ಫೆಲೆಸ್ತೀನ್: ಅಬ್ಬಾಸ್ ನಂತರ ಮುಂದಿನ ಅಧ್ಯಕ್ಷ ಯಾರು?

0
145

ಸನ್ಮಾರ್ಗ ವಾರ್ತೆ

ಜೆರುಸಲೇಮ್:  ಮುಂದಿನ ಚುನಾವಣೆಯಲ್ಲಿ 87 ವರ್ಷದ ಫೆಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರು ಸ್ಪರ್ಧಿಸುವುದು ಅನುಮಾನಾಸ್ಪದವಾಗಿದ್ದು ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ ಫೆಲೆಸ್ತೀನಿ ಅಥಾರಿಟಿ ಕುಸಿದು ಹೋಗಬಹುದು ಎಂದು  ವರದಿಗಳು ತಿಳಿಸುತ್ತಿವೆ.

ಯಾಸಿರ್ ಅರಫಾತ್ ಅವರ ನಿಧನದ ಬಳಿಕ 2004ರಲ್ಲಿ ಮೊಹಮ್ಮದ್ ಅಬ್ಬಾಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆ ಬಳಿಕ ಈವರೆಗೆ ಅಧ್ಯಕ್ಷೀಯ ಚುನಾವಣೆ ನಡೆದಿಲ್ಲ. ಅಬ್ಬಾಸ್ ತನ್ನ ನಂತರ ಯಾರು ಎಂಬುದನ್ನು ಇನ್ನೂ ತಿಳಿಸಿಲ್ಲ. ಅಥವಾ ಯಾವುದೇ ಅಭ್ಯರ್ಥಿಯನ್ನು ಮುಂದಿನ ಅಧ್ಯಕ್ಷ ಎಂದು ಗುರುತಿಸಿಲ್ಲ. ಈ ಹಿನ್ನೆಲೆಯಲ್ಲಿ ಫೆಲೆಸ್ತೀನಲ್ಲಿ ಮುಂದಿನ ದಿನಗಳಲ್ಲಿ ಮೆರವಣಿಗೆ ಘರ್ಷಣೆ ಕಿತ್ತಾಟಗಳು ನಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.