ಆತ್ಮಹತ್ಯೆ ಮಾಡಿಕೊಳ್ಳಲು 13ನೆ ಮಹಡಿಯಿಂದ ಕೆಳಗಿದ್ದ ವೃದ್ಧನ ಮೇಲೆ ಜಿಗಿದ ಯುವತಿ; ಇಬ್ಬರು ಮೃತ್ಯು ವಶ

0
826

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಅ.5: ಆತ್ಮಹತ್ಯೆ ಮಾಡಿಕೊಳ್ಳಲು ಹದಿಮೂರನೆಯ ಮಹಡಿಯಿಂದ ಯುವತಿಯೊಬ್ಬಳು ಕೆಳಗೆ ಹಾರಿದ್ದು, ಕೆಳಗಿದ್ದ ಮುದುಕನ ಮೇಲೆ ಬಿದ್ದಿ ಪರಿಣಾಮವಾಗಿ ಇಬ್ಬರು ಮೃತಪಟ್ಟರು.

ಅಹ್ಮದಾಬಾದಿನ ಅಮ್ರೈವಾಡದ ಪರಿಷ್ಕಾರ ರೆಸಿಡೆಂಷಿಯಲ್ ಸೊಸೈಟಿಯಲ್ಲಿ ಘಟನೆ ನಡೆದಿದೆ. ಬಾಲ್ಕನಿಯಿಂದ ಹಾರಿದ ಮಮತಾ ರಾಟಿ(30), ಬೆಳಗ್ಗೆ ವಾಕಿಂಗ್ ಹೊರಟಿದ್ದ ಬಾಲುಭಾಯ್ ಗಾಮಿತ್(69) ಎಂಬುವವರ ಮೇಲೆ ಬಿದ್ದಿದ್ದು ಇಬ್ಬರೂ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಾಲುಭಾಯ್ ನಿವೃತ್ತ ಅಧ್ಯಾಪಕರಾಗಿದ್ದರು. ಸೂರತ್‍ನಲ್ಲಿ ಪತಿಯೊಂದಿಗೆ ವಾಸವಿದ್ದ ಮಮತಾ ಅಹ್ಮದಾಬಾದಿನಲ್ಲಿ ತಂದೆ-ತಾಯಿಯ ಬಳಿಗೆ ಬಂದಿದ್ದರು.