ಮತಾಂಧತೆಯ ವಿರುದ್ಧ ಹೋರಾಡಲು ಕರೆ ನೀಡಿದ ಪೋಪ್ ಫ್ರಾನ್ಸಿಸ್

0
1034

ರಬತ್,ಮಾ. 31: ಮತಾಂಧತೆಯ ವಿರುದ್ಧ ಹೋರಾಡಲು ಮತ್ತು ಪರಸ್ಪರ ಅಂತರ್‍ಧರ್ಮೀಯ ಸಂವಾದಗಳನ್ನು ಹೆಚ್ಚಿಸಲು ಪೋಪ್ ಫ್ರಾನ್ಸಿಸ್ ಮೊರೊಕ್ಕೊದ ಜನರಿಗೆ ಕರೆ ನೀಡಿದ್ದಾರೆ. ಅವರು ಈಗ ಮೊರಕ್ಕೊ ಸಂದರ್ಶನದಲ್ಲಿದ್ದಾರೆ.

ಅವರನ್ನು ಮೊರೊಕ್ಕೊ ದೊರೆ ಆರನೆ ಮುಹಮ್ಮದ್ ವಿಮಾನ ನಿಲ್ದಾಣದಿಂದ ಸ್ವಾಗತಿಸಿ ರಾಜಧಾನಿ ರಬತ್‍ಗೆ ಕರೆತಂದರು. ಅÀಲ್ಲಿ ಕಿಕ್ಕಿರಿದು ನೆರದ ಜನರ ಮುಂದೆ ಪೋಪ್ ಸರ್ವಧರ್ಮ ಸಹಿಷ್ಣುತೆಗೆ ಒತ್ತುಕೊಟ್ಟು ಮಾತಾಡಿದರು.

ನಂತರ ವಲಸೆಗಾರರು ಮತ್ತು ಮುಸ್ಲಿಂ ನಾಯಕರನ್ನು ಪೋಪ್ ಭೇಟಿಯಾದರು. ಮೊರೊಕ್ಕೊದಲ್ಲಿರುವ ರೊಮನ್ ಕ್ಯಾಥೊಲಿಕ್ ಕ್ರೈಸ್ತ ಸಮುದಾಯವನ್ನು ಕೂಡ ಅವರು ಭೇಟಿಯಾಗಲಿದ್ದಾರೆ.
ಕಳೆದ ತಿಂಗಳು ಯುಎಇಗೆ ಪೋಪ್ ಫ್ರಾನ್ಸಿಸ್ ಐತಿಹಾಸಿಕ ಭೇಟಿ ನೀಡಿದ್ದು ಇದರ ಮುಂದುವರಿಕೆಯಾಗಿ ಈಗ ಪೋಪ್ ಮೊರೊಕ್ಕೊಕ್ಕೆ ಭೇಟಿ ನೀಡಿದ್ದಾರೆ. ಇಸ್ಲಾಮ್ ಮೊರಕ್ಕೊದ ರಾಷ್ಟ್ರಧರ್ಮವಾಗಿದೆ. ಸಾವಿರಾರು ಮಂದಿ ನೆರೆದ ಸಭೆಯಲ್ಲಿ ಮಾತಾಡಿದ ಪೋಪ್ ಮತಾಂಧತೆ ತೊರೆದು ಸಾಹೋದರ್ಯಕ್ಕೆ ಆದ್ಯತೆನೀಡುವಂತೆ ಜನರಿಗೆ ಉಪದೇಶಿಸಿದರು.

ವಿಚಾರ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವು ಮೂಲಭೂತ ಮಾನವ ಘನತೆಯಾಗಿದೆ. ಭವಿಷ್ಯದ ಮಾಗದರ್ಶಿ ಸಿದ್ಧತೆಗಳಿಗೆ ಇದು ಮುಖ್ಯವಾಗಿದೆ ಎಂದು ಹೇಳಿದರು. 2015ರಲ್ಲಿ 1600 ಯುವ ಮೊರೊಕ್ಕನ್ನರು ಧರ್ಮಾಂಧ ಇಸ್ಲಾಮಿಕ್ ಸ್ಟೇಟ್ ಸೇರ್ಪಡೆಯಾಗಿದ್ದರು. ಮತಾಂಧತೆಯನ್ನು ತಡೆಗಟ್ಟಲು ಯುವ ತಲೆಮಾರಿನಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದು ಬಹಳ ಅಗತ್ಯವಿದೆ ಎಂದು ಈ ಸಂದರ್ಭದಲ್ಲಿ ಮಾತಾಡಿದ ದೊರೆ ಮುಹಮ್ಮದ್ ಹೇಳಿದರು.

ಸ್ಟೇಟ್