ಸ್ವತಂತ್ರ ಚುನಾವಣೆಗೆ ಯಾವ ಕ್ರಮ ಕೈಗೊಂಡಿದ್ದೀರಿ: ತ್ರಿಪುರ ಸರಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟು

0
275

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸ್ಥಳೀಯಾಡಳಿತ ಚುನಾವಣೆಯನ್ನು ಸ್ವತಂತ್ರವಾಗಿ ನಡೆಸಲು ಯಾವ ಕ್ರಮವನ್ನು ಕೈಗೊಂಡಿದ್ದೀರಿ ಎಂದು ತ್ರಿಪುರ ಸರಕಾರವನ್ನು ಸುಪ್ರೀಂ ಕೋರ್ಟು ಪ್ರಶ್ನಿಸಿತು. ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನ ಈ ರೀತಿ ಪ್ರಶ್ನಿಸಿದೆ. ಜಸ್ಟಿಸ್ ಡಿವೈ ಚಂದ್ರಚೂಡ್, ಎ.ಎಸ್ ಬೋಪಣ್ಣರವರು ಅರ್ಜಿಯಲ್ಲಿ ವಿಚಾರಣೆ ನಡೆಸಿದರು.

ಚುನಾವಣೆ ನಡೆಸಲು ಯಾವೆಲ್ಲ ಕ್ರಮವನ್ನು ಸ್ವೀಕರಿಸಲಾಗಿದೆ ಎಂದು ಮಧ್ಯಾಹ್ನದೊಳಗೆ ವಿವರಿಸಬೇಕೆಂದು ಸುಪ್ರೀಂ ಕೋರ್ಟು ತ್ರಿಪುರ ಸರಕಾರಕ್ಕೆ ಸೂಚಿಸಿತು. ನಾಯಕರ ಮೇಲೆ ದಾಳಿ ಆಗುತ್ತಿದೆ. ತ್ರಿಪುರದಲ್ಲಿ ಚುನಾವಣಾ ಪ್ರಚಾರ ನಡೆಸಲು ಬಿಡುತ್ತಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸುಪ್ರೀಂ ಕೋರ್ಟಿಗೆ ದೂರು ನೀಡಿತ್ತು.

ಅಕ್ಟೋಬರ್ 22ಕ್ಕೆ ತ್ರಿಪುರದಲ್ಲಿ ಚುನಾವಣಾ ಘೋಷಣೆ ಅಸ್ತಿತ್ವದಲ್ಲಿದೆ. ನವೆಂಬರ್ 25ಕ್ಕೆ 13 ಮುನ್ಸಿಪಲ್ ಕೌನ್ಸಿಲ್‌ಗಳಿಗೆ ಮತ್ತು ಆರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.