ಕರ್ನಾಟಕ ಚುನಾವಣಾ ಮುಖಭಂಗದ ನಡುವೆಯೇ ಮೋದಿ, ಶಾ ಬೆವರಿಳಿಸುತ್ತಿರುವ ಕುಸ್ತಿಪಟುಗಳು 

0
246

ಸನ್ಮಾರ್ಗ ವಾರ್ತೆ 

ಕರ್ನಾಟಕದಲ್ಲಿ ಈಗಾಗಲೇ ಮುಖಭಂಗಕ್ಕೆ ಒಳಗಾಗಿರುವ ಕೇಂದ್ರ ಬಿಜೆಪಿ ನೇತೃತ್ವ ಇದೀಗ ಕುಸ್ತಿಪಟುಗಳಿಂದ ಇನ್ನೊಂದು ಭಾರಿ ಸವಾಲನ್ನು ಎದುರಿಸುವ ಸೂಚನೆಗಳು ಕಾಣಿಸುತ್ತಿವೆ.

 ಈವರೆಗೆ ಕುಸ್ತಿಪಟುಗಳು ಜಂತರ್ ಮಂತರ್ ನಲ್ಲಿ ಪ್ರತಿಭಟಿಸುತ್ತಿದ್ದರು. ಇದೀಗ ಈ ಪ್ರತಿಭಟನೆ ಜಂತರ್ ಮಂತರ್‌ನಿಂದ ಹೊರಗೆ ಬಂದು ದೇಶಾದ್ಯಂತ ವ್ಯಾಪಿಸುವ ಸೂಚನೆಗಳು ಕಾಣಿಸುತ್ತಿವೆ.

ಕುಸ್ತಿಪಟುಗಳಿಗೆ ಬೆಂಬಲಾರ್ಥವಾಗಿ ನೂರಾರು ಮಂದಿ ಜಂತರ್ ಮಂತರ್‌ಗೆ ಬಂದಾಗ ಪೊಲೀಸರು ಅವರನ್ನು ತಡೆದರು. ಆಗ ಈ ಮಂದಿ ದೆಹಲಿಯ ಹೃದಯ ಭಾಗವಾದ ಕನ್ನಾಟ್ ಪ್ಲೇಸ್‌ನಲ್ಲಿ ಕುಸ್ತಿಪಟುಗಳು ಅವರ ಜೊತೆ ಮಾರ್ಚ್ ನಡೆಸಿದ್ದಾರೆ.  ಚಂದ್ರಶೇಖರ್ ಆಜಾದ್ ಕೂಡ ಈ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದಾರೆ.

 ದೆಹಲಿಯ ಜಂತರ್ ಮಂತರ್ ಇದೀಗ ಜೈಲಿನಂತಾಗಿದೆ. ಹೊರಗಿನಿಂದ ಬೆಂಬಲ ನಿಜಡಲಿ ಬರುವವರನ್ನು ಅಲ್ಲಿಗೆ ಬಿಡುತ್ತಿಲ್ಲ. ಆದ್ದರಿಂದ ನಾವು ದೆಹಲಿಯ ಉದ್ದಕ್ಕೂ ಪ್ರತಿಭಟನೆಯನ್ನು ಏರ್ಪಡಿಸಲಿದ್ದೇವೆ. ಮೇ 21ರ ಗಡುವಿನೊಳಗೆ ಬ್ರಿಜ್ ಭೂಷಣ್ ಅವರನ್ನು ಅರೆಸ್ಟ್ ಮಾಡದಿದ್ದರೆ ನಮ್ಮ ಪ್ರತಿಭಟನೆ ವ್ಯಾಪಿಸಲಿದೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ.

 ಈ ಪ್ರತಿಭಟನೆ ಈ ಹಿಂದಿನ ರೈತ ಪ್ರತಿಭಟನೆಯಂತೆ ತೀವ್ರ ಸ್ವರೂಪವನ್ನು ಪಡೆಯುವ ಸಾಧ್ಯತೆಗಳು ಕಾಣಿಸುತ್ತಿದ್ದು, ಕೇಂದ್ರ ಬಿಜೆಪಿ ನೇತೃತ್ವವು ಇಕ್ಕಟ್ಟಿಗೆ ಸಿಲುಕಿರುವಂತಿದೆ.