ಚೀನದ ಅಧ್ಯಕ್ಷ ಕ್ಸಿ ಜಿನ್‍ ಪಿಂಗ್ ನೇಪಾಳಕ್ಕೆ ಭೇಟಿ

0
401

ಸನ್ಮಾರ್ಗ‌ ವಾರ್ತೆ

ಕಾಠ್ಮಂಡು,ಅ.14: ಭಾರತ ಸಂದರ್ಶನದ ಬಳಿಕ ಚೀನದ ಅಧ್ಯಕ್ಷ ಕ್ಸಿ ಜಿನ್‍ ಪಿಂಗ್ ನೇಪಾಳಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿ ಎರಡು ದಿವಸ ಸಂದರ್ಶನ ನಡೆಸಿದರು. ನೇಪಾಳದ ಕಮ್ಯುನಿಸ್ಟ್ ಪಾರ್ಟಿ ಸಹಅಧ್ಯಕ್ಷ ಪುಷ್ಪಕಮಲ್ ದಹಲ್ ಪ್ರಚಂಡ, ಇತರ ಕಮ್ಯುನಿಸ್ಟ್ ನಾಯಕರನ್ನು ಅವರು ಭೇಟಿಯಾದರು.

ನೇಪಾಳ ಮತ್ತು ಚೀನಗಳ ನಡುವೆ ಸಂಬಂಧ ಗಟ್ಟಿಯಾಗಲು ಪ್ರಚಂಡ್‌ರವರು ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು. 23 ವರ್ಷಗಳ ಬಳಿಕ ಚೀನದ ಅಧ್ಯಕ್ಷರೊಬ್ಬರು ನೇಪಾಳ ಸಂದರ್ಶಿಸಿದ್ದಾರೆ.