ಮಾಲ್ಕಮ್ ಎಕ್ಸ್‌ರವರ ಪುತ್ರಿ ಮಲಿಕಾಹ್ ಶಬಾಝ್ ಮೃತ ಸ್ಥಿತಿಯಲ್ಲಿ ಪತ್ತೆ

0
233

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಮಾಲ್ಕಮ್ ಎಕ್ಸ್‌ರವರ ಪುತ್ರಿ ಮಲಿಕಾಹ್ ಶ‌ಬಾಝ್ ಬ್ರೂಕ್ಲಿನ್‍ನ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಅವರ ಮಗಳೇ ಅವರು ಮೃತರಾದ ಸ್ಥಿತಿಯಲ್ಲಿದ್ದುದನ್ನು ಮೊದಲು ನೋಡಿದ್ದಾರೆ. ಮರಣೋತ್ತರ ವರದಿಯ ವಿವರಗಳ ಬಳಿಕ ಸಾವಿಗೆ ಕಾರಣವೇನೆಂದು ತಿಳಿದುಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಿಗೂಢತೆ ಈವರೆಗೆ ತಿಳಿದು ಬಂದಿಲ್ಲ ಎಂದೂ ಪೊಲೀಸರು ಹೇಳಿದರು.

ಮಲಿಕಾಹ್ ಶಬಾಝ್ ಸಾವಿಗೆ ತಾನು ಅತಿಯಾಗಿ ದುಃಖಿತಳಾಗಿದ್ದೇನೆ ಎಂದು ಮಾರ್ಟಿನ್ ಲೂಥರ್ ಕಿಂಗ್‌ರ ಪುತ್ರಿ ಬರ್ನಸ್ ಕಿಂಗ್ ಟ್ವೀಟ್ ಮಾಡಿದರು.

1960ರಲ್ಲಿ ಅಮೆರಿಕದ ಆಫ್ರೋ-ಅಮೆರಿಕನ್ ಹೋರಾಟ ಮತ್ತು ಮಾನವಹಕ್ಕು ಹೋರಟದ ನಾಯಕನಗಿ ಮಾಲ್ಕಮ್ ಎಕ್ಸ್  ಗುರುತಿಸಲ್ಪಟ್ಟವರು. 1965 ಫೆಬುವರಿ 21ಕ್ಕೆ ವಾಷಿಂಗ್ಟನ್ನ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡುವ ವೇಳೆ ಗರ್ಭಿಣೆ ಪತ್ನಿ ಹಾಗೂ ಮೂವರು ಮಕ್ಕಳೆದುರೇ ಮಾಲ್ಕಮ್ ಎಕ್ಸ್‌ರನ್ನು ಹತ್ಯೆ ಮಾಡಲಾಗಿತ್ತು.

ಕರಿಯರ ವಿರುದ್ಧದ ತಾರತಮ್ಯವನ್ನು ವಿರೋಧಿಸಿ ಅವರು ಹೋರಾಟಕ್ಕೆ ನೇತೃತ್ವ ವಹಿಸಿದ್ದರು. ಮಾಲ್ಕಮ್ ಎಕ್ಸ್ ಆಪ್ರೋ-ಅಮೆರಿಕನ್ ವಂಶಜನಾಗಿದ್ದರು. ಇವರು ‘ಅಲ್‍ಹಾಜ್ ಮಲಿಕ್ ಅಲ್ ಶಬಾಝ್’ ಎಂಬ ಹೆಸರಿನಿಂದ ಅರಿಯಲ್ಪಡುತ್ತಿದ್ದರು.

ಬಿಳಿಯರ ತೀವ್ರವಾದಿ ಸಂಘಟನೆ ಕುಕ್ಲಕ್ಸ್ ಕ್ಲಾನ್ ದಾಳಿಯಲ್ಲಿ ಅವರ ತಂದೆ ಕ್ರೈಸ್ತ ಪ್ರವಚನಕಾರ ಎಲ್.ಲಿಟಿಲ್ ಮತ್ತು ಅವರ ತಂದೆಯ ಮೂವರು ಸಹೋದರರು ಕೊಲ್ಲಲ್ಪಟ್ಟಿದ್ದರು. ಇದು ಮಾಲ್ಕಮ್‌ರನ್ನು ಕಪ್ಪು ಜನಾಂಗೀಯರ ಹಕ್ಕಿಗಾಗಿ ಬಲವಾದ ಹೋರಾಟಕ್ಕೆ ಪ್ರೇರೇಪಿಸಿತ್ತು. 1965 ಫೆಬುವರಿ 21ಕ್ಕೆ 40ನೇ ವಯಸ್ಸಿನಲ್ಲಿ ಆಫ್ರೋ-ಅಮೆರಿಕನ್ ಸಮ್ಮೇಳನದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದ ವೇಳೆ ಅವರನ್ನು ಗಂಡು ಹಾರಿಸಿ ಕೊಲೆ ಮಾಡಲಾಗಿತ್ತು.