ಗೂಗಲ್ ಪೇಗೆ ಭಾರತದಲ್ಲಿ ಶುಲ್ಕ ಇಲ್ಲ

0
575

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.26: ಗೂಗಲ್ ಪೇ ಉಪಯೋಗಿಸಿ ಹಣ ವ್ಯವಹಾರ ನಡೆಸುವುದಕ್ಕೆ ಭಾರತದ ಬಳಕೆದಾರರಿಂದ ಯಾವುದೇ ರೀತಿಯ ಶುಲ್ಕ ಪಡೆಯುತ್ತಿಲ್ಲ ಎಂದು ಗೂಗಲ್ ತಿಳಿಸಿದೆ. ಅಮೆರಿಕದ ಬಳಕೆದಾರರಿಗೆ ಶುಲ್ಕ ಅನ್ವಯವಾಗಲಿದೆ. ಗೂಗಲ್ ಪೇಯ ನವೀಕೃತ ಆಪ್ ಮುಂದಿನ ವರ್ಷ ಬರಲಿದೆ. ಅತ್ಯಂತ ಶೀಘ್ರದಲ್ಲಿ ಹಣ ವರ್ಗಾವಣೆ ಆಗಲಿದ್ದು ಶುಲ್ಕ ವಿಧಿಸಲಾಗುವುದು ಎಂದು ಗೂಗಲ್ ಕಳೆದ ವಾರ ಹೇಳಿತ್ತು.

ಆದರೆ, ಗೂಗಲ್ ಪೇ ಶುಲ್ಕ ಈಗ ಅಮೆರಿಕಕ್ಕೆ ಮಾತ್ರ ಅನ್ವಯ ಎಂದು ಸ್ಪಷ್ಟಪಡಿಸಿದೆ. ಗೂಗಲ್ ಪೇಗೆ 6.7 ಕೋಟಿ ಬಳಕೆದಾರರು ಇದ್ದಾರೆ. ಪೆಟಿಎಂ, ವಾಲ್‍ಮಾರ್ಟಿನ ಫೋನ್ ಪೆ, ಆಮೆಝಾನ್‍ ಪೇಯೊಂದಿಗೆ ಗೂಗಲ್ ಪೇ ಪೈಪೋಟಿ ನಡೆಸುತ್ತಿದೆ.