ರಮಝಾನ್: ಮುಸ್ಲಿಮರಿಗೆ ಸಾಮೂಹಿಕ ಪ್ರಾರ್ಥನೆ ನಡೆಸಲು ಬಾಗಿಲು ತೆರೆದ ಜರ್ಮನ್ ಚರ್ಚ್

0
1214

ಸನ್ಮಾರ್ಗ ವಾರ್ತೆ

ಜರ್ಮನಿಯು ಮೇ 4 ರಂದು ಧಾರ್ಮಿಕ ಸೇವೆಗಳನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿತು ಆದರೆ ಆರಾಧಕರು 1.5 ಮೀ (5 ಅಡಿ) ದೂರವನ್ನು ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ವಿಧಿಸಿತು.

ಇದರ ಪರಿಣಾಮವಾಗಿ ನಗರದ ನ್ಯೂಕಾಲ್ನ್ ಜಿಲ್ಲೆಯ ದಾರ್ ಅಸ್ಸಲಾಮ್ ಮಸೀದಿಯು ತನ್ನ ಸಾಮಾನ್ಯ ನಮಾಝಿಗರ ಸಂಖ್ಯೆಯ ಒಂದಂಶವನ್ನು ಮಾತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಆದರೆ, ಕ್ರೂಜ್‌ಬರ್ಗ್‌ನಲ್ಲಿರುವ ಮಾರ್ಥ್ ಲುಥೆರನ್ ಚರ್ಚ್ ರಮಝಾನ್‌ ತಿಂಗಳ ಕೊನೆಯ ಶುಕ್ರವಾರದ ಪ್ರಾರ್ಥನೆಗಳನ್ನು ನಡೆಸಲು ಚರ್ಚ್ ನ ಬಾಗಿಲು ತೆರೆದು ಸ್ಥಳಾವಕಾಶ ಮಾಡಿ ಕೊಡುವ ಮೂಲಕ ಸಹಾಯ ಹಸ್ತ ಚಾಚಿತು.

ರಮಝಾನ್ ತಿಂಗಳ ಪೂರ್ತಿ ಮುಸ್ಲಿಮರು ಮುಂಜಾನೆಯಿಂದ ಸಂಜೆಯವರೆಗೆ ತಿನ್ನುವುದು, ಕುಡಿಯುವುದು, ಧೂಮಪಾನ ಮತ್ತು ಲೈಂಗಿಕ ಕ್ರಿಯೆಯಿಂದ ಹಾಗೂ ಕೆಡುಕುಗಳಿಂದ ದೂರವಿರುತ್ತಾರೆ. ಸಾಮಾನ್ಯವಾಗಿ ಕುಟುಂಬಗಳು ಮತ್ತು ಸ್ನೇಹಿತರು ತಮ್ಮ ಉಪವಾಸವನ್ನು ತೊರೆಯಲು ಮತ್ತು ಸಾಮೂಹಿಕ ಪ್ರಾರ್ಥನೆಗಳಿಗೆ ಹಾಜರಾಗಲು ಮಸೀದಿಗಳಲ್ಲಿ ಸೇರುತ್ತಾರೆ, ಆದರೆ ಬರ್ಲಿನ್‌ನಲ್ಲಿ – ಪ್ರಪಂಚದಾದ್ಯಂತದ ದೇಶಗಳಲ್ಲಿರುವಂತೆ – ಈ ವರ್ಷದ ಆಚರಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಯಿಟರ್ಸ್‌‌‌ ಸುದ್ದಿ ಸಂಸ್ಥೆಗೆ ತಿಳಿಸಿದರು.

“ಇದು ಒಂದು ದೊಡ್ಡ ಸಂಕೇತವಾಗಿದೆ ಮತ್ತು ಇದು ರಮಝಾನ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಮಧ್ಯೆಯೂ ಸಂತೋಷವನ್ನು ತಂದಿದೆ “ಎಂದು ಮಸೀದಿಯ ಇಮಾಮ್ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು.” ಈ ಸಾಂಕ್ರಾಮಿಕ ರೋಗವು ನಮ್ಮನ್ನು ಒಂದೇ ಸಮುದಾಯವನ್ನಾಗಿ ಮಾಡಿದೆ. ಬಿಕ್ಕಟ್ಟುಗಳು ಜನರನ್ನು ಒಗ್ಗೂಡಿಸುತ್ತವೆ. ” ಎಂದು ಅವರು ಹೇಳಿದರು.

ಚರ್ಚ್ ಮತ್ತು ಮಸೀದಿಯಲ್ಲಿ ವ್ಯತ್ಯಾಸಗಳಿದ್ದರೂ, ಪ್ರಾರ್ಥಿಸಲು ನಿಂತ ಸ್ಥಳವು ಎಂತಹ ವ್ಯತ್ಯಸ್ಥತೆಯನ್ನು ಹೊಂದಿದ್ದರೂ ವಿಶ್ವಾಸಿಗಳಿಗೆ ಕೊನೆಗೂ ಅದು ದೇವನ ಭವನವಾಗುವುದು. ಎಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಸದಸ್ಯ ಸಮರ್ ಹಮ್ದಾನ್ ತಿಳಿಸಿದರು.