ಜೀವನದಲ್ಲಿ ಮೋದಿ ಯಾವುದಾದರೂ ಆಂದೋಲನದಲ್ಲಿ ಭಾಗವಹಿಸಿದ್ದಾರೆಯೇ?- ಯಶ್ವಂತ್ ಸಿನ್ಹಾ

0
461

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಫೆ.13: ಬಿಜೆಪಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ” ಜೀವನದಲ್ಲಿ ಮೋದಿ ಯಾವುದಾದರೂ ಹೋರಾಟದಲ್ಲಿ ಭಾಗವಹಿಸಿದ್ದಾರೆಯೇ? ಗೂಗಲ್‍ನಲ್ಲಿ ಹುಡುಕಾಡಿದಾಗ ಒಟ್ಟಾರೆ ಸಿಕ್ಕಿದ್ದು ದಿಲ್ಲಿ ಯುನಿವರ್ಸಿಟಿಯಿಂದ ಒಟ್ಟಾರೆ ರಾಜಕೀಯ ಮಿಮಾಂಸೆಯಲ್ಲಿ ಬಿರುದು ಪಡೆದುಕೊಂಡಿದ್ದು ಮಾತ್ರ ಕಂಡು ಬಂತು ಈ ವಿಷಯದಲ್ಲಿ ನನಗೆ ಯಾರಿಗಾದರೂ ಮಾಹಿತಿ ನೀಡಲು ಸಾಧ್ಯವೇ” ಎಂದು ಮಂಗಳವಾರ ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ನಂತರ ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ಗೆ ಸಾವಿರಾರು ಲೈಕ್‍ಗಳು ಹರಿದು ಬಂದಿವೆ. ಕೆಲವರು ವ್ಯಂಗ್ಯಾತ್ಮಕ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ರಾಜಕೀಯ ಮೀಮಾಂಸೆ ಎಂಬ ಪದಪ್ರಯೋಗ ವ್ಯಂಗ್ಯವೆಂದು ಅರಿತುಕೊಂಡ ಕೆಲವರು ಈ ಪದವಿಯನ್ನು ಬ್ರಹ್ಮಾಂಡ್ ರಾಷ್ಟ್ರ ಮೀಮಾಂಸೆಯದ್ದು ಎಂಬುದಾಗಿ ತಿದ್ದಿದ್ದಾರೆ. ಕಾಶ್ಮೀರದಲ್ಲಿ ಭಾರತದ ಪತಾಕೆ ಹಾರಿಸಲು ಹೋಗಿದ್ದು ಹೋರಾಟದಲ್ಲಿ ಭಾಗಿಯಾಗಿದ್ದನ್ನು ಕೆಲವರು ಸೂಚಿಸಿದ್ದಾರೆ. ಕೆಲವರು ರಥಯಾತ್ರೆಯಲ್ಲಿ ಅಡ್ವಾಣಿಯಿಂದ ಮೈಕ್ ತೆಗೆದುಕೊಂಡ ಚಿತ್ರವಿದೆ ಎಂದು ಹೇಳಿದ್ದಾರೆ.

ದಿಲ್ಲಿ ಯುನಿವರ್ಸಿಟಿಯಿಂದ ಪಡೆದುಕೊಂಡಿದ್ದಾರೆ ಎನ್ನಲಾದ ಪದವಿಯ ಕುರಿತ ವಿವಾದದಲ್ಲಿ ಕೆಲವರು ಇದು ಪ್ರಧಾನಿಗೆ ಮಾತ್ರ ಸೃಷ್ಟಿಸಿದ ಪದವಿ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಮಾಜಿ ಕೇಂದ್ರ ವಿತ್ತ ಸಚಿವ ವಿದೇಶ ಸಚಿವ ಯಶ್ವಂತ್ ಸಿನ್ಹಾರ ಟ್ವೀಟ್‍ಗೆ ಎರಡು ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಸರಕಾರವನ್ನು ತರಾಟೆಗೆತ್ತಿಕೊಳ್ಳುತ್ತಿರುವ ಸಿನ್ಹಾ ಜಸ್ಟಿಸ್ ಗೊಗೊಯಿಗೆ ಕೊಟ್ಟಂತಹದ್ದನ್ನು ಜಸ್ಟಿಸ್ ಎಂಆರ್ ಶಾರಿಗೂ ನಿವೃತ್ತರಾದ ಮೇಲೆ ಕೊಟ್ಟು ಅನುಗ್ರಹಿಸಬೇಕೆಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಶಾಂತಿಯುತವಾಗಿ ನಡೆಯುವ ಹೋರಾಟಗಳನ್ನು ಕೂಡ ದೇಶವಿರೋಧಿ ಎಂದು ಚಿತ್ರಿಸುವ ಕೇಂದ್ರದ ನಿಲುವು ಮತ್ತು ಅಂದು ವಾಜಪೇಯಿ ಸಹಿತ ರಾಷ್ಟ್ರಪತಿ ಭವನದ ಮುಂದೆ ನಡೆಸಿದ ಹೋರಾಟದ ಪರಸ್ಪರ ವೈರುಧ್ಯವು ಯಶ್ವಂತ್‍ರ ಇನ್ನೊಂದು ಟ್ವೀಟ್‍ನಲ್ಲಿದೆ.