ಫೆಲಸ್ತೀನ್ ಜನತೆ ಜತೆ ನಾವಿದ್ದೇವೆ, ಯುದ್ಧ ನಿಲ್ಲಿಸಲು ಯತ್ನಿಸುತ್ತಿದ್ದೇವೆ -ಸೌದಿ ಯುವರಾಜ ಮುಹಮ್ಮದ್ ಹೇಳಿಕೆ

0
9846

ಸನ್ಮಾರ್ಗ ವಾರ್ತೆ

ಜಿದ್ದ, ಅ. 11: ಫೆಲಸ್ತೀನಿನ ಜನರ ಜೊತೆ ನಾವಿದ್ದು ಯುದ್ಧ ನಿಲ್ಲಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸೌದಿಯ ಯುವರಾಜ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

ಅತ್ತ ಇಸ್ರೇಲ್ ಗಾಝಾವನ್ನು ನಾಲ್ಕು ಸುತ್ತಲೂ ಸುತ್ತುವರಿದು ಲಕ್ಷಾಂತರ ಇಸ್ರೇಲಿ ಸೈನಿಕರು ಭೂ ಯುದ್ಧಕ್ಕೂ ತಯಾರಿ ನಡೆಸುತ್ತಿದ್ದಾರೆ. ಫೆಲಸ್ತೀನಿನ ಮತ್ತು ಇಸ್ರೇಲಿನ ನಡುವೆ ತೀವ್ರ ತೆರನಾದ ಯುದ್ಧ ಇದು. ಇದು ಮಧ್ಯಪ್ರಾಚ್ಯದುದ್ದಕ್ಕೂ ಹರಡಬಹುದು. ಅದನ್ನು ತಡೆಯುವುದಕ್ಕೆ ಎಲ್ಲ ಅಂತಾರಾಷ್ಟ್ರೀಯ ಪ್ರದೇಶದ ವಿಭಾಗಗಳ ಜೊತೆ ವಿಚಾರ ನಡೆಸಲು ಸೌದಿ ಅರೇಬಿಯ ತನಗೆ ಸಾಧ್ಯವಿದ್ದ ಪ್ರಯತ್ನ ಮಾಡುವುದು ಎಂದು ಫೆಲಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸರಿಗೆ ಫೋನ್ ಮೂಲಕಸಂಭಾಷಣೆಯಲ್ಲಿ ಅವರು ಹೇಳಿದರು.

ಈಗ ಯುದ್ಧ ಮಾಡುತ್ತಿರುವುದು ಅಬ್ಬಾಸ್‍ರ ಫೆಲಸ್ತೀನ್ ವಿಮೋಚನಾ ಫ್ರಂಟ್ ಅಲ್ಲ. ಗಾಝಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಎಂಬ ಪ್ರತಿರೋಧ ಸಂಘಟನೆಯಾಗಿದೆ. ಗಾಝಾದ ಸಮೀಪದಲ್ಲಿ ಆಗುತ್ತಿರುವ ಸೈನಿಕ ದಾಳಿಯ ಕುರಿತು ನಾಗರಿಕರ ಜೀವಕ್ಕೆ ಬೆದರಿಕೆಯಾಗುವ ಕೆಟ್ಟು ಹೋದ ಪರಿಸ್ಥಿತಿಯ ಕುರಿತು ಮತ್ತು ವಲಯದ ಸುರಕ್ಷೆಯ ಕುರಿತು ಇಬ್ಬರು ಚರ್ಚಿಸಿದ್ದಾರೆ.

ಅಂತಾರಾಷ್ಟ್ರೀಯ ಮಾನವೀಯ ಕಾನೂನು ಅನುಸರಿಸಬೇಕು. ಜನರನ್ನು ಗುರಿಯಿಟ್ಟು ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದು ಯುವರಾಜ ಹೇಳಿದರು. ಗೌರವಾನ್ವಿತ  ಜೀವನಕ್ಕೆ ನ್ಯಾಯಪೂರ್ಣ ಹಕ್ಕುಗಳಿಗೆ ಗಳಿಸಲು ನಿರೀಕ್ಷೆ ಆಕಾಂಕ್ಷೆ ಈಡೇರಿಸಿಕೊಳ್ಳಲು ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಲು ಫೆಲಸ್ತೀನಿ ಜನರ ಹಕ್ಕುಗಳಿಗಾಗಿ ಅವರ ಜೊತೆ ನಾವಿದ್ದೇವೆ ಎಂದು ಸೌದಿ ಅರೇಬಿಯ ಹೇಳಿದೆ.

ಆದರೆ ಇಸ್ರೇಲ್ ಮತ್ತು ಅಮೆರಿಕ ಯುದ್ಧದ ತೀವ್ರತೆಯನ್ನು ಹೆಚ್ಚಿಸುತ್ತಿದೆ. ವಿಮಾನದ ಮೂಲಕ ಅತ್ಯಾಧುನಿಕ ಆಯುಧಗಳನ್ನು ಇಸ್ರೇಲಿಗೆ ಅಮೆರಿಕ ಕಳುಹಿಸಿಕೊಟ್ಟಿದೆ.

ಸೌದಿ ಸೂಚಿಸಿದ ಬೆಂಬಲಕ್ಕೆ ಅಬ್ಬಾಸ್‍ರು ಕೃತಜ್ಞತೆ ಹೇಳಿದರು. ಸೌದಿಯ ದೃಢ ನಿಲುವು ಫೆಲಸ್ತೀನಿನ ಜನರ ಜೊತೆ ನಿಲ್ಲಲು ಮಾಡುತ್ತಿರುವ ಪ್ರಯತ್ನಗಳನ್ನು ಅಭಿನಂದಿಸಿದರು.

ಇದೇ ವೇಳೆ ಫೆಲಸ್ತೀನ್ ಇಸ್ರೇಲ್ ಯುದ್ಧ ಕೊನೆಗೊಳಿಸಲು ಪ್ರಯತ್ನ ಮುಂದುವರಿಸುತ್ತಿದ್ದೇವೆ ಎಂದು ಮುಹಮ್ಮದ್ ಹೇಳಿದರು. ಇದರ ಅಂಗವಾಗಿ ವಿವಿಧ ಅರಬ್ ದೇಶದ ನಾಯಕರು ಫೋನ್‍ನಲ್ಲಿ ಮಾತಾಡಿದ್ದಾರೆ. ಫೆಲಸ್ತೀನಿನ ಜನರ ಹಕ್ಕುಗಳನ್ನು ಗಳಿಸಿಕೊಡಲು ತಮ್ಮ ದೇಶ ಅವರ ಜೊತೆ ನಿಲ್ಲುತ್ತದೆ ಎಂದು ಯುವ ರಾಜ ಪುನರುಚ್ಚರಿಸಿದ್ದರು. ಬಹುಶಃ ಇಂತಿಪಾದ ಚಳವಳಿ ಹಮಾಸ್ ಆರಂಭಿಸಿದ ಘಟ್ಟದಿಂದಲು ಸೌದಿ ಅರೇಬಿಯ ಇದೇ ಮಾತು ಹೇಳುತ್ತಾ ಬಂದಿದೆ.

ಈಗ ಯುಎಇ ಹಮಾಸನ್ನು ಖಂಡಿಸುತ್ತಿದೆ. ಅದರ ವಾಣಿಜ್ಯಿಕ ವ್ಯವಹಾರಗಳಿಗಾಗಿ ಇದು ಎಂಬ ಆರೋಪಗಳು ಕೇಳಿ ಬರುತ್ತಿದೆ. ಇಂತಿಪಾದ ಚಳವಳಿ 1980ರಲ್ಲಿ ತೀವ್ರ ಸ್ವರೂಪದಲ್ಲಿತ್ತು. ಆಗ ಹಮಾಸನ್ನು ಅಮೆರಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರಲಿಲ್ಲ.

ಈಜಿಪ್ಟಿನ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್‍ಸಿಸಿ, ಜೋರ್ಡಾನಿನ ದೊರೆ ಅಬ್ದುಲ್ಲ ದ್ವಿತೀಯರೊಂದಿಗೆ ಮುಹಮ್ಮದ್ ಮಾತಾಡಿದರು. ಗಾಝದ ಮತ್ತು ಪರಿಸದ ಘರ್ಷಣೆ ತಡೆಯಲು ಅದು ಇತರೆಡೆಗೆ ಹರಡದಂತಾಗಲು ಬಲವಾಗಿ ಪ್ರಯತ್ನ ನಡೆಸಬೇಕು ಅದರ ಆವಶ್ಯಕತೆಗಳ ಬಗ್ಗೆ ಈಜಿಪ್ಟ್ ಅಧ್ಯಕ್ಷರೊಂದಿಗೆ ಮುಹಮ್ಮದ್ ಚರ್ಚಿಸಿದರು.

ಘರ್ಷಣೆ ತೀವ್ರಗೊಂಡು ಜನಸಾಮಾನ್ಯರ ಜೀವ ಹಾನಿಯಾಗುತ್ತಿದೆ. ಪರಿಸ್ಥಿತಿ ಹದಗೆಟ್ಟಿದೆ. ಇದೇ ವೇಳೆ ಪ್ರದೇಶದ ಸುರಕ್ಷೆಯ ಬಗ್ಗೆ ಅರಬ್ ನಾಯಕರು ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.