ನೆಪಕ್ಕಾಗಿ ಮಂಡಿಸಿದ ಕೇಂದ್ರ ಬಜೆಟ್ ಜನತೆಯ ಸಂಕಷ್ಟಗಳಿಗೆ ಬರೆ ಎಳೆದಿದೆ- ವೆಲ್ಪೇರ್ ಪಾರ್ಟಿ ಟೀಕೆ

0
561

ಕೇಂದ್ರದ ಮೋದಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ನೀಡಿದ ಮಧ್ಯಮ ವರ್ಗದ ಜನತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಲೋಕಸಭೆಯಲ್ಲಿ ಮಂಡಿಸಿದ ಬಜೆಟ್, ಹೊಸತನವಿಲ್ಲದೆ ಜನತೆಯ ಸಂಕಷ್ಟಗಳಿಗೆ ಬರೆ ಎಳೆದಿದೆ. ಪೆಟ್ರೋಲ್, ಡಿಸೇಲ್, ಬಂಗಾರದ ಮೇಲೆ ನೀಡಿರುವ ಹೆಚ್ಚಿನ ತೆರಿಗೆಯು ಜನಸಮಾನ್ಯರ ಜೀವನವನ್ನು ದುಸ್ತರವನ್ನಾಗಿಸಲಿದೆ ಎಂದು ವೆಲ್ಫೇರ್ ಪಕ್ಷದ ಕರ್ನಾಟಕ ಕಾರ್ಯದರ್ಶಿ ಮೊಯಿನ್ ಕಮರ್ ಬಜೆಟ್‌ನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು “ಬರಗಾಲ, ಆರ್ಥಿಕ ಸಂಕಷ್ಟದಲ್ಲಿರುವ ರೈತರು ಮೋದಿ ಸರ್ಕಾರದಿಂದ ಸಾಲ ಮನ್ನಾದ ನಿರೀಕ್ಷೆಯಲ್ಲಿದ್ದರು. ಗ್ರಾಮೀಣ ಪ್ರದೇಶಗಳಿಗೆ ಮತ್ತು ಕೃಷಿ ಕ್ಷೇತ್ರಕ್ಕೂ ಸಹ ಈ ಬಜೆಟ್ ಜನಸ್ನೇಹಿಯಾಗಿಲ್ಲ. ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ಯಾವುದೇ ಕ್ರಮ ಕೇಂದ್ರ ಸರ್ಕಾರದಿಂದ ಭರವಸೆ ಲಭಿಸಿಲ್ಲ ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತಷ್ಟು ಜಟಿಲವಾಗಲಿದೆ. ಬ್ಯಾಂಕುಗಳ ಏಕೀಕರಣದಿಂದ ಸರಕಾರಿ ಸೌಮ್ಯದ ಬ್ಯಾಂಕಿಂಗ್ ಕ್ಷೇತ್ರವು ಅಪಾಯವನ್ನು ಎದುರಿಸಲಿದೆ. ಆಧಾರ್ ಕಾರ್ಡಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾರತೀಯರ ಖಾಸಗೀತನವನ್ನು ಸೋರಿಕೆ ಮಾಡಲು ಅವಕಾಶ ನೀಡಿರುವುದು ಆಕ್ಷೇಪಾರ್ಹ. ಕೇಂದ್ರ ಸರಕಾರದ 2019-20ರ ಬಜೆಟ್ ಮಂಡಿಸುವ ವೇಳೆ ಶೇರು ಮಾರುಕಟ್ಟೆ 395 ಅಂಕಗಳಲ್ಲಿ ಕುಸಿತ ಗೊಂಡಿರುವುದು ಬಜೆಟ್‌ನ ದೂರದೃಷ್ಟಿಯನ್ನು ಸೂಚಿಸುತ್ತದೆ” ಎಂದರು.