ಎನ್‌ಆರ್‌ಸಿ ಜೊತೆಗಿನ ಸಂಬಂಧವನ್ನು ಕಡಿತಗೊಳಿಸದಿದ್ದರೆ ನಾವು ಎನ್‌ಪಿಆರ್ ಅನ್ನು ಬಹಿಷ್ಕರಿಸುತ್ತೇವೆ- ಸೈಯದ್ ಸಆದತುಲ್ಲಾ ಹುಸೇನಿ

0
919

ಸನ್ಮಾರ್ಗ ವಾರ್ತೆ

ನವದೆಹಲಿ, ಎನ್‌ಪಿಆರ್ ಕುರಿತು ಸಂಸತ್ತಿನಲ್ಲಿ ಗೃಹ ಸಚಿವರ ಹೇಳಿಕೆಯ ಕುರಿತಂತೆ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸದತುಲ್ಲಾ ಹುಸೇನಿ ಅವರು We the people of India ಮತ್ತು ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ದ ಮೈತ್ರಿ ಪ್ರತಿನಿಧಿಗಳ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದ್ದು, ಆ ಬಗ್ಗೆ ವಿವರವಾಗಿ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.

“ಎನ್‌ಆರ್‌ಸಿಯಿಂದ ಬಡವರು ಮತ್ತು ಬಡತನದ ಅಂಚಿನಲ್ಲಿರುವವರು ತೊಂದರೆ ಅನುಭವಿಸುತ್ತಾರೆ, ಎನ್‌ಪಿಆರ್ ಎಂಬುದು ಎನ್‌ಆರ್‌ಸಿಯನ್ನು ನಡೆಸುವುದಕ್ಕೆ ಮಾಡುವ ಮೊದಲ ಹೆಜ್ಜೆಯಾಗಿರುವುದರಿಂದ ನಾವು ಎನ್ ಪಿ ಯಾರನ್ನು ಬಹಿಷ್ಕರಿಸುತ್ತೇವೆ. ಹೀಗೆ ಮಾಡಬಾರದು ಎಂದಾದರೆ, ಕೇಂದ್ರ ಸರಕಾರವು ಎನ್‌ಆರ್‌ಸಿಯನ್ನು ಎನ್‌ಪಿಆರ್‌ ಯೊಂದಿಗೆ ಜೋಡಿಸಬಾರದು ಮತ್ತು ಆ ಬಗ್ಗೆ 2003 ರ ತಿದ್ದುಪಡಿಯಲ್ಲಿರುವ ಸಂಬಂಧವನ್ನು ಕಡಿತಗೊಳಿಸಬೇಕು. ಡಿಲಿಂಕ್ ( ಸಂಬಂಧ ಕಡಿತಗೊಳಿಸಬೇಕು) ಮಾಡಬೇಕು. ಎನ್‌ಪಿಆರ್‌ನಿಂದ ಎನ್‌ಆರ್‌ಸಿಯನ್ನು ಡಿಲಿಂಕ್ ಮಾಡಲು ಸರ್ಕಾರವು ಎನ್‌ಪಿಆರ್ ನಿಯಮಗಳನ್ನು ತಿದ್ದುಪಡಿ ಮಾಡಿದರೆ ನಾವು ಎನ್‌ಪಿಆರ್ ನಲ್ಲಿ ಭಾಗವಹಿಸುತ್ತೇವೆ. ಎನ್‌ಪಿಆರ್‌ನಿಂದ ಎನ್‌ಆರ್‌ಸಿಯನ್ನು ಡಿಲಿಂಕ್ ಮಾಡಲು ಎನ್‌ಪಿಆರ್ ನಿಯಮಗಳಲ್ಲಿ ಸರಿಪಡಿಸದಿದ್ದರೆ ಗೃಹ ಸಚಿವರ ಆಶ್ವಾಸನೆಗಳಿಗೆ ಯಾವುದೇ ಪ್ರಾಯೋಗಿಕ ಮಹತ್ವವಿಲ್ಲ ಮತ್ತು ನಾವು ಎನ್‌ಪಿಆರ್ ಅನ್ನು ಬಹಿಷ್ಕರಿಸುತ್ತೇವೆ. ಜನಗಣತಿ ಬಹಳ ಮುಖ್ಯವಾದ ಪ್ರಕ್ರಿಯೆ ಮತ್ತು ನೀತಿ ರಚನೆಗೆ ಬಹಳ ಉಪಯುಕ್ತವಾಗಿದೆ. ಜನಗಣತಿಯನ್ನು ಎನ್‌ಪಿಆರ್‌ಗೆ ಜೋಡಿಸಬಾರದು, ಎನ್‌ಪಿಆರ್ ಮತ್ತು ಜನಗಣತಿಯನ್ನು ಜೋಡಿಸಿದರೆ ಎನ್‌ಪಿಆರ್ ಅನ್ನು ಬಹಿಷ್ಕರಿಸುವುದರಿಂದ ಜನಗಣತಿಯ ಮೇಲೂ ಪರಿಣಾಮ ಬೀರುತ್ತದೆ ಮತ್ತು ಸರಿಯಾದ ಮಾಹಿತಿ ಸಿಗುವುದಿಲ್ಲ. ಎನ್‌ಪಿಆರ್ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಮಾಡಿದ ಘೋಷಣೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಬೆಂಬಲಿಸುತ್ತದೆ ” ಎಂದು ಸೈಯದ್ ಸಆದತುಲ್ಲಾ ಹುಸೇನಿ ಹೇಳಿದರು.