ಭಯೋತ್ಪಾದಕ ಪಾರಿವಾಳ ಎಂದ ಮಾಧ್ಯಮಗಳು: ಬಂಧಿಸಲಾದ ತನ್ನ ಪಾರಿವಾಳವನ್ನು ಹಿಂದಿರುಗಿಸುವಂತೆ ಪಾಕಿಸ್ತಾನಿ ಗ್ರಾಮಸ್ಥನಿಂದ ಪ್ರಧಾನಿ ಮೋದಿಗೆ ಮನವಿ

0
807

ಸನ್ಮಾರ್ಗ ವಾರ್ತೆ

ಕಾಶ್ಮೀರ,ಮೃ.27:ಬೇಹುಗಾರಿಕೆ ಆರೋಪದ ಮೇಲೆ ಪ್ರಸ್ತುತ ಭಾರತದಲ್ಲಿ ಬಂಧಿಸಲಾಗಿರುವ ತನ್ನ ಪಾರಿವಾಳವನ್ನು ಹಿಂದಿರುಗಿಸುವಂತೆ ಪಾಕಿಸ್ತಾನದ ಗ್ರಾಮಸ್ಥನೊಬ್ಬ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾನೆ.

ಗಡಿಯಿಂದ ಕೇವಲ 4 ಕಿ.ಮೀ (2.5 ಮೈಲಿ) ದೂರದಲ್ಲಿ ವಾಸಿಸುತ್ತಿರುವ ಹಬೀಬುಲ್ಲಾ ಎಂಬ ವ್ಯಕ್ತಿಯು ಈದ್ ಹಬ್ಬವನ್ನು ಆಚರಿಸಲು ತಾನು ಸಾಕಿದ ಪಾರಿವಾಳಗಳನ್ನು ಹಾರಿಸಿದ್ದನು. ಆದರೆ ಒಂದು ಪಾರಿವಾಳವು ಪಾಕಿಸ್ತಾನದ ಗಡಿದಾಟಿ ಭಾರತವನ್ನು ತಲುಪಿತು.

ಪಾರಿವಾಳದ ಒಂದು ಕಾಲಿಗೆ ಉಂಗುರವನ್ನು ಹೊಂದಿದ್ದು, ಅದರಲ್ಲಿ ಕೋಡ್ ಇದೆ. ಅದನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಎಂದು ಭಾರತೀಯ ಪೊಲೀಸರು ಹೇಳಿಕೊಂಡಿದ್ದರು. ಆದರೆ, ಬಂಧಿತ ಪಾರಿವಾಳವು ತನ್ನದು ಎಂದು ಹೇಳಿಕೊಂಡ ಪಾಕಿಸ್ತಾನಿ ಗ್ರಾಮಸ್ಥ, ಕೋಡ್ ವಾಸ್ತವವಾಗಿ ಅವನ ಮೊಬೈಲ್ ಫೋನ್ ಸಂಖ್ಯೆ ಎಂದು ಹೇಳಿಕೊಂಡಿದ್ದಾನಲ್ಲದೇ, ಹೊಟ್ಟೆಪಾಡಿಗಾಗಿ ಪಾರಿವಾಳಗಳನ್ನು ಸಾಕಿ ಮಾರುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಪಾಕಿಸ್ತಾನದ ಡಾನ್ ಪತ್ರಿಕೆ ಈ ಹಬೀಬಿಲ್ಲಾ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಪಾರಿವಾಳಗಳು ಆತನ ಬಳಿ ಇರುವುದನ್ನು ವರದಿ ಮಾಡಿದೆ.

“ಪಾರಿವಾಳವು ಶಾಂತಿಯ ಸಂಕೇತವಾಗಿದೆ ಆದರೆ ಭಾರತೀಯ ಮಾಧ್ಯಮಗಳು ಮುಗ್ಧ ಪಕ್ಷಿಯ ಮೇಲೆ ಭಯೋತ್ಪಾಕ ಪಟ್ಟ ಹೊರಿಸುವುದನ್ನು, ಭಯೋತ್ಪಾದಕ ಪಾರಿವಾಳವೆಂದು ವೈಭವೀಕರಿಸುವುದನ್ನು ನಿಲ್ಲಿಸಬೇಕೆಂದು” ಎಂದು ಹಬೀಬುಲ್ಲಾ ಪತ್ರಿಕೆಯ ಸಂದರ್ಶನದಲ್ಲಿ ಕೇಳಿಡೊದ್ದಾರೆ.

ಭಾರತೀಯ ಆಡಳಿತದ ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಗ್ರಾಮಸ್ಥರು ಸೋಮವಾರ ಈ ಹಕ್ಕಿಯನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಪಾಕಿಸ್ತಾನದಿಂದ ಹಾರುತ್ತಿರುವ ಪಾರಿವಾಳವು ಭಾರತದ ಅಧಿಕಾರಿಗಳಿಗೆ ತೊಂದರೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕಿಂತಲೂ ಮೊದಲು 2015ರ ಮೇ ತಿಂಗಳಿನಲ್ಲಿ, ಗಡಿಯ ಸಮೀಪವಿರುವ ಹಳ್ಳಿಯೊಂದರಲ್ಲಿ 14 ವರ್ಷದ ಬಾಲಕನು ಗುರುತಿಸಿದ ನಂತರ ಬಿಳಿ ಪಾರಿವಾಳವನ್ನು ಬಂಧಿಸಲಾಗಿತ್ತು.

2016ರ ಅಕ್ಟೋಬರ್‌ನಲ್ಲಿ, ಭಾರತದ ಪ್ರಧಾನ ಮಂತ್ರಿಗೆ ಬೆದರಿಕೆ ಹಾಕುವ ಟಿಪ್ಪಣಿ ಹೊಂದಿದ್ದ ಮತ್ತೊಂದು ಪಾರಿವಾಳವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.