ಬಟ್ಟೆಯ ಮಾಸ್ಕ್ ಬದಲು ಸರ್ಜಿಕಲ್ ಮಾಸ್ಕ್ ಧರಿಸಿ: ಕತಾರ್ HMC ಅಧಿಕಾರಿ

0
27

ಸನ್ಮಾರ್ಗ ವಾರ್ತೆ

ದೋಹಾ: ವಸ್ತ್ರದಿಂದ ತಯಾರಿಸಲಾದ ಮಾಸ್ಕ್ ಧರಿಸುವುದರಿಂದ ರೋಗಾಣುಗಳು ಹರಡುವ ಸಾಧ್ಯತೆ ಅಧಿಕವಾಗಿದ್ದು ಜನರು ಕಡ್ಡಾಯವಾಗಿ ಸರ್ಜಿಕಲ್ ಮಾಸ್ಕ್ ಧರಿಸಬೇಕು ಎಂದು ಕತಾರ್ ಮೆಡಿಕಲ್ ಕಾರ್ಪೊರೇಷನ್ ಇನ್ಫೆಕ್ಷನ್ ಕಂಟ್ರೋಲ್ ಪ್ರಾಕ್ಟೀಷನರ್ ಉಮರ್ ಅಲ್ ಹಸನ್ ಹೇಳಿದ್ದಾರೆ. ಬೇರೆ ಬೇರೆ ಬಗೆಯ ಮಾಸ್ಕ್‌ಗಳು ಇವತ್ತು ಲಭ್ಯವಿದೆ, ಆದರೆ ವಸ್ತ್ರದಿಂದ ಮಾಡಲಾದ ಮಾಸ್ಕ ಧರಿಸುವುದನ್ನು ತ್ಯಜಿಸಬೇಕು ಎಂದವರು ಹೇಳಿದ್ದಾರೆ

ಎಲ್ಲರೂ ಸರ್ಜಿಕಲ್ ಮಾಸ್ಕ್ ಧರಿಸಬೇಕು. ಈ ಮಾಸ್ಕ್‌ನಲ್ಲಿ ಮೂರು ಮಜಲುಗಳಿವೆ. ಉನ್ನತ ದರ್ಜೆಯಲ್ಲಿ ರಕ್ಷಣೆ ನೀಡುವ ಎನ್ 95 ಮಾಸ್ಕ್‌ಗಳು ಕೂಡ ಲಭ್ಯವಿವೆ. ಜನರ ಪಾಲಿಗೆ ಸರ್ಜಿಕಲ್ ಮಾಸ್ಕ್ ಅತ್ಯಂತ ಉತ್ತಮ ಎಂದವರು ಹೇಳಿದ್ದಾರೆ

ಕೊರೋನಾ ಪಾಸಿಟಿವ್ ಆದ ಒಬ್ಬರು ಮನೆಯಲ್ಲಿ ಏಕಾಂತದಲ್ಲಿರುವಾಗ ಮಾಸ್ಕ್‌ನ ಅಗತ್ಯವಿಲ್ಲ. ಅವರು ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಪಾಸಿಟಿವ್ ಕೊರೋನಾ ಆದವರು ಮಾಸ್ಕ್ ಧರಿಸುವಂತೆ ನಾವು ಹೇಳುತ್ತಿಲ್ಲ. ಪಾಸಿಟಿವ್ ಆಗಿ ಐಸೋಲೇಷನ್ ನಲ್ಲಿ ಇರುವವರು ವಿಶ್ರಾಂತಿ ಕಡ್ಡಾಯವಾಗಿ ಪಡೆಯಬೇಕು. ಸಾಕಷ್ಟು ನೀರು ಕುಡಿಯಬೇಕು. ಜ್ವರ ಕಡಿಮೆಯಾಗುವುದಕ್ಕೆ ಔಷಧವನ್ನು ಪಡಕೊಳ್ಳಬೇಕು. ಅವರು ಉಪಯೋಗಿಸುವ ಯಾವುದೇ ವಸ್ತುವನ್ನು ಇತರರು ಹಂಚಿಕೊಳ್ಳಬಾರದು ಎಂದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here