ಬ್ರಿಟನ್ ವಶಪಡಿಸಿದ್ದ ಇರಾನಿನ ಹಡಗಿನಲ್ಲಿದ್ದ ಭಾರತೀಯರ ಬಿಡುಗಡೆ

0
117

ಹೊಸದಿಲ್ಲಿ,ಆ. 16: ಬ್ರಿಟನ್ ವಶಪಡಿಸಿದ ಇರಾನ್ ತೈಲ ಹಡಗು ಗ್ರೇಸ್ ವನ್‍ನ ಸಿಬ್ಬಂದಿಯಾಗಿರುವ 24 ಭಾರತೀಯರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ವಿದೇಶ ಸಹಸಚಿವ ವಿ.ಮುರಳೀಧರನ್ ಈ ವಿಷಯವನ್ನು ಟ್ವಿಟರ್‍‌ನಲ್ಲಿ ಹಂಚಿಕೊಂಡಿದ್ದಾರೆ. ಬ್ರಿಟನ್‍ನ ಭಾರತ ಧೂತವಾಸದೊಂದಿಗೆ ಮಾತಾಡಿದ್ದೇನೆ. 24 ಭಾರತೀಯರನ್ನು ಬಿಡಗಡೆಗೊಳಿಸಿರುವುದು ದೃಢವಾಗಿದೆ ಎಂದು ವಿ. ಮುರಳೀಧರನ್ ಟ್ವಿಟರ್ ‌ಮೂಲಕ ತಿಳಿಸಿದರು. ಇವರೆಲ್ಲರೂ ಶೀಘ್ರದಲ್ಲಿ ಭಾರತಕ್ಕೆ ಮರಳಿರುವರು. ಕಳೆದ ಜುಲೈ ನಾಲ್ಕರಂದು ಜಿಬ್ರಾಲ್ಟರ್ ಜಲಸಂಧಿಯಲ್ಲಿ ಇರಾನ್ ತೈಲ ಹಡಗು ಗ್ರೇಸ್ ವನ್‍ನನ್ನು ಬ್ರಿಟನ್ ಸೆರೆಹಿಡಿದಿತ್ತು.

LEAVE A REPLY

Please enter your comment!
Please enter your name here