ನಿವಾರ್ ಚಂಡಮಾರುತ: ತಮಿಳ್ನಾಡು ಪುದುಚೇರಿಯಲ್ಲಿ ಗಾಳಿ ಮಳೆ

0
379

ಸನ್ಮಾರ್ಗ ವಾರ್ತೆ

ಚೆನ್ನೈ,ನ.26: ನಿವಾರ್ ಚಂಡಮಾರುತ ತೀರಕ್ಕಪ್ಪಳಿಸಿದ್ದು ತಮಿಳ್ನಾಡು, ಪುದುಚೇರಿಯಲ್ಲಿ ಬಿರುಸಿನಿಂದ ಗಾಳಿ ಮಳೆಯಾಗುತ್ತಿದೆ. ಗಂಟೆಗಳೊಳಗೆ ಗಾಳಿಯ ತೀವ್ರತೆ ಕಡಿಮೆಯಾಗಲಿದೆ ಎಮದು ಹವಾಮಾನ ನಿರೀಕ್ಷಣಾ ಕೇಂದ್ರ ಹೇಳಿದೆ. ಇದೇ ವೇಳೆ ಉತ್ತರ ತಮಿಳ್ನಾಡಿನಲ್ಲಿ ಭಾರೀ ಮಳೆ ಮುಂದುವರಿಯಲಿದೆ. 1.5 ಲಕ್ಷ ಜನರನ್ನು 1516 ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಚಿವ ಆರ್‌.ಬಿ ಉದಯ ಕುಮಾರ್ ತಿಳಿಸಿದರು. ಕಡಲ್ಲೂರು, ನಾಗಪಟ್ಟಣಂ ಜಿಲ್ಲೆಗಳಲ್ಲಿ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಚೆನ್ನೈಯ ಮುಖ್ಯ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಚೆಂಬರಪ್ಪಾಕಂ ಸರೋವರದಿಂದ ಹೊರಗೆ ಹರಿಯುವ ನೀರಿನ ಪ್ರಮಾಣ ಹೆಚ್ಚಿದ್ದರಿಂದ ನಗರಕ್ಕೆ ನೆರೆಯ ಭೀತಿಯಿದೆ. ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ತಮಿಳ್ನಾಡಿನ 13 ಜಿಲ್ಲೆಗಳಲ್ಲಿ ಗುರುವಾರ ರಜೆ ಘೋಷಿಸಲಾಗಿದೆ.

ಗುಡಲ್ಲೂರಿನಿಂದ ಕೊಟ್ಟಕ್ಕುಪ್ಪಂ ಗ್ರಾಮದಲ್ಲಿ ರಾತ್ರೆ 11:30ಕ್ಕೆ ನಿವಾರ್ ಬಿರುಗಾಳಿ ಮಳೆ ಆರಂಭವಾಯಿತು. ಗಂಟೆಗೆ 145ಕಿ.ಮೀ ವೇಗದಲ್ಲಿ ನಿವಾರ್ ತೀರಕ್ಕಪ್ಪಳಿಸತು. ಗುಡಲ್ಲೂರಿನಲ್ಲಿ ವ್ಯಾಪಕ ಹಾನಿ ಆಗಿದೆ. ವೇದೋರಣ್ಯಂನಲ್ಲಿ ವಿದ್ಯುತ್ ಕಂಭ ಬಿದ್ದಿದೆ. ವಿಲ್ಲುಪುರಂನಲ್ಲಿ ಮನೆ ಕುಸಿದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದಾರೆ. ಹಲವು ಮರಗಳು ಬುಡಮೇಲಾಗಿ ಉರುಳಿ ಬಿದ್ದಿವೆ. ಚೆನ್ನೈ, ಪುದುಚೇರಿಯಲ್ಲಿ ಗಾಳಿ ಮಳೆ ಮುಂದುವರಿಯುತ್ತಿದೆ. ಚೆನ್ನೈಯಲ್ಲಿ ವಿದ್ಯುತ್ ಸರಬರಾಜು ಸ್ಥಂಭಿಸಿದೆ. ವಿಮಾನ ನಿಲ್ದಾಣ, ಮೆಟ್ರೋ ಬಂದ್ ಮಾಡಲಾಗಿದೆ.