ಸನ್ಮಾರ್ಗ ವಾರ್ತೆ
ಅನುಕಂಪದಿಂದ ಬೀರುವ ಒಂದು ನೋಟವು ನೊಂದ ಹೃದಯಗಳಲ್ಲಿ ಮಂದಹಾಸವನ್ನು ಸೃಷ್ಟಿಸುತ್ತದೆ. ಇದೇ ರೀತಿಯಲ್ಲಿ, ಮಗುವೊಂದು ಹಕ್ಕಿಗಳಿಗೆ ತನ್ನ ಊಟದ ಬಟ್ಟಲಿನಿಂದ ಚಾಪ್‌ಸ್ಟಿಕ್ ಮೂಲಕ ಆಹಾರ ಉಣಿಸುತ್ತಿರುವ ಹೃದಯಸ್ಪರ್ಶಿ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹಲವರ ಮನ ಗೆದ್ದಿದೆ.
ಈ ವಿಡಿಯೋವನ್ನು ವಾಲಾ ಅಫ್ಶರ್ ಹಂಚಿಕೊಂಡಿದ್ದು, “ಈ ಜಗತ್ತಿನಲ್ಲಿ ತಾವೆಲ್ಲರೂ ಒಬ್ಬಂಟಿ ಎಂದು ಭಾವಿಸುವವರಿಗೆ ಈ ಅನುಕಂಪವು ಒಂದು ಹೊಸ ಭರವಸೆಯನ್ನು ಹುಟ್ಟಿಸುತ್ತದೆ.” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ 1.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯಾಗಿದ್ದು, ಬಾಲಕನಿಂದ ಆಹಾರ ಸ್ವೀಕರಿಸಲು ಉತ್ಸಾಹ ತೋರುವ ಹಕ್ಕಿಗಳ ನಡೆಗೆ ಹಲವರು ಫಿದಾ ಆಗಿದ್ದಾರೆ.
“Kindness is giving hope to those who think they are all alone in this world.” pic.twitter.com/NjlZjvxGG1
— Vala Afshar (@ValaAfshar) February 5, 2023












