ರೈತ ಪ್ರತಿಭಟನಾ ಜಾಥಾ ದಿಲ್ಲಿಗೆ: ಬ್ಯಾರಿಕೇಡ್‌ಗಳನ್ನು ನದಿಗೆ ಎಸೆದ ರೈತರು; ಪೊಲೀಸರಿಂದ ಅಶ್ರುವಾಯು ಬಳಕೆ

0
265

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.26: ರೈತ ವಿರೋಧಿ ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆ ದಿಲ್ಲಿಗೆ ಜಾಥಾ ಹೊರಟ ರೈತರ ಮೇಲೆ ಹರಿಯಾಣ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ್ದಾರೆ. ದಿಲ್ಲಿಯ ದಾರಿಯುದ್ದಕ್ಕೂ ಪೊಲೀಸರು ತಡೆಯನ್ನು ನಿರ್ಮಿಸಿದ್ದು ಯುದ್ಧೋಪಾಧಿ ಸಿದ್ಧತೆಗಳನ್ನು ಸರಕಾರ ರೈತರನ್ನು ಎದರಿಸಲು ಮಾಡಿಕೊಂಡಿದೆ. ಹರಿಯಾಣದಲ್ಲಿ ಬಿಜೆಪಿ ಸರಕಾರದ ಇದೆ.

ನೂರಾರು ಶಸ್ತ್ರಧಾರಿ ಪೊಲೀಸರು, ಡ್ರೋಣ್ ಕ್ಯಾಮರಾದಲ್ಲಿ ನಿಗಾ ಇತ್ಯಾದಿ ಸುಸಜ್ಜಿತ ವ್ಯವಸ್ಥೆಯನ್ನು ಪೊಲೀಸ್ ಪಡೆಯು ಮಾಡಿಕೊಂಡಿದ್ದರು. ಅಂಬಾಲದಲ್ಲಿ ಪೊಲೀಸ್ ರಾಜ್ಯ ಸರಕಾರದ ನಿರ್ದೇಶದಂತೆ ರೈತರನ್ನು ಎದುರಿಸಿದರು. ಬ್ಯಾರಿಕೇಡ್‍ಗಳನ್ನು ಹಾಕಿದರು. ರೈತರು ಬ್ಯಾರಿಕೇಡ್‍ಗಳನ್ನು ನದಿಗೆ ಎಸೆದರು. ರಾಷ್ಟ್ರೀಯ ಮುಷ್ಕರ ದಿನದಲ್ಲಿ ಆರು ರಾಜ್ಯಗಳ ರೈತರು ಕೃಷಿ ಕಾನೂನು ವಿರುದ್ಧ ಪ್ರತಿಭಟನಾ ಜಾಥದೊಂದಿಗೆ ದಿಲ್ಲಿಗೆ ಹೊರಟಿದ್ದಾರೆ.

ಹರಿಯಾಣ, ಪಂಜಾಬ್, ಉತ್ತರಪ್ರದೇಶ, ಜಾರ್ಖಂಡ್, ಉತ್ತರ ಪ್ರದೇಶ ಹಾಗೂ ಕೇರಳದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ರೈತರ ರ್ಯಾಲಿಯನ್ನು ದಿಲ್ಲಿಗೆ ಬರಲು ಬಿಡುವುದಿಲ್ಲ ಎಂದು ದಿಲ್ಲಿ ಸರಕಾರ ಹೇಳಿದೆ. ಕೊರೋನ ಹಿನ್ನೆಲೆಯಲ್ಲಿ ಸರಕಾರ ಈ ತೀರ್ಮಾನ ತಳೆದಿದೆ ಎಂದು ಅದು ಹೇಳುತ್ತಿದೆ. ಆದರೆ ಟ್ರಾಕ್ಟರ್, ಟ್ರಕ್‍ಗಳಲ್ಲಿ ರೈತರು ದಿಲ್ಲಿಯತ್ತ ಸಾಗುತ್ತಿದ್ದಾರೆ. ಕಠಿಣ ಸುರಕ್ಷೆಯನ್ನು ದಿಲ್ಲಿಯಲ್ಲಿ ಏರ್ಪಡಿಸಲಾಗಿದೆ. ಗಡಿಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಂಟು ತುಕಡಿ ಅರೆಸೈನಿಕ ಪಡೆ ಗಡಿಯಲ್ಲಿ ಡೇರೆ ಹಾಕಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೆಟ್ರೋ ಸಂಚಾರವನ್ನು ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಲಾಗಿದೆ.