ಸನ್ಮಾರ್ಗ ವಾರ್ತೆ
✍️ಅರಫಾ ಮಂಚಿ
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಾಡ್ಕ್ಯಾಸ್ಟ್ ಸಂದರ್ಶನದಲ್ಲಿ ಹಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡರು. “ನಾನು ಒಬ್ಬ ಮನುಷ್ಯ, ದೇವರಲ್ಲ. ನಾನು ಕೂಡ ತಪ್ಪುಗಳನ್ನು ಮಾಡುತ್ತೇನೆ.” ರಾಜಕೀಯಕ್ಕೆ ಸೇರುವುದರ ಉದ್ದೇಶದ ಬಗ್ಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯಲ್ಲ, ಧ್ಯೇಯವಿರಬೇಕು ಎಂದು ಹೇಳಿದರು.
ಒಳ್ಳೆಯ ಜನರು ರಾಜಕೀಯಕ್ಕೆ ಬರುತ್ತಲೇ ಇರಬೇಕು.. ಇದು ಮೋದಿ ಮಾತು. ಯಾರು ಒಳ್ಳೆಯವರೋ ಯಾರು ಕೆಟ್ಟವರೋ ಇತರರು ತೀರ್ಮಾನಿಸಬೇಕು. ಒಬ್ಬ ರಾಜಕಾರಣಿ ಎಂಬ ನೆಲೆಯಲ್ಲಿ ಮೋದಿಯವರನ್ನು ಜನರು ತೀರ್ಮಾನಿಸಬೇಕು. ಸ್ವಯಂ ಮೋದಿಯಲ್ಲ. ಬಿಜೆಪಿಯವರ ದುರವಸ್ಥೆ ಎಂದರೆ ಅವರು ಅವರನ್ನೇ ತೀರ್ಮಾನಿಸುತ್ತಾರೆ ಇರಲಿ.
ಈ ಮಾತು ಯಾಕೆಂದರೆ ದಿಲ್ಲಿ ಮತ್ತು ಬಿಹಾರಗಳಲ್ಲಿ ಚುನಾವಣೆ ಹತ್ತಿರವಾಗಿದೆ. ದಿಲ್ಲಿಯಲ್ಲಿ ಫೆಬ್ರವರಿ 5ಕ್ಕೆ ಚುನಾವಣೆ ನಡೆಯುತ್ತದೆ. ಮೋದಿ ನಾನ್ ಬಯಾಲಜಿ ಕಲ್ನಿಂದ ಬಯಾಲಜಿಕಲ್ ಆಗುವುದು, ನಾನೂ ಮನುಷ್ಯ ಎನ್ನುವುದರಲ್ಲಿ ಅಪ್ಪಟ ರಾಜಕೀಯದ ಬಣ್ಣ ಮಾತ್ರ ಇದೆ ಎಂದು ಜನರಿಗೂ ಅರ್ಥವಾಗಿದೆ.
ದಿಲ್ಲಿ ಚುನಾವಣೆಯನ್ನು ಮುಂದಿಟ್ಟುಕೊಳ್ಳುವುದಾದರೆ ಅಲ್ಲಿ ಮೋದಿಯಲ್ಲ ಕೇಜ್ರಿವಾಲ್ ದೊಡ್ಡ ಕುಳ. ಅದಕ್ಕೂ ಕಾರಣಗಳಿವೆ. ಕಾಂಗ್ರೆಸ್ನ ಆರೆಸ್ಸೆಸ್ನ ಸ್ಲೀಪರ್ ಸೆಲ್ಗಳು ಬಿಜೆಪಿಯತ್ತ ತಿರುಗುವುದು. ದಲಿತರು ಅಲ್ಪಸಂಖ್ಯಾತರು ಆಮ್ಆದ್ಮಿಯತ್ತ ತಿರುಗುವುದು. ಕೇಜ್ರಿವಾಲ್ ಪ್ರಚಂಡವಾಗಿ ಗೆಲ್ಲುವುದು. ಆದರೆ ಇದರಿಂದ ಎರಡೂ ಕಡೆಯು ಲಾಭ ಎತ್ತುವುದು ಆರೆಸ್ಸೆಸ್ ಮೆಂಟಾಲಿಟಿಯವರೇ. ಕಾರಣ ಇಂದು ರಹಸ್ಯವಾಗಿಲ್ಲ. ಕೇಜ್ರಿವಾಲ್ ಹಿಂದಿರುವುದು ಆರೆಸ್ಸೆಸ್ಸೇ. ದಿಲ್ಲಿಯಲ್ಲಿ ಅಲ್ಪಸಂಖ್ಯಾತರ ಮತ ಕ್ರೋಡೀಕರಿಸದೆ ಆರೆಸ್ಸೆಸ್ ಗೆಲ್ಲಲು ಸಾಧ್ಯವಿಲ್ಲ. ಆರೆಸ್ಸೆಸ್ ಗೆಲ್ಲಬೇಕಾದರೆ ಒಂದೋ ಬಿಜೆಪಿ ಗೆಲ್ಲಬೇಕು. ಅಲ್ಪಸಂಖ್ಯಾತರು ಮತ್ತು ದಲಿತರು ಕಾಂಗ್ರೆಸ್ಸಿನ ಸಾಂಪ್ರದಾಯಿಕ ವೋಟು ಬ್ಯಾಂಕ್ಗಳೇ.
2013ರಲ್ಲಿ ಟುಜಿ ಎಂಬ ಇಲ್ಲದ ಹಗರಣವನ್ನು ಮುಂದಿಟ್ಟು ಕಾಂಗ್ರೆಸನ್ನು ಸೋಲಿಸಲು ಅಣ್ಣಾ ಹಝಾರೆ ಮತ್ತು ಇದೇ ಕೇಜ್ರಿವಾಲ್ ಅನ್ನು ಆರೆಸ್ಸೆಸ್ ಬಳಸಿದ್ದನ್ನು ನೀವು ನೆನಪಿಸಿಕೊಳ್ಳಬಹುದು. ಈಗ ಬಿಜೆಪಿ ಬಗ್ಗೆ ಕೇಜ್ರಿವಾಲ್ ಬಹಳ ಮಾತಾಡುತ್ತಾರೆ. ಆರೆಸ್ಸೆಸ್ ಬಗ್ಗೆ ಒಂದು ಮಾತು ಆಡುವುದಿಲ್ಲ.
ಜನರಿಗೆ ಮರೆವು ಹೆಚ್ಚು. ಕೇಜ್ರಿವಾಲ್ರ ಉಚಿತ ಶಾಲೆಯ ಸೌಲಭ್ಯದ ಹಿಂದೆ ಸಂಘೀ ಅಜೆಂಡಾ ಇದೆ ಎಂದು ಜನರಿಗೆ ಅರ್ಥವೂ ಆಗಿದೆ. ಈ ಅಜೆಂಡವನ್ನು ಮೊತ್ತಮೊದಲು ಅರ್ಥ ಮಾಡಿಕೊಂಡಿದ್ದು ಎಎಪಿಯಲ್ಲಿದ್ದ ಚಾಂದಿನಿ ಚೌಕ್ ಶಾಸಕಿಯಾಗಿದ್ದ ಅಲ್ಕಾ ಲಾಂಬ. ಆನಂತರ ಬುದ್ಧನ ವಿಚಾರದಲ್ಲಿ ಮಾತಾಡಿದ್ದಕ್ಕಾಗಿ ರಾಜೀನಾಮೆ ನೀಡಿ ಹೊರ ಬಂದ ಎಎಪಿಯ ಮಾಜಿ ಸಚಿವ ರಾಜೇಂದ್ರ ಪಾಲ್ ಗೌತಂಗೂ ಅದು ಆಗಿತ್ತು. ಇವರಿಬ್ಬರು ಈಗ ಕಾಂಗ್ರೆಸ್ಸಿನಲ್ಲಿದ್ದಾರೆ.
ಹಾಗಿದ್ದರೆ ಬಿಜೆಪಿಯನ್ನು ಕೇಜ್ರಿವಾಲ್ ಯಾಕೆ ವಿರೋಧಿಸುತ್ತಿದ್ದಾರೆ? ಕೇಜ್ರಿವಾಲ್ ಸಹಿತ ಎಎಪಿ ನಾಯಕರನ್ನು ಮೋದಿ ಸರಕಾರ ಯಾಕೆ ಜೈಲಿಗೆ ಹಾಕಿತು ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿಯೇ ಉದ್ಭವಿಸುತ್ತದೆ. ಅದಕ್ಕೆ ನೇರ ಉತ್ತರ ಮೋದಿ ಮತ್ತು ಕೇಜ್ರಿವಾಲ್ರ ಇಗೋ ಕಾರಣ ಎಂಬುದು ಇನ್ನೊಂದು ಉತ್ತರ ಕೇಜ್ರಿವಾಲ್ರ ಮಹಾತ್ವಾಕಾಂಕ್ಷೆ. ಅವರು ಗುಜರಾತ್ಗೆ, ಗೋವಾಕ್ಕೆ, ಹರಿಯಾಣಕ್ಕೆ ಹೀಗೆ ಇಡೀ ದೇಶದಲ್ಲಿ ಎಎಪಿಯನ್ನು ವ್ಯಾಪಿಸಲು ಯತ್ನಿಸುತ್ತಿದ್ದಾರೆ ಎಂದು ಗುಪ್ತ ವರದಿ ಬಂದಂದಿನಿಂದಲೇ ಮೋದಿಗೆ ಕೇಜ್ರಿವಾಲ್ ವಿರುದ್ಧ ಕೆಂಗಣ್ಣು ಬಿತ್ತು. ತಾನೇ ಸಾಕಿದ ಗಿಣಿ ಹೀಗಾಯಿತಲ್ಲ ಎಂದು ಅವರು ಸುಮ್ಮನೆ ಕೂರಲಿಲ್ಲ. ಕಾರ್ಯಾಚರಣೆಗೆ ಇಳಿದರು. ಆರೆಸ್ಸೆಸ್ ಮಧ್ಯೆ ಬರದಿರುತ್ತಿದ್ದರೆ ಈಗಲೂ ಕೇಜ್ರಿವಾಲ್ ಸಹಿತ ಎಎಪಿ ನಾಯಕರು ಜೈಲಿನೊಳಗೆ ಇರುತ್ತಿದ್ದರು ಎಂದು ಹೇಳುವವರು ಇದ್ದಾರೆ.
ಈಗ ಅಂತೂ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ ಕಳೆದ 23 ವರ್ಷಗಳಿಂದ ದಿಲ್ಲಿಯಲ್ಲಿ ಅಧಿಕಾರ ಹಿಡಿದೇ ಇಲ್ಲ. ಈ ಸಲ ಗೆಲ್ಲಿಸುವ ಹಟದಲ್ಲಿ ಮೋದಿ ಶಾ ಇದ್ದಾರೆ. ಹೀಗಾಗಿ ನಾನು ಕೂಡ ಮನುಷ್ಯನೇ ದೇವರಲ್ಲ ನನ್ನಿಂದ ತಪ್ಪಾಗುತ್ತದೆ ಎಂದು ಮೋದಿ ಹೇಳತೊಡಗಿದ್ದಾರೆ.
ಆದರೆ ಪರಿಸ್ಥಿತಿ ದಿಲ್ಲಿಯಲ್ಲಿ ಈಗ ಹಾಗುಂಟಾ? ಮಾಧ್ಯಮಗಳ ವಿಶ್ಲೇಷಣೆಯಲ್ಲಿ ಹೇಳುವುದಾದರೆ ದಿಲ್ಲಿಗರಲ್ಲಿಯೂ ರಾಹುಲ್ ಗಾಂಧಿ ಜನಪ್ರಿಯ ವ್ಯಕ್ತಿಯಾಗಿ ಬದಲಾಗಿದ್ದಾರೆ. ಕಾಂಗ್ರೆಸ್ಸಿನ ಆರೆಸ್ಸೆಸ್ ಪರ ಸ್ಲೀಪರ್ ಸೆಲ್ಅನ್ನು ಒಂದು ಕಡೆ ದೂರ ಮಾಡುತ್ತಿರುವುದು ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತರಲ್ಲಿ ಮತ್ತೆ ಒಲವು ಗಳಿಸಲು ಕಾರಣವಾಯಿತು. ದಲಿತರೂ ಮೋದಿ ಆರೆಸ್ಸೆಸ್ ಅಮಿತ್ ಶಾ ಸಹಿತ ಸಂಘಪರಿವಾರದ ಸಂವಿಧಾನದ ವಿರುದ್ಧ ಓಟವನ್ನು ಅರ್ಥ ಮಾಡಿಕೊಂಡರು. ದಿಲ್ಲಿಯ ದಲಿತ ನಾಯಕರು ಕಾಂಗ್ರೆಸ್ಸಿನತ್ತ ಮುಖ ಮಾಡಿದರು.
ಮುಖ್ಯವಾಗಿ ಇಂದು ಜನರಿಗೆ ಸ್ಪಂದಿಸುವ ರಾಹುಲ್ ಗಾಂಧಿ ಇಷ್ಟವಾಗುತ್ತಿದ್ದಾರೆ. ಅದು ದಿಲ್ಲಿಯಲ್ಲಿ ಈ ಸಲ ಬಹಿರಂಗವಾಗಿಯೂ ಗೋಚರಿಸುತ್ತಿದೆ. ಆದ್ದರಿಂದ ಎಎಪಿಯ ವೋಟುಗಳು ಕಾಂಗ್ರೆಸ್ಸಿಗೆ ಬರುವ ಸಾಧ್ಯತೆ ಹೆಚ್ಚುತ್ತಿರುವುದರಿಂದ ಕೇಜ್ರಿವಾಲ್ ಹೆದರಿದ್ದಾರೆ. ಮೋದಿ ಶಾರೂ ಹೆದರಿದ್ದಾರೆ. ಹೀಗಾಗಿ ರಾಹುಲ್ರನ್ನು ಮಣಿಸಿ ಮೂಲೆಗೆ ಹಾಕುವ ಷಡ್ಯಂತ್ರದ ಕಾರಣದಿಂದ ಪ್ರತಿಪಕ್ಷಗಳ ಇಂಡಿಯಾ ಕೂಟವೇ ಒಡಕಿನತ್ತ ಸಾಗಿದೆ ಎಂಬ ವರದಿಗಳೂ ಇವೆ.
ದಿಲ್ಲಿಯಲ್ಲಂತೂ ಕೇಜ್ರಿವಾಲ್ಗೆ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಉದ್ಧವ್ ಶಿವಸೇನೆ ಬಹಿರಂಗ ಬೆಂಬಲ ಸಾರಿವೆ. ಆದರೆ ಕಾಂಗ್ರೆಸ್ ಕೂಡ ಇವರ ಮಿತ್ರ ಪಕ್ಷವೇ ಆಗಿಲ್ಲವೇ. ಇವರು ಕೇಜ್ರಿವಾಲ್ ರನ್ನು ಯಾಕೆ ಬೆಂಬಲಿಸಿದರು. ತಟಸ್ಥರಾಗಿರಬಹುದಿತ್ತಲ್ಲ. ಅಂದರೆ ಕಾಂಗ್ರೆಸ್ ಮತ್ತೆ ಬಲವರ್ಧಿಸಿಕೊಂಡರೆ ಎಎಪಿ, ಬಿಜೆಪಿ ಆಮ್ ಆದ್ಮಿ, ತೃಣಮೂಲ ಕಾಂಗ್ರೆಸ್ ಎಲ್ಲದಕ್ಕೂ ಅಪಾಯ. ಅಂದರೆ ಅಷ್ಟು ಅಪಾಯಕಾರಿಯಾಗಿ ರಾಹುಲ್ಗಾಂಧಿ ಜನಪ್ರಿಯತೆ ಹೆಚ್ಚುತ್ತಿದೆ.
ವಿಷಯಕ್ಕೆ ಬರೋಣ:
ದಿಲ್ಲಿ ಚುನಾವಣೆಯ ವಿಚಾರವನ್ನು ಮತ್ತೆ ಎತ್ತಿಕೊಳ್ಳುವುದಾದರೆ ಅಮಿತ್ ಶಾ ಚುನಾವಣೆಯ ಪ್ರಚಾರದಲ್ಲಿ ದಿಲ್ಲಿಯನ್ನು ಉತ್ತರ ಪ್ರದೇಶ ಮಾಡುತ್ತೇವೆ ಎಂದು ಘೋಷಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅಂತಹ ಮಾದರಿ ಏನಿದೆ? ಈಗ ಬಹುತೇಕ ಮುಸ್ಲಿಮರ ಹಿಡಿತದಲ್ಲಿರುವ ಮೊಗಲರ ಕಾಲದ ಅಥವಾ ಪ್ರಾಚೀನ ಮಸೀದಿಗಳ ಮೇಲೆ ಮೊಕದ್ದಮೆ ಹೂಡಿ ವಶಪಡಿಸುವ ಪ್ರಕ್ರಿಯೆ ಇದೆ. ಬಾಬರಿ ಆಯಿತು. ಈಗ ಹೊಸದಾಗಿ ಸಂಭಾಲ್ ಮಸೀದಿ. ವಾರಣಾಸಿ, ಮಥುರಾ ಇಲ್ಲೆಲ್ಲ ಅಲ್ಲದೆ ಹಳೆಯ ಮಸೀದಿಗಳ ಮೇಲೆ ಸಂಘ ಪರಿವಾರ ತಮ್ಮ ಧ್ವಜ ಹಾರಿಸಲು ನೋಡುತ್ತಿಲ್ಲವೇ. ಅದನ್ನೆ ಅಮಿತ್ ಶಾ ದಿಲ್ಲಿಯಲ್ಲಿಯೂ ಬಯಸುತ್ತಿದ್ದಾರೆ ಎಂದು ಅವರು ದಿಲ್ಲಿಯನ್ನು ಉತ್ತರ ಪ್ರದೇಶ ಮಾಡುವ ಹೇಳಿಕೆ ತೋರಿಸಿ ಕೊಡುತ್ತದೆ.
ದಿಲ್ಲಿಯಲ್ಲಿ ಕೆಂಪುಕೋಟೆ, ಜಾಮಾ ಮಸೀದಿ, ಹುಮಾಯೂನ್ ಟೋಂಬ್, ಕುತುಬುದ್ದೀನ್ ಐಬಕನ ದೊಡ್ಡ ಕಂಭ ಸಹಿತ ಹಲವು ಮಸೀದಿಗಳೆಲ್ಲ ಇವೆ. ದಿಲ್ಲಿಯನ್ನು ಯುಪಿ ಮಾಡಿ ಇದನ್ನೆಲ್ಲ ಸಂಘಪರಿವಾರಕ್ಕೆ ಆಕ್ರಮಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದು.
ಕೇಜ್ರಿವಾಲ್ ಏನೇ ಹೇಳಲಿ ದಿಲ್ಲಿ ಅವರಿಗೂ, ಬಿಜೆಪಿಗೂ ಈ ಸಲ ಸುಲಭವಲ್ಲ. ಅದಕ್ಕೆ ಕಾಂಗ್ರೆಸ್ಸಿನ ಮತ ಪ್ರಮಾಣದಲ್ಲಿ ಹೆಚ್ಚಳ ರಾಹುಲ್ರ ಜನಪ್ರಿಯತೆ ಹೆಚ್ಚಳವೇ ಬಹುದೊಡ್ಡ ಕಾರಣ. ಕೇಜ್ರಿವಾಲ್ರದ್ದು ನಕಲಿ ಹೋರಾಟವೆಂದು ಈಗ ಸಾಬೀತಾದ ವಿಚಾರ. ಆದರೆ ನಕಲಿತ್ವ ಹೆಚ್ಚು ಆಯುಷ್ಯವಿಲ್ಲ ಎಂದು ಅರಿತು ಅಸಲಿತ್ವದೆಡೆಗೆ ಅವರು ಹೊರಳಿದ್ದನ್ನು ಒಪ್ಪಿಕೊಳ್ಳಬಹುದು. ಅಲ್ಲಿಯೂ ನಕಲಿತ್ವದ ಮಮತೆ ದೂರವಾಗಿಲ್ಲ. ಅದಕ್ಕೆ ಅಸಲಿ ಗಾಂಧಿಗಳು ಪ್ರಖ್ಯಾತಿಗೆ ಬರುತ್ತಿರುವುದು ಕಾರಣವಾಗಿದೆ.
ಇವತ್ತು ಬಿಹಾರದಲ್ಲಿಯೂ ನಿತೀಶ್ರನ್ನು ಜನರು ತಿರಸ್ಕರಿಸುವ ಮಟ್ಟಕ್ಕೆ ಬಿಜೆಪಿ ತಂದು ನಿಲ್ಲಿಸಿದ್ದಾರೆ. ವಿಶೇಷ ಏನೆಂದರೆ ಈ ವರ್ಷ ನಡೆಯುವ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಮತ್ತು ನಿತೀಶ್ರ ಜೆಡಿಯುವನ್ನು ತಿರಸ್ಕರಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ನಿತೀಶ್ ಅತ್ತಿತ್ತ ಓಲಾಡುತ್ತಿದ್ದಾರೆ. ಆದರೆ ಎನ್ಡಿಎ ಬಿಡುವ ಧೈರ್ಯವೂ ಇಲ್ಲದ ತ್ರಿಶಂಕು ಸ್ಥಿತಿಯಲ್ಲಿ ಇದ್ದಾರೆ ಎಂಬ ಮಾತೇ ಹೆಚ್ಚು ಸರಿ ಸದ್ಯಕ್ಕೆ.
ಇತ್ತ ನಾವು ಒಟ್ಟಿಗೆ ಇದ್ದೇವೆ, ಎನ್ಡಿಎಯಲ್ಲಿದ್ದೇವೆ ಎಂದು ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್ ಹೇಳುತ್ತಿದ್ದಾರೆ. ಅವರು ಬಿಜೆಪಿಗೆ ಅಂಟಿರಬಹುದು. ಆದರೆ ಅಮಿತ್ ಶಾರ ಅಂಬೇಡ್ಕರ್ ವಿವಾದದಿಂದ ಮತ್ತು ಅಮಿತ್ ಶಾ ಕ್ಷಮೆ ಕೇಳದೆ ಇರುವುದರಿಂದ ಮಹಾ ದಲಿತ ವೋಟು ಬ್ಯಾಂಕ್ಗಳು ಬಿಜೆಪಿಯನ್ನು ಒಪ್ಪುವುದಿಲ್ಲ. ಆದ್ದರಿಂದ ಚಿರಾಗ್ರನ್ನು ಅವರು ತಿರಸ್ಕರಿಸುತ್ತಾರೆ ಎಂದು ನಿತೀಶ್ ಕುಮಾರ್ಗೆ ಗೊತ್ತಿದೆ. ಇವತ್ತು ಬಿಹಾರದ ಎನ್ಡಿಎಯಲ್ಲಿ (ಜೆಡಿಯು), ಬಿಜೆಪಿ, ಎಲ್ಜೆಪಿ (ಪಾಸ್ವಾನ್), ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಪಕ್ಷವಾದ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಜ್ಯ ಸಭಾ ಸಂಸದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಇವೆ. ಏನೇ ಹೇಳಿದರೂ ಮಾಧ್ಯಮಗಳ ವರದಿಗಳ ಪ್ರಕಾರ ಇವರೆಲ್ಲರೂ ಬಿಹಾರದ ವಿಧಾನ ಸಭಾ ಚುನಾವಣೆಯಲ್ಲಿ ಕೈಸುಟ್ಟಕೊಳ್ಳಬೇಕಾಗುತ್ತದೆ. ದಲಿತರಿಗೆ ಹಿಂದುಳಿದವರಿಗೆ ಆದ ಅನ್ಯಾಯಕ್ಕಿಂತ ಇವರಿಗೆ ತಮ್ಮ ಸ್ವಾರ್ಥ ಹಿತ ಮುಖ್ಯ ಎಂದು ಜನ ಸ್ಪಷ್ಟವಾಗಿ ಗುರುತಿಸಿದ್ದು ಇಂದಿನ ವಿಶೇಷ.
ಆದ್ದರಿಂದ ದಿಲ್ಲಿಯಲ್ಲಿ ಮೋದಿಯ ಬಯಾಲಜಿಕಲ್ ಎಂಬ ಹೊಸ ಅವತಾರವಾಗಲಿ ಆಮ್ ಅದ್ಮಿ ಪಾರ್ಟಿಯ ಅಭಿವೃದ್ಧಿಯ ಆಕ್ರಂದನ ವಾಗಲಿ ನಿತೀಶ್ರು ಬಿಜೆಪಿಯೊಂದಿಗಿದ್ದು ನಡೆಸುತ್ತಿರುವ ಹೊಸಹೊಸ ನಾಟಕವಾಗಲಿ ಖಂಡಿತ ಯಶಸ್ಸು ತಂದು ಕೊಡುವುದಿಲ್ಲ. ಪ್ರಿಯಾಂಕಾ, ರಾಹುಲ್ ಗಾಂಧಿ ಇವರ ಭ್ರಷ್ಟ ನೀತಿಯ ಒಂದೊಂದು ಕಟ್ಟುಗಳನ್ನು ಮತದಾರರ ಮುಂದೆ ಬಿಚ್ಚಿಡುತ್ತಿರುವುದೇ ಅದಕ್ಕೆ ಕಾರಣ ಎಂದು ನೀವು ತಿಳ್ಕೊಳ್ಳಬಹುದು. ಸತ್ಯ ಗೆಲ್ಲುತ್ತೆ. ಮಿಥ್ಯ ಸೋಲುತ್ತೆ. ಇದು ಐತಿಹಾಸಿಕ ಸತ್ಯ. ಈ ಐತಿಹಾಸಿಕ ಸತ್ಯ ದಿಲ್ಲಿಯಲ್ಲಿ ಪರೀಕ್ಷೆಗಿಳಿದಿದೆ ಎಂಬುದು ಇನ್ನೊಂದು ಸತ್ಯ. ಕೇಜ್ರಿವಾಲ್ಗೆ ಈ ಸಲ ದಿಲ್ಲಿ ಸುಲಭ ಇಲ್ಲ. ಆರೆಸ್ಸೆಸ್ ತಿರುಗಿಬಿದ್ದರೆ ಮನಸ್ಸು ಬದಲಿಸಿದರೆ ಕೇಜ್ರಿವಾಲ್ ಇಲ್ಲ. ಮುಸ್ಲಿಮರು, ದಲಿತರು ಮನಸ್ಸು ಬದಲಿಯಿಸಿದರೂ ಇಲ್ವೇ ಇಲ್ಲ.












