ಬಿಹಾರ ಚುನಾವಣೆ: ನಿತೀಶ್‍ರೊಂದಿಗೆ ಮೈತ್ರಿ ಕಡಿದುಕೊಂಡ ಪಾಸ್ವಾನ್

0
417

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.5: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‍ಡಿಎ ಸಖ್ಯದಲ್ಲಿ ಬಿರುಕು ಬಿದ್ದಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್‌ರೊಂದಿಗೆ ಮೈತ್ರಿಯನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್‍ರ ಪಾರ್ಟಿ ಮೈತ್ರಿ ಕಡಿದುಕೊಂಡು ಜನತಾದಳ(ಯು) ಸ್ಪರ್ಧಿಸುವ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಯಲಿದೆ. ಮತ್ತೊಂದು ಬಾರಿ ಗೆಲ್ಲುವ ಕನಸ್ಸಿಟ್ಟುಕೊಂಡಿರುವ ಜೆಡಿಯು-ಬಿಜೆಪಿಯ ಆತ್ಮವಿಶ್ವಾಸಕ್ಕೆ ಇದು ಕುತ್ತಾಗುವ ಸಾಧ್ಯತೆಯಿದೆ.

ಎಲ್‍ಜೆಪಿ ಇಲ್ಲದಿದ್ದುದರಿಂದ ಒಟ್ಟು 243 ಸೀಟಿಗಳಲ್ಲಿ ಜೆಡಿಯು 121ರಲ್ಲಿ ಬಿಜೆಪಿ ಸ್ಪರ್ಧಿಸಲು ತೀರ್ಮಾನಿಸಿದೆ. ಬಿಜೆಪಿಯ ವಿರುದ್ಧ ಸ್ಪರ್ಧೆಗಿಲ್ಲ ಎಂದು ಪಾಸ್ವಾನ್ ಪಾರ್ಟಿ ಘೋಷಿಸಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾರ ಮಧ್ಯಸ್ಥಿಕೆ ವಹಿಸಿದರೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ರಾಮವಿಲಾಸ ಪಾಸ್ವಾನ್‍ರ ಪುತ್ರ ಚಿರಾಗ್ ಪಾಸ್ವಾನ್ ಘೋಷಿಸಿದ್ದಾರೆ. ಕೆಲವು ದಿನಗಳಿಂದ ರಾಮ್‍ವಿಲಾಸ್ ಪಾಸ್ವಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರವಿವಾರ ಅವರು ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಬಿಹಾರ ರಾಜಕೀಯದಲ್ಲಿ ಸ್ವತಂತ್ರವಾಗಿ ಸ್ಥಳ, ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದು ಚಿರಾಗ್ ಪಾಸ್ವಾನ್‍ರ ಉದ್ದೇಶವಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಯು ಮಹಾ ಸಖ್ಯದ ಜೊತೆಗಿದ್ದ ಎಲ್‍ಜೆಪಿಗೆ ಚುನಾವಣೆ ಸುಲಭದ್ದಾಗಿತ್ತು. ಆದರೆ, ಗರಿಷ್ಠ 24 ಸೀಟುಗಳನ್ನು ನೀಡಬಹುದು ಎಂದುದರಿಂದ ಸೀಟು ಹೊಂದಾಣಿಕೆ ಮುರಿದು ಬಿದ್ದಿತ್ತು. ಎಲ್‌ಜೆಪಿ 40 ಸೀಟುಗಳನ್ನು ಕೇಳಿತ್ತು.

ಇನ್ನೊಂದು ಕಡೆ ಆರ್‌ಜೆಡಿ ಕಾಂಗ್ರೆಸ್, ಎಡಪಕ್ಷಗಳ ಮಹಾ ಘಟ್‍ಬಂಧನ್ ಸೀಟು ಹಂಚಿಕೆ ಪೂರ್ಣವಾಗಿದೆ. ಆರ್‌ಜೆಡಿ 144 ಸ್ಥಾನಗಳಲ್ಲಿ, ಕಾಂಗ್ರೆಸ್ 70ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇತರರಿಗೆ 28 ಸೀಟುಗಳನ್ನು ನೀಡಲಾಗಿದೆ.