ತೀವ್ರ ಹಸಿವಿನ ತೆಕ್ಕೆಯಲ್ಲಿ ವಿಶ್ವದ 11.3 ಕೋಟಿ ಜನರು!- ವಿಶ್ವ ಸಂಸ್ಥೆ ವರದಿ

0
1421

ವಿಶ್ವಸಂಸ್ಥೆ,ಎ.4: ಆಂತರಿಕ ಸಂಘರ್ಷಗಳು, ಪಲಾಯನ, ಪ್ರಕೃತಿ ದುರಂತಗಳಿಂದಾಗಿ ಜಗತ್ತಿನ 53 ದೇಶಗಳ 11.3 ಕೋಟಿ ಮನುಷ್ಯರು ತೀವ್ರ ಹಸಿವಿನ ತೆಕ್ಕೆಯಲ್ಲಿದ್ದರು. ವಿಶ್ವಸಂಸ್ಥೆ , ಯುರೋಪಿಯನ್ ಯೂನಿಯನ್ ಜಂಟಿಯಾಗಿ ತಯಾರಿಸಿದ ವರದಿಯಲ್ಲಿ ಬೆಚ್ಚಿ ಬೀಳುವಂತಹ ವಿವರ ಬಹಿರಂಗವಾಗಿದೆ. ಹಸಿವು ಬೇಟೆಯಾಡುವವರ ಸಂಖ್ಯೆ ಪ್ರತಿವರ್ಷ ಹಠಾತ್ತಾಗಿ ಹೆಚ್ಚಳವಾಗುತ್ತಿದೆ. ಬಡ ದೇಶಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ ಎಂದು ಜಾಗತಿಕ ಆಹಾರ ಬಿಕ್ಕಟ್ಟು ವರದಿ-2019 ತಿಳಿಸಿದೆ.

10 ಕೋಟಿಗಿಂತ ಹೆಚ್ಚು ಮಂದಿ ಮೂರು ವರ್ಷಗಳಿಂದ ತೀವ್ರ ಹಸಿವಿಗೆ ತುತ್ತಾಗಿದ್ದಾರೆ. ಈ ವರ್ಷ ಅವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು 11.5 ಕೋಟಿಗೆ ತಲುಪಿತು. ಯಮನ್, ಕಾಂಗೊ, ಅಫ್ಘಾನಿಸ್ತಾನ, ಇತಿಯೋಪಿಯ, ಸಿರಿಯ, ಸುಡಾನ್, ದಕ್ಷಿಣ ಸುಡಾನ್, ನೈಜೀರಿಯ ಸಹಿತ ಎಂಟು ದೇಶಗಳು ತೀವ್ರ ಹಸಿವಿಗೆ ಗುರಿಯಾಗಿದೆ. ಒಟ್ಟು ಹಸಿವು ಬಾಧಿಸಿದವರಲ್ಲಿ ಮೂರನೆ ಎರಡಂಶ ಜನರು ಈ ಎಂಟು ದೇಶಗಳಿಗೆ ಸೇರಿದವರಾಗಿದ್ದಾರೆ.

ಈ ದೇಶಗಳೊಂದಿಗೆ ತೀವ್ರ ಹಸಿವಿನ ತೆಕ್ಕೆಗೆ ಬಿದ್ದ ಹದಿನೇಳು ದೇಶಗಳ ಪರಿಸ್ಥಿತಿ ಅತೀವ ಗಂಭೀರವಾಗಿ ಮುಂದುವರಿಯುತ್ತಿದೆ. ಬಡತನ ಹಳೆಯ ರೀತಿಯಲ್ಲಿ ಮುಂದುವರಿಯುತ್ತಿದೆ. ಅಥವಾ ಇನ್ನಷ್ಟು ಇಲ್ಲಿ ತೀವ್ರಗೊಂಡಿದೆ. ಆರ್ಥಿಕ ಬಿಕ್ಕಟ್ಟು ಇಲ್ಲಿನ ದುರಂತಗಳಿಗೆ ಕಾರಣವಾಗಿದ್ದು ಆಫ್ರಿಕದ ಹತ್ತು ದೇಶಗಳಲ್ಲಿ 3.3 ಕೋಟಿ ಜನರು ತೀವ್ರ ಹಸಿವಿನ ತೆಕ್ಕೆಗೊಳಗಾಗಿ ನರಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ 2.7 ಕೋಟಿ ಜನರು, ದಕ್ಷಿಣ-ಪರ್ವ ಏಷ್ಯದ ಮೂರು ದೇಶಗಳಲ್ಲಿ 1.3 ಕೋಟಿ ಜನರನ್ನು ತೀವ್ರ ಹಸಿವು ಕಾಡುತ್ತಿದೆ.