ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ; ಲಕ್ಷ್ಮಣ ಸವದಿ

0
167

ಸನ್ಮಾರ್ಗ ವಾರ್ತೆ

ಬೆಂಗಳೂರು, ನ.21: ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಲವು ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್‍ಗೆ ಸೇರ್ಪಡೆಗೊಳ್ಳುತ್ತಾರೆ ಮತ್ತು ಅದಕ್ಕೆ ಯೋಜನೆ ರೂಪಿಸಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕ ಲಕ್ಸ್ಮಣ ಸವದಿ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ನೇಮಕಗೊಂಡಿದ್ದು, ಲಿಂಗಾಯತ ವಿಭಾಗದ ನಡುವೆ ಯಾವ ಪ್ರತಿಫಲನವೂ ಇರುವುದಿಲ್ಲ ಎಂದು ಅವರು ಪತ್ರಕರ್ತರೊಂದಿಗೆ ಬಾಗಲಕೋಟೆಯಲ್ಲಿ ಮಾತಾಡುವ ಸಮಯದಲ್ಲಿ ಹೇಳಿದರು.

ಎಷ್ಟು ಬಿಜೆಪಿ ನಾಯಕರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಹೇಳಲಾಗುವುದಿಲ್ಲ. ಜನವರಿ 26ರ ವರೆಗೆ ಕಾಯಿರಿ ಎಂದು ಅವರು ಪತ್ರಕರ್ತರಿಗೆ ಹೇಳಿದರು.

ಲೋಕಸಭೆಯಲ್ಲಿ 20 ಸೀಟುಗಳಲ್ಲಿ ಗೆಲ್ಲುವುದು ನಮ್ಮ ಯೋಜನೆಯಾಗಿದೆ. ಎಲ್ಲ ಸಮುದಾಯದ ಜೊತೆ ಸೇರಿ ಕೆಲಸ ಮಾಡುವುದು ನಮ್ಮ ಹೊಣೆಯಾಗಿದೆ ಎಂದು ಸವದಿ ಈ ಸಂದರ್ಭದಲ್ಲಿ ಹೇಳಿದರು.

ಲಿಂಗಾಯತರು ಉತ್ತರ ಕರ್ನಾಟಕದಲ್ಲಿ ನಿರ್ಣಾಯಕ ಶಕ್ತಿಗಳಾಗಿದ್ದಾರೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಇಲ್ಲಿ ಲಿಂಗಾಯತರು ಪ್ರಬಲರು. ಲಿಂಗಾಯತ ಸಮುದಾಯದ ವಿಜಯೇಂದ್ರರನ್ನು ರಾಜ್ಯ ಅಧ್ಯಕ್ಷ ಮಾಡಿದ್ದು ಅವರಿಗೆ ಲಾಭ ಇಲ್ಲ. ಲಿಂಗಾಯತರು ಉತ್ತರ ಕರ್ನಾಟಕದಲ್ಲಿ ನಿರ್ಣಾಯಕ ಶಕ್ತಿಗಳಾಗಿದ್ದಾರೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಗಳಲ್ಲಿ ಅವರು ಬಲಿಷ್ಠರು. ಆದರೆ ಹೊಸ ತೀರ್ಮಾನಗಳು ಲಿಂಗಾಯತ ಸಮುದಾಯದಲ್ಲಿ ಪ್ರತಿಫಲಿಸುವುದಿಲ್ಲ ಎಂದು ಸವದಿ ಹೇಳಿದರು.