ಕೊರೋನಾ ಮುಕ್ತರೆಂದು ಸಾಬೀತು ಪಡಿಸುವುದಕ್ಕೆ ದಾಖಲೆಪತ್ರಗಳ ಅಗತ್ಯವಿಲ್ಲ; ತವಕ್ಕಲ್‌ನಾ ಆ್ಯಪ್ ಸಾಕು- ಸೌದಿ

0
220

ಸನ್ಮಾರ್ಗ ವಾರ್ತೆ

ಕೊರೋನಾ ಮುಕ್ತರೆಂಬುದನ್ನು ಸಾಬೀತು ಪಡಿಸುವುದಕ್ಕೆ ಸೌದಿ ಅರೇಬಿಯಾದಲ್ಲಿ ತವಕ್ಕಲ್‌ನಾ ಎಂಬ ಮೊಬೈಲ್ ಆ್ಯಪ್‌ನ್ನು ಸರಕಾರ ಪರಿಚಯಿಸಿದೆ.

ಕೊರೋನಾದ ಹಿನ್ನೆಲೆಯಲ್ಲಿ ವಿವಿಧ ಅಗತ್ಯಗಳಿಗಾಗಿ ಜನರು ಈ ಆ್ಯಪ್‌ಅನ್ನು ಬಳಸಬಹುದಾಗಿದೆ ಎಂದು ಸೌದಿ ಆರೋಗ್ಯ ಇಲಾಖೆಯು ತಿಳಿಸಿದೆ.

ಸಾರ್ವಜನಿಕ ಸಂಸ್ಥೆಗಳು, ರಖಂ ಮತ್ತು ಚಿಲ್ಲರೆ ವ್ಯಾಪಾರ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು, ಕೆಫೆಗಳು, ಮಾರುಕಟ್ಟೆಗಳು ಸಹಿತ ಎಲ್ಲಾ ಸ್ಥಳಗಳಲ್ಲಿಯೂ ಈ ಆ್ಯಪ್‌ನ್ನು ತೋರಿಸಿ ತಾವು ಕೊರೋನಾ ಮುಕ್ತರೆಂಬುದನ್ನು ಜನರು ಸಾಬೀತುಪಡಿಸಬಹುದಾಗಿದೆ. ಮತ್ತು ಅದಕ್ಕಾಗಿ ದಾಖಲೆಪತ್ರಗಳ ಅಗತ್ಯವಿಲ್ಲ ಎಂದು ಸೌದಿ ಆರೋಗ್ಯ ಇಲಾಖೆ ತಿಳಿಸಿದೆ.