ಅಮೆರಿಕದ ಎಫ್‍ಬಿಐನಿಂದ ಮೋತಿವಾಲನ ಹಸ್ತಾಂತರಕ್ಕೆ ಮನವಿ: ಹಸ್ತಾಂತರವನ್ನು ತಡೆಯುತ್ತಿರುವ ಪಾಕಿಸ್ತಾನ

0
529

ನ್ಯೂಯಾರ್ಕ್,ಜು.6: ಭೂಗತ ಪಾತಕಿ ದಾವೂದ್ ಇಬ್ರಾಹೀಂ ಸಹಾಯಕ ಜಾಬಿರ್ ಮೋತಿವಾಲನನ್ನು ಲಂಡನ್‍ನಿಂದ ಅಮೆರಿಕಕ್ಕೆ ಹಸ್ತಾಂತರಿಸದಂತೆ ತಡೆಯಲು ಪಾಕಿಸ್ತಾನದ ರಾಜಕಾರಣಿಗಳು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಅಮೆರಿಕದ ಎಫ್‍ಬಿಐ ಮೋತಿವಾಲನ ಹಸ್ತಾಂತರಕ್ಕೆ ಮನವಿ ಸಲ್ಲಿಸಿದೆ. ಇದರಲ್ಲಿ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ದಾವೂದ್‍ನ ಕಂಪೆನಿಗೆ ಪಾಕಿಸ್ತಾನದ ರಾಜಕೀಯ ಬೆಂಬಲ ಇದೆ. ಜಾಬಿರ್ ಮೋತಿವಾಲ ತುಂಬ ಅನಾರೋಗ್ಯದಲ್ಲಿದ್ದು ಖಿನ್ನತೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಆತನನ್ನು ಅಮೆರಿಕಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಆತನ ಪರ ವಾದಿಸುತ್ತಿರುವ ವಕೀಲರು ಕೋರ್ಟಿನಲ್ಲಿ ತಿಳಿಸಿದ್ದಾರೆ.

ದಾವೂದ್ ಇಬ್ರಾಹೀಂನ ಸಹಾಯಕ ಮೋತಿವಾಲನನ್ನು ಆಗಸ್ಟ್ 2018ರಂದು ಮಾದಕ ವಸ್ತು ಕಳ್ಳಸಾಗಾಟ ಆರೋಪದಲ್ಲಿ ಬಂಧಿಸಲಾಗಿತ್ತು. ಮೋತಿವಾಲ ಪಾಕಿಸ್ತಾನದ ಓರ್ವ ಪ್ರಸಿದ್ಧ, ಗೌರವಾನ್ವಿತ ಉದ್ಯಮಿ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ. ವಾಸ್ತವದಲ್ಲಿ ಮೋತಿವಾಲನನ್ನು ಅಮೆರಿಕಕ್ಕೆ ಹಸ್ತಾಂತರಿಸಿದರೆ ದಾವೂದ್ ಇಬ್ರಾಹೀಂನ ಕರಾಚಿ ನಿಯಂತ್ರಿತ ಭೂಗತ ಚಟುವಟಿಕೆ ಬಹಿರಂಗಗೊಳ್ಳುವ ಹೆದರಿಕೆ ಪಾಕಿಸ್ತಾನಕ್ಕಿದೆ ಎನ್ನಲಾಗಿದೆ.