ಎನ್ಐಎ ಆರೋಪ ಪಟ್ಟಿಗೂ ಪ್ರಧಾನಿ ಹೇಳಿಕೆಗೂ ತಾಳೆಯಾಗುತ್ತಿಲ್ಲ: ಇಂಡಿಯಾ ಟುಡೇ ಲೇಖನ

0
642

ಅಭಿಷೇಕ್ ಭಲ್ಲಾ

ಕನ್ನಡಕ್ಕೆ: ಆಯಿಷತುಲ್ ಅಫೀಫಾ

ಹಿಂದೂಗಳು ಎಂದಿಗೂ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಲ್ಲವೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯು ದೇಶದ ಭಯೋತ್ಪಾದಕ ವಿರೋಧಿ ತನಿಖಾ ಸಂಸ್ಥೆಯಾದ ಎನ್ಐಎ ಆರೋಪಗಳಿಗೆ ಹೊಂದಿಕೆಯಾಗುತ್ತಿಲ್ಲ. ಎನ್ಐಎ ವೆಬ್ಸೈಟ್ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ‘ಮೋಸ್ಟ್ ವಾಂಟೆಡ್ ವಿಭಾಗವನ್ನು ಹೊಂದಿದೆ ಮತ್ತು ಇದು ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತಿತರ ವಿವಿಧ ಧರ್ಮಗಳ ಆರೋಪಿಗಳನ್ನು ಒಳಗೊಂಡಿದೆ.

ಮುಸ್ಲಿಂ ಭಯೋತ್ಪಾದಕರಿಗೆ ಹೋಲಿಸಿದರೆ ಕೆಲವು ಮಾವೊವಾದಿಗಳು ಬಂಡುಕೋರರ ಸಂಖ್ಯೆಯು ಮೀರುತ್ತದೆ.

ಮಾವೋವಾದಿ ನಾಯಕ ಲಕ್ಷ್ಮಣ್ ರಾವ್ ಅಲಿಯಾಸ್ ಗಣಪತಿ ಅವರ ತಲೆಗೆ 15 ಲಕ್ಷ ರೂ.ಮೊತ್ತವನ್ನು ಘೋಷಿಸಲಾಗಿದೆ. ಸಂಜೋತಾ ಎಕ್ಸ್ಪ್ರೆಸ್ ರೈಲು ಬಾಂಬ್ ಸ್ಫೋಟ ಮತ್ತು ಅಜ್ಮೀರ್ ನ ಮೆಕ್ಕಾ ಮಸೀದಿ ಸ್ಫೋಟದ ರಾಮಚಂದ್ರ ಕಲ್ಸಂಗ್ರಾ ಮತ್ತು ಸಂದೀಪ್ ಡಾಂಗೆ ಅವರು ಎನ್ಐಎ ಪ್ರಕಾರ “ಭಯೋತ್ಪಾದಕ ತಂಡ” ದ ಭಾಗವಾಗಿದ್ದಾರೆ ಮತ್ತು ಎರಡನೇ ಅತ್ಯುನ್ನತ ಮೊತ್ತವಾದ 10 ಲಕ್ಷ ರೂ. ನಗದು ಬಹುಮಾನವನ್ನು ಇವರಿಬ್ಬರ ಮೇಲೆ ಮತ್ತು ಇಂಡಿಯನ್ ಮುಜಾಹಿದೀನ್ ಮತ್ತು ಇತರ ಭಯೋತ್ಪಾದಕ ತಂಡಗಳ ಮೇಲೆ ಘೋಷಿಸಲಾಗಿದೆ.

ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಬಳಕೆ ಮತ್ತು ಭಯೋತ್ಪಾದನೆಯನ್ನು ಒಳಗೊಂಡಿರುವ ಎರಡೂ ಅಪರಾಧಗಳಿಗೆ ಇಬ್ಬರ ಮೇಲೂ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸನ್ನು ಜಾರಿಗೊಳಿಸಿದೆ. ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಅಸೀಮಾನಂದ ಮತ್ತು ಇತರ ಮೂವರನ್ನು ಇತ್ತೀಚೆಗೆ ಖುಲಾಸೆಗೊಳಿಸಲಾಗಿತ್ತು. ಇದರಲ್ಲಿ 68 ಜನರು ಮೃತಪಟ್ಟಿದ್ದರು. ಸಂಜೋತಾ ಪ್ರಕರಣದಲ್ಲಿ ರಮೇಶ್ ಎಂಬ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಮತ್ತು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಎನ್ಐಎ ಆತನನ್ನು ಹೆಸರಿಸಿದೆ.

ಭಯೋತ್ಪಾದನಾ ಪ್ರಕರಣವೊಂದರಲ್ಲಿ ಎನ್ಐಎ ವಾಂಟೆಡ್ ಪಟ್ಟಿಯಲ್ಲಿರುವ ಮತ್ತೊಬ್ಬ ಹಿಂದೂ ಸೊಮರಾಜ್ ಜಯ್ ಪ್ರಕಾಶ್ ಅಲಿಯಾಸ್ ಅನ್ನಾ 2009 ರ ಗೋವಾ ಮಾಲೆಂಗಾವ್ ಸ್ಫೋಟ ಪ್ರಕರಣ ಆರೋಪಿ. ಈ ಪ್ರಕರಣದಲ್ಲಿ ಆರೋಪಿಯೆಂದು ಹೆಸರಿಸಲಾಗಿರುವ ರುದ್ರ ಪಾಟೀಲ್ ಸಹ ತಲೆಮರೆಸಿಕೊಂಡಿದ್ದಾನೆ. ಇಬ್ಬರೂ ಇಂಟರ್ಪೋಲ್ ರೆಡ್ ಕಾರ್ನರ್ ನೋಟೀಸ್ ಅನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ.

ಮೋತಿಹಾರಿಯಲ್ಲಿ ರೈಲು ಪಟ್ಟಿಯಲ್ಲಿ ಪ್ರೆಶರ್ ಕುಕ್ಕರ್ ಬಾಂಬನ್ನಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಜ್ ಕಿಶೋರ್ ಗಿರಿಯನ್ನು ಹೆಸರಿಸಲಾಗಿದೆ ಮತ್ತು ಇತರ ಮೂವರು, ಮೊತಿ ಲಾಲ್ ಪಾಸ್ವಾನ್, ಉಮಾಶಂಕರ್ ಪಟೇಲ್ ಮತ್ತು ಮುಕೇಶ್ ಯಾದವ್ ಅವರನ್ನು ಮೊತಿಹಾರಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

ಸೌಜನ್ಯ: ಇಂಡಿಯಾ ಟುಡೇ