ಪಾಕಿಸ್ತಾನದಲ್ಲಿ ಭಯೋತ್ಪಾದನಾ ದಾಳಿ: ಇಬ್ಬರ ಸಾವು

0
865

ಕ್ವೆಟ್ಟಾ,ಮಾ.31: ಶಂಕಿತ ಭಯೋತ್ಪಾದಕರ ಗುಂಡೇಟಿಗೆ ಇಬ್ಬರು ಮೌಲಾನಗಳು ಬಲಿಯಾಗಿದ್ದು ಇತರ ಇಬ್ಬರು ಗಾಯಗೊಂಡಿದ್ದಾರೆ. ನ್ಯೂ ಸರ್ಯಾಬ್ ಗೊಹರಾಬಾದ್ ಎಂಬಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳಕ್ಕಾಗಮಿಸಿ ಹಲವರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದನಾ ದಾಳಿ ಘಟನೆಗಳು ಕಳವಳಕಾರಿ ರೀತಿಯಲ್ಲಿ ಹೆಚ್ಚಳವಾಗುತ್ತಿದೆ.

ದಾಳಿಗೆ ತುತ್ತಾದ ಮೌಲಾನಾ ಅಬ್ದುಲ್ ಹೈ ಮತ್ತು ಮೌಲಾನಾ ಅಬ್ದುಲ್ ಅಝೀಝ್ ಎಂಬವರು ಸ್ಥಳದಲ್ಲಿ ಮೃತಪಟ್ಟರು . ಇಬ್ಬರ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂಗಾಗಿ ಕಳುಹಿಸಲಾಗಿದೆ.

ಗಾಯಗೊಂಡ ಇಬ್ಬರಿಗೆ ಸ್ಥಳೀಯ ನಾಗರಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದರು.