಾಂಡ ಟ್ರಿಬ್ಯೂನಲ್‍ನಲ್ಲಿ ಪ್ರಾಸಿಕ್ಯೂಟರ್ ಆಗಿದ್ದರು.












