ಉತ್ತರ ಪ್ರದೇಶದಲ್ಲಿ ನೇಣಿಗೆ ಶರಣಾದ ತಾಯಿ-ಮಗಳು: ಅಶ್ಲೀಲ ವೀಡಿಯೊ ಪ್ರಚಾರ ಮಾಡಿದ್ದ ಯುವಕನ ಬಂಧನ

0
817

ಸನ್ಮಾರ್ಗ ವಾರ್ತೆ

ಲಕ್ನೊ : ಉತ್ತರ ಪ್ರದೇಶದಲ್ಲಿ 40 ವರ್ಷದ ತಾಯಿ ಮತ್ತು 22 ವರ್ಷದ ಮಗಳು ಗೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಮನೆಯ ಹತ್ತಿರದ ಮರಕ್ಕೆ ಇಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಮಾಜಿ ಗೆಳೆಯ ಅಶ್ಲೀಲ ವೀಡಿಯೊವನ್ನು ಪ್ರಚಾರ ಮಾಡಿದ್ದು ನಂತರ ತಾಯಿ ಮಗಳು ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಕಳೆದ ಡಿಸೆಂಬರಿನಲ್ಲಿ ಯುವತಿಯ ಮದುವೆ ನಡೆದಿತ್ತು. ಯುವಕ ತನ್ನೊಂದಿಗೆ ಯುವತಿ ಇದ್ದ ವೀಡಿಯೊವನ್ನು ಮಾರ್ಚ್ 22ಕ್ಕೆ ಯುವತಿಯ ಗಂಡನಿಗೆ ಕಳುಹಿಸಿದ್ದಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿದ್ದನು. ನಂತರ ಯುವತಿಯಿಂದ ಆಕೆ ಪತಿ ದೂರವಾಗಿದ್ದಾನೆ. ತಾಯಿ ಮನೆಗೆ ಬಂದ ನಂತರ ಯುವತಿ ಮತ್ತು ಆಕೆಯ ತಾಯಿ ಖಿನ್ನರಾಗಿದ್ದು. ಮಂಗಳವಾರ ಮನೆಯಿಂದ ಇಬ್ಬರೂ ಹೊರ ಬಂದಿರಲಿಲ್ಲ. ಬುಧವಾರ ಇಬ್ಬರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಕಂಡು ಬಂದಿದ್ದಾರೆ.

ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪ, ಎಸ್‍ಸಿ /ಎಸ್ಟಿ ಕಾಯಿದೆ ಪ್ರಕಾರ ಯುವಕ ಸತ್ಯ ಎಂಬಾತನ ವಿರುದ್ಧ ಕೇಸು ದಾಖಲಿಸಿ ಬಂಧಿಸಲಾಗಿದೆ ಎಂದು ಗೋಂಡ ಎಸ್ಪಿ ಎಸ್‍ಪಿ ಶೈಲೇಶ್ ಪಾಂಡೆ ಹೇಳಿದ್ದಾರೆ.ಯುವತಿಗೆ ತನ್ನ ಜೊತೆ ಇದ್ದ ಸಂಬಂಧವನ್ನು ಗಂಡನಿಗೆ ತಿಳಿಸುವೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ. ನಂತರ ಅಸಭ್ಯವಾಗಿ ವರ್ತಿಸಿದ್ದಾನೆ. ಅಶ್ಲೀಲ ವೀಡಿಯೊ ಚಿತ್ರಿಸಲು ಬಲವಂಪಡಿಸಿದ್ದಾನೆ. ತನ್ನೊಂದಿಗೆ ಜೀವಿಸಬೇಕೆಂದು ಯುವಕ ಹೇಳಿದ್ದಾನೆ. ಇದಕ್ಕೆ ಒಪ್ಪದ್ದರಿಂದ ಯುವಕ ಯುವತಿಯ ಪತಿಗೆ ವೀಡಿಯೊವನ್ನು ಕಳುಹಿಸಿದ್ದಾನೆ ಎಂದು ಪಾಂಡೆ ಹೇಳಿದರು.