ಸನ್ಮಾರ್ಗ ವಾರ್ತೆ
ತೃಶೂರ್, ಆ.7: ಮಣಿಪುರದಲ್ಲಿ ನಡೆದಿರುವುದು ಆಂತರಿಕ ಗಲಭೆಗಳಲ್ಲ ಜನಾಂಗೀಯ ನಿರ್ಮೂಲನೆಯಾಗಿದೆ ಎಂದು ಲೇಖಕಿ ಆರುಂಧತಿ ರಾಯ್ ಹೇಳಿದರು.
ಕೇಂದ್ರ ರಾಜ್ಯಗಳು ಜನಾಂಗೀಯ ನಿರ್ಮೂಲನಕ್ಕೆ ಸಹಕರಿಸಿತು. ಮಹಿಳೆಯರು ಅತ್ಯಾಚಾರವನ್ನು ಸಮರ್ಥಿಸುತ್ತಿದ್ದಾರೆ. ಮಹಿಳೆಯರ ಅತ್ಯಾಚಾರಕ್ಕೆ ಮಹಿಳೆಯರೇ ಕರೆ ನೀಡುತ್ತಿರುವ ಪರಿಸ್ಥಿತಿ ಅಲ್ಲಿದೆ. ಮಣಿಪುರ ಮಾತ್ರವಲ್ಲ. ಇತರ ಹಲವು ಕಡೆಯು ಇದು ಸಂಭವಿಸುತ್ತಿದೆ ಎಂದು ಆರುಂಧತಿ ರಾಯ್ ಹೇಳಿದರು.
ಸಾರ್ವತ್ರಿಕ ಪೌರತ್ವವು ಫ್ಯಾಸಿಸಂ ಅನ್ನು ನಿಲ್ಲಿಸುವ ಮಾರ್ಗವಾಗಿದೆ. ಫ್ಯಾಸಿಸಂ ಸ್ಥಳೀಯತೆಯ ಬಗ್ಗೆ ಮಾತನಾಡುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಹಿಂದಿನ ರಾತ್ರಿ ಊಟಕ್ಕೆ ಬ್ರೆಡ್ ತಿಂದಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಅರುಂಧತಿ ರಾಯ್ ಹೇಳಿದರು.
ತೃಶೂರ್ ಸಾಹಿತ್ಯ ಅಕಾಡಮಿ ಹಾಲ್ನಲ್ಲಿ ನವಮಲಯಾಳಿ ಅನಿವಾಸಿ ಕೂಟದ ಸಾಂಸ್ಕೃತಿಕ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಅವರು ಮಾತಾಡುತ್ತಾ ಪ್ರಚಲಿತ ವಿದ್ಯಮಾನಗಳ ಕುರಿತು ತನ್ನ ಅಭಿಪ್ರಾಯವನ್ನು ಮಂಡಿಸಿದರು.
ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿ ಸಾಮಾಜಿಕ ಬದಲಾವಣೆಗೆ ಕೆಲಸ ಮಾಡು ಟ್ರಸ್ಟ್ ಗೆ ಕೊಡುವೆ, ಬರಹಗಾರರನ್ನು ಉತ್ತೇಜಿಸುವ ಕಾರ್ಯಕ್ರಮಗಳಲ್ಲಿ ವಿನಿಯೋಗಿಸುವೆ ಎಂದು ಆರುಂಧತಿ ರಾಯ ತಿಳಿಸಿದರು.












