ಕೊರೋನದಿಂದ ಮಾರುಕಟ್ಟೆ ಬಂಡವಾಳಶಾಹಿತ್ವ ವಿಫಲ- ಪೋಪ್ ಫ್ರಾನ್ಸಿಸ್

0
522

ಸನ್ಮಾರ್ಗ ವಾರ್ತೆ

ರೋಮ್,ಅ.5: ಮಾರುಕಟ್ಟೆ ಬಂಡಾವಾಳಶಾಹಿತ್ವದ ಮಾಂತ್ರಿಕ ಆಶಯಗಳು ವಿಫಲವಾಗಿರುವುದನ್ನು ಕೊರೋನ ಮಹಾಮಾರಿ ಸಾಬೀತುಗೊಳಿಸಿದೆ. ಇದರಲ್ಲಿ ಸುಧಾರಣೆ ಅಗತ್ಯವಾಗಿ ನಡೆಯಬೇಕೆಂದು ಪೋಪ್ ಫ್ರಾನ್ಸಿಸ್ ಹೇಳಿದರು. ಮಾತುಕತೆ, ಒಗ್ಗಟ್ಟನ್ನು ಮುಂದಿಡುವ ಯಾವ ಬೆಲೆ ತೆತ್ತೂ ಯುದ್ಧವನ್ನು ತಡೆಯುವ ಹೊಸ ರಾಜಕೀಯವು ಅನಿವಾರ್ಯವಾಗಿದೆ ಎಂದರು.

ಕಾನೂನುಬದ್ಧ ಪ್ರತಿರೋಧ ಎಂಬ ನೆಲೆಯಲ್ಲಿ ಯುದ್ಧವನ್ನು ಸಮರ್ಥಿಸಬಹುದೆಂಬ ಕ್ಯಾಥೋಲಿಕ್ ಚರ್ಚ್‌ನ ಪ್ರಮಾಣವನ್ನು ಅವರು ತಳ್ಳಿಹಾಕಿದ್ದಾರೆ. ಶತಮಾನಗಳಿಂದ ವಿಫುಲಾರ್ಥದಲ್ಲಿ ಇದನ್ನು ಉಪಯೋಗಿಸಲಾಯಿತು. ಇನ್ನು ಮುಂದೆ ಇದು ಪ್ರಾಯೋಗಿಕವಲ್ಲ ಎಂದರು.

ನ್ಯಾಯಪೂರ್ಣ ಯುದ್ಧದ ಕುರಿತು ಮಾತಾಡಲು ಶತಮಾನಗಳಿಂದ ಬಳಸಿದ ಮಾನದಂಡಗಳನ್ನು ಈಗ ಪ್ರಾಯೋಗಿಕ ಗೊಳಿಸುವುದು ಬಹಳ ಕಷ್ಟದ ವಿಚಾರವಾಗಿದೆ. ಮಹಾಮಾರಿಗೆ ತುತ್ತಾದ ಜನರ ನ್ಯಾಯವಾದ ಆವಶ್ಯಕತೆಗಳನ್ನು ಪರಿಗಣಿಸುವಲ್ಲಿ ಈಗಿನ ರಾಜಕೀಯ, ಆರ್ಥಿಕ ಸಂಸ್ಥೆಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ಕೊರೋನ ಮಹಾಮಾರಿ ಮನವರಿಕೆ ಮಾಡಿಕೊಟ್ಟಿದೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.