ಸೌದಿ ಅರೇಬಿಯ, ಇರಾನ್ ನಡುವೆ ಒಂದಕ್ಕಿಂತ ಹೆಚ್ಚು ಸಲ ಚರ್ಚೆ ನಡೆದಿದೆ: ಇರಾಕ್ ಅಧ್ಯಕ್ಷ ಬರ್‍ಹಾಂ ಸಾಲಿಹ್

0
397

ಸನ್ಮಾರ್ಗ ವಾರ್ತೆ

ಬಾಗ್ದಾದ್: ಪರಸ್ಪರ ಹಗೆತನದಿಂದ ವರ್ತಿಸುತ್ತಿರುವ ಇರಾನ್ ಮತ್ತು ಸೌದಿ ಅರೇಬಿಯಾದ ನಡುವೆ ಒಂದಕ್ಕೂ ಹೆಚ್ಚು ಸಲ ಚರ್ಚೆಗಳು ನಡೆದಿವೆ ಎಂದು ಇರಾಕ್ ಅಧ್ಯಕ್ಷ ಬರ್‍ಹಾಂ ಸಾಲಿಹ್ ಹೇಳಿದರು. ಬೈರೂತ್ ಇನ್ಸಿಟಿಟ್ಯೂಟ್ ಥಿಂಕ್-ಟ್ಯಾಂಕ್‍ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು.

ನೆರೆಯ ಎರಡು ರಾಷ್ಟ್ರಗಳ ಮಧ್ಯೆ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಆದರೂ ಇರಾಕಿ ಅಧ್ಯಕ್ಷರು ಮಾತುಕತೆಯ ನಂತರ ಬೆಳವಣಿಗೆಗಳನ್ನು ಅವರು ಥಿಂಕ್ ಟ್ಯಾಂಕ್‍ನೊಂದಿಗೆ ಹಂಚಿಕೊಂಡಿಲ್ಲ.

ಘರ್ಷಣೆಯ ಹತ್ತಿರಕ್ಕೆ ಬಂದು ನಿಂತ ಹಲವು ವರ್ಷಗಳ ಹಗೆತನದಲ್ಲಿದ್ದ ಈ ಎರಡು ದೇಶಗಳು ಮಧ್ಯಪ್ರಾಚ್ಯದಲ್ಲಿ ಅಸ್ವಾಸ್ಥ್ಯ ಕಡಿಮೆ ಮಾಡುವ ಉದ್ದೇಶದಿಂದ ಮತ್ತು ಸಂಬಂಧ ಮೇಲೆ ಕವಿದಿರುವ ಮಬ್ಬನ್ನು ತಿಳಿಗೊಳಿಸುವ ಉದ್ದೇಶದಿಂದ ಚರ್ಚೆಗೆ ಮುಂದೆ ಬಂದಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಪರಸ್ಪರ ಶತ್ರುತ್ವದ ನೆರೆಯ ದೇಶಗಳು ಎಪ್ರಿಲ್ 9ಕ್ಕೆ ಪರಸ್ಪರ ಚರ್ಚಿಸಿದ ಕುರಿತ ವರದಿಗಳು ಈ ಹಿಂದೆ ಬಂದಿದ್ದವು. ಇರಾನ್ ಮತ್ತು ಸೌದಿಯ ನಡುವೆ ಇರಾಕ್ ಎಷ್ಟು ಬಾರಿ ಚರ್ಚೆ ನಡೆದಿದೆ ಎಂಬ ಪ್ರಶ್ನೆಗೆ ಒಂದಕ್ಕೂ ಹೆಚ್ಚು ಸಲ ಈ ಚರ್ಚೆ ನಡೆದಿದೆ ಎಂದು ಇರಾಕ್ ಅಧ್ಯಕ್ಷ ಅಧ್ಯಕ್ಷ ಬರ್‍ಹಾಂ ಸಾಲಿಹ್ ಹೇಳಿದರು.